ಆಳ್ ಮತ್ತು ಆೞ್

ಆಳ್ ಮತ್ತು ಆೞ್

Comments

ಬರಹ

ಆಳ್ ಮತ್ತು ಆೞ್ ಈ ಎರಡೂ ಬೇಱೆ ಬೇಱೆ ಅರ್ಥಗಳಲ್ಲಿ ಬೞಸಲ್ಪಡುವ ಪದಗಳು
ಆಳ್=ನಾಮಪದವಾದಾಗ ಸೇವಕ ಆಳು. ಕ್ರಿಯಾಪದವಾದಾಗ ಅಧಿಕಾರವಹಿಸು, ರಾಜ್ಯಭಾರ ನಡೆಸು. ಅವನ ಮನೆಯಲ್ಲಿ ಮನೆಯಾಳ್ತನ ಅವನ ಹೆಂಡತಿಯದೇ ಇತ್ಯಾದಿ. ಭೂತಕಾಲದ ರೂಪ ಆಳ್ದು (ಹೞಗನ್ನಡ) ಆಳಿ=ಹೊಸಗನ್ನಡ. ಭವಿಷ್ಯದ್ರೂಪ=ಆಳ್ವ/ಆಳುವ.

ಎರಡನೆಯ ಆೞ್=ಮುೞು(೦)ಗು. ನೀರಿನಲ್ಲಿ /ದ್ರವದಲ್ಲಿ ಮುೞುಗು. ಭೂತರೂಪ ಹೞಗನ್ನಡದಲ್ಲಿ ಅೞ್ದು. ನಡುಗನ್ನಡ/ಹೊಸಗನ್ನಡದಲ್ಲಿ ಅದ್ದು. ರಾಘವಾಂಕನ ಹರಿಶ್ಚಂದ್ರನ ಕಾವ್ಯದಲ್ಲಿ ಕಾಡಿಗೆ ಹೋದ ಲೋಹಿತಾಶ್ವ ಬಾರದಿದ್ದಾಗ ಆತನ ತಾಯಿ ಚಂದ್ರಮತಿ ಮಗನ ಕುಱಿತು ಚಿಂತಿಸುವಾಗ "ನೀರೊಳದ್ದನೊ"=ನೀರಲ್ಲಿ ಮುೞುಗಿದನೋ ಎಂದು ಹಲುಬುತ್ತಾಳೆ. ಭವಿಷ್ಯದ್ರೂಪ: ಆೞ್ವ/ಆೞುವ(ಹೊಸಗನ್ನಡದಲ್ಲಿ ಆಗಬಹುದೇನೋ).
ಇದಱ ಕೃದಂತ ಭಾವನಾಮ=ಆೞ=ಮುೞುಗುವಷ್ಟು ಆೞ. (ಆೞ=depth).

ತಮಿೞರಲ್ಲಿ "ಆೞ್ವಾರ್ " ಎಂಬ ವಿಷ್ಣುಭಕ್ತರ ಪರಂಪರೆಯೇ ಇದೆ. ಇವರೂ ಭಗವದ್ಭಕ್ತಿಯಲ್ಲಿ ಮುೞುಗುವವರು.
ಆೞ್ವಾರ್=ಕನ್ನಡದಲ್ಲಿ ಆೞ್ವರ್=ಆೞ್ವೊರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet