ಆಲ ಅಳಿಯಿತೇನು?

ಆಲ ಅಳಿಯಿತೇನು?

ಕವನ

ನೆರಳ ನೀಡಿದ ಆಲವೇ ಅಳಿದರೆಂತು?

ನೆರಳ ಅಪ್ಪುಗೆ ಮರೆಯಾಗಿ ಬದುಕುವುದೆಂತು?

ಬೆಟ್ಟದ ಹೂವು ಕಳಚಿ ಮರೆಯಾದರೆಂತು?

ರಾಜ ರತ್ನವೇ ಸೊಬಗ ಕಳಚಿದರೆಂತು?

 

ಆಡುತಾ ನಲಿಯುತಾ ಸಾಗಿದ ಗೊಂಬೆ

ವಿಧಿಯ ಯಾವ ದಾಳಕೆ ನಿಂತು ಉರುಳಿತು?

ಯಾವ ರಾಗದ ಯಾವ ದನಿಯ ಪದವೂ

ಗೊಂಬೆಯ ಮತ್ತೆ ಕುಣಿಯುವಂತೆ ಮಾಡದಾಯಿತೇನು?

 

ಕೋಟಿ ಕಂಗಳ ಕಂಬನಿಗೆ ಉತ್ತರವೇನು?

ಅಭಿಯ ಅಭಿಲಾಷೆ ತಲುಪದ ಗಗನದಂತಾಯಿತೇನು?

ಬರಿಯ ಪ್ರೆಶ್ನೆಗಳಿಗೆ ಜೀವವ ನೀಡಿದೆ ಜೀವ 

ಉತ್ತರಿಸದೇ ಕಿರಣಗಳ ಉಳಿಸಿ ಆರಿತೇನು?

 

ಕೋಟಿಯ ಆಟವ ಆಡಿಸಿದ ಒಲವ ಜೀವ

ಪ್ರೀತಿಯ ಕೋಟೆಯ ಕಟ್ಟಿ ಮೌನವಾಯಿತೇನು?

ರಾಜನಿಲ್ಲದ ಕೋಟೆಗೆ ಅಭಿಮಾನಿಯೇ ಅರಸ

ಅಳಿಯದು ರಾಜ್ಯ ಸಾಗುವುದು ನೂರು ವರುಷ!!

 

ಆಲದ ಕುಡಿಯದರೂ ಬೀಗಿ ಬಾಳದ ಜೀವ

ಬಾಗಿ ಸಾಗಿತು ಅಭಿಮಾನಕೆ ಅನವರತ ಸೋತು

ಮಿಂಚಂತೆ ಮೂಡಿ ಮರೆಯಾಗಿ ಕಾಡಿತು

ಬರುವ ಮಳೆಗೆ ಅಭಿಮಾನಿ ಹೃದಯ ಕನವರಿಸಿತು.

 

-ನಿರಂಜನ ಕೇಶವ ನಾಯಕ, ಮಂಗಳೂರು

ಚಿತ್ರ್