ಆಲೂ ದಹಿ ಚಾಟ್

ಆಲೂ ದಹಿ ಚಾಟ್

ಬೇಕಿರುವ ಸಾಮಗ್ರಿ

ಚಿಕ್ಕ ಗಾತ್ರದ ಆಲೂಗೆಡ್ಡೆ (ಬಟಾಟೆ)- ೫, ಮೊಸರು - ೨ ಕಪ್, ಸಿಹಿ ಚಟ್ನಿ - ೩ ಚಮಚ, ಜೀರಿಗೆ ಹುಡಿ - ೨ ಚಮಚ, ಕಾಳುಮೆಣಸಿನ ಹುಡಿ - ೩ ಚಮಚ, ಚಟ್ ಮಸಾಲೆ - ೩ ಚಮಚ, ಮೊಳಕೆ ಬರಿಸಿದ ಕಾಳುಗಳು - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೩ ಚಮಚ, ಖಾರಾ ಸೇವ್ - ೧ ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು, ಮೊಳಕೆ ಬರಿಸಿದ ಕಾಳುಗಳು, ಖಾರಾ ಸೇವ್ ಹಾಕಿದರೆ ರುಚಿ ರುಚಿಯಾದ ಆಲೂ ದಹಿ ಚಾಟ್ ಸವಿಯಲು ರೆಡಿ. ಸಿಹಿ ಚಟ್ನಿ ಇಲ್ಲವಾದರೆ ಟೊಮೆಟೋ ಸಾಸ್ ಬಳಸಬಹುದು. (ಸಣ್ಣ ಗಾತ್ರದ ಬೇಬಿ ಪೊಟಾಟೋ (ಆಲೂಗೆಡ್ಡೆ) ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಬಳಸಬಹುದು)