ಆಶಯ

ಆಶಯ

ಬರಹ

ನುಸುಳಿ ಬರುವ ಚೈತ್ರ ಚಿಗುರು

ಸೂಸಿ ತರಲಿ ಸವಿ ಸುಖದ ತಂಪೆಲರು

ಅಳಿಸಿ ಮನದ ಹೊಲಸು ಬಾವ

ಉಳಿಸಿ ಬಿಡಲಿ ಚಿರವಾಗುವಂತೆ ಜೀವ

ಮರೆಸಿ ಬಾಳಿನೆಲ್ಲ ನೋವ

ಸುರಿಸಿ ಬದುಕಲ್ಲಿ ಸಂತಸವ

ಬೆರೆಸಿ ಬದುಕಲ್ಲಿ ಅರಿವ ಗುರುವ

ಇಣುಕುತಿರುವ ಮುಂಗಾರು ಮಳೆ

ತೊಳೆದು ಬಿಡಲಿ ಮೈ ಮನದ ಕೊಳೆ

ಬೆಳೆದು ನಿಲ್ಲಲಿ ಎಲ್ಲಕಡೆ ಜ್ನಾನದ ಬೆಳೆ

ಮನದಲಿರುವ ಮತ,ಧರ್ಮಗಳ ಜಿಡ್ಡತೊಳೆ

ಜಗದಿ ಇರುವುದೆರಡು ಹೆಣ್ಣು-ಗಂಡು

ಜೊತೆಗೆ ಬೆರೆತು ಸಂತಸವ ಉಂಡು

ಜೀವನದ ಅರ್ಥವನ್ನು ಜನತೆ ಕಂಡು

ಬದುಕಿದರೆ ಬಾಳು ಬಂಗಾರದ ತುಂಡು

ಅರಿತು ಅಣ್ಣತಮ್ಮಂದಿರಂತೆ ನಡೆದರೆ ದಂಡು

ಮರೆತು ಬಿಡಬಹುದು ಕೊರ್ಟು,ಕಛೇರಿ,ಪೌಂಡು

ಅಕ್ಕಪಕ್ಕದ ಹೆಣ್ಣಕಂಡು ಅಕ್ಕತಂಗಿಯೆಂದುಕೊಂಡು

ಚಿಕ್ಕ ಚಿಕ್ಕ ಮಕ್ಕಳಲ್ಲೇ ಬೆಳೆಸಬೇಕು ಪ್ರೀತಿ,ಓಲವ ಬ್ರಾಂಡು

ಅನುಸರಿಸಬೇಕು ಅನ್ಯರೆಲ್ಲ ನಮ್ಮ ಒಲವು-ಗೆಲುವು ಕಂಡು

ಎಷ್ತು ಕೂಡಿಟ್ಟರೇನು ಆಸ್ತಿ ಹಣ

ಒಂದಿಷ್ಟೂ ಇರದಮೇಲೆ ಮಿದುಳಲ್ಲಿ ಜ್ನಾನ

ಬದುಕಲು ಇದುವೆ ಮನಿಜಗೆ ದಿವ್ಯ ಸಾದನ

ಇದುವೆ ಸಂಪದ ಓದುಗರಿಗೆ ನನ್ನ ಆಶಯ ಕವನ

-ವಿ ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ