ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ

ಒಬ್ಬ ಹಿರಿಯ ವೈದ್ಯರು ಹೇಳುತ್ತಾರೆ “ನಾವು ಹತ್ತು ರೂಪಾಯಿ ಕಿಲೋ ಟೊಮೇಟೊ ಖರೀದಿಸಿ ತಾಜಾ ಚಟ್ನಿ ಮಾಡಿಕೊಂಡು, ಪಲ್ಯ, ಸಾರು ಮಾಡಿಕೊಂಡು ತಿನ್ನಬಹುದು. ಆದರೆ, ನಾವು ಎರಡು ತಿಂಗಳು ಹಿಂದೆ ತಯಾರಾದ ಕಿಲೋಗೆ 150 ರೂಪಾಯಿ ಟೊಮೇಟೊ ಸಾಸ್ ತಿನ್ನುತ್ತೇವೆ. 

ಮೊದಲು ನಾವು ಮಡಿಕೆಯಲ್ಲಿ ತುಂಬಿಟ್ಟ ಒಂದು ದಿನದ ನೀರನ್ನು ಕುಡಿಯುತ್ತಿರಲಿಲ್ಲ. ಆದರೆ, ಮೂರು ತಿಂಗಳು ಹಿಂದೆ ತುಂಬಿಸಿದ ಬಾಟಲಿ ನೀರನ್ನು 20 ರೂಪಾಯಿ ಕೊಟ್ಟು ಖರೀದಿಸಿ ಕುಡಿಯುತ್ತೇವೆ 

ಐವತ್ತು ರೂಪಾಯಿ ಲೀಟರ್ ಹಾಲು ನಮಗೆ ತುಟ್ಟಿ ಎನಿಸುತ್ತದೆ. ಆದರೆ, ಎಪ್ಪತ್ತು ರೂಪಾಯಿ ಕೊಟ್ಟು ಎರಡು ತಿಂಗಳು ಹಿಂದೆ ತಯಾರಾದ ಕೋಲ್ಡ್ ಡ್ರಿಂಕ್ಸ್ ನಮಗೆ ಅದೆಷ್ಟು ರುಚಿ ರುಚಿ. 

ಎರಡು ನೂರು ರೂಪಾಯಿಗೆ ಕಾಲು ಕೆಜಿ ಸಿಗುವ, ಶರೀರಕ್ಕೆ ಪೋಷಣೆ ನೀಡುವ ಒಣ ಹಣ್ಣುಗಳು (ಡ್ರೈ ಫ್ರೂಟ್ ) ನಮಗೆ ತುಟ್ಟಿ ಎನಿಸುತ್ತದೆ, ಬಾಯಿಗೆ ರುಚಿ ಅನಿಸುವುದಿಲ್ಲ ಆದರೆ, ಮೈದಾದಿಂದ ತಯಾರಾದ, ಶರೀರಕ್ಕೆ ಪ್ರಯೋಜನವಿಲ್ಲದ 400 ರೂಪಾಯಿಯ ಪಿಜ್ಜಾವನ್ನು ನಾವು ಅತ್ಯಂತ ಹೆಮ್ಮೆಯಿಂದ ತಿನ್ನುತ್ತೇವೆ. 

ಮನೆಯಲ್ಲಿ ಬೆಳಿಗ್ಗೆ ಮಾಡಿದ ಅಡುಗೆಯನ್ನು ಸಂಜೆ ತಿನ್ನಲು ನಾವು ಒಲ್ಲೆವು. ಆದರೆ, ಕಂಪನಿಯ ಹೆಸರಿನ ಆರಾರು ತಿಂಗಳಿನ ಆಹಾರ ಪದಾರ್ಥಗಳನ್ನು ಅವು ಪ್ರಿಸರ್ವೇಟಿವ್ ಗಳಿಂದ ಕೂಡಿವೆ ಎಂದು ಗೊತ್ತಿದ್ದರೂ ಖುಷಿ ಪಟ್ಟು ತಿನ್ನುತ್ತೇವೆ." 

ಕೊರೋನಾ ಲಾಕ್ ಡೌನ್ ಬಹುಜನರಿಗೆ ಪಾಠ ಕಲಿಸಿದೆ, ಹೊರಗಿನ ಪದಾರ್ಥಗಳನ್ನು ತಿನ್ನದಿದ್ದರೂ ಜೀವನ ನಡೆಯುತ್ತದೆ, ನಡೆಯುತ್ತದೆ ಮಾತ್ರವಲ್ಲ ಬಹು ಚೆನ್ನಾಗಿ ನಡೆಯುತ್ತದೆ. 

ಹಳೆಯ ಪದ್ಧತಿ ಜೀವನ ಪದ್ಧತಿ. ಅದನ್ನು ಅನುಸರಿಸುವವರನ್ನು ಹಂಗಿಸಬೇಡಿ. ಬದಲಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ನೀವೂ ಭಾರತೀಯ ಆಹಾರ ಪದ್ಧತಿಯನ್ನು, ಅನುಸರಿಸಿ ಆರೋಗ್ಯವಾಗಿರಿ, ಆನಂದವಾಗಿರಿ, ಆಯುಷ್ಯವಂತರಾಗಿರಿ. ಆರೋಗ್ಯವೇ ಭಾಗ್ಯವೆಂದರಿಯಿರಿ.

(ಆಧಾರ)

ಚಿತ್ರ: ಇಂಟರ್ನೆಟ್ ತಾಣ