ಆಶಾವಾದಿ
ಕವನ
ಬರುವ ನೆನಪ ಕರೆದು ಕರೆದು ಎಳೆದು ತಂದೆ ಮನಸಿಗೆ
ಮರೆಯಲಾರೆ ಇರಲಿ ಎಲ್ಲ ದಿನನಿತ್ಯದ ಕೊರಗಿಗೆ
ದೂರ ಚಂದ್ರ ನಗುತಿರುವನು ನನ್ನ ಹುಚ್ಚು ರೀತಿಗೆ
ನಕ್ಕರೇನು ನಲಿದರೇನು ಇರುವೆ ನನ್ನ ಪಾಡಿಗೆ
ಹೀಗೆ ಹೀಗೆ ಹೀಗೆ ಬರೆದು ಮುಗಿದವೆಷ್ಟು ಪುಟಗಳು
ಹೀಗೆ ಹೀಗೆ ಹೀಗೆ ಮುಗಿದು ಹೋದವೆಷ್ಟು ದಿನಗಳು
ಅಕ್ಕದವರು ಪಕ್ಕದವರು ಟೀಕಿಸುವರು ನನ್ನನು
ಮುಟ್ಟಿ ಮುಟ್ಟಿ ನೀವುತಿರುವೆ ಗಾಯಗೊಂಡ ಮನಸನು
ಬಂದರು ಬಂದಾವೆಯೇ ಕಳೆದು ಹೋದ ದಿನಗಳು
ಹೀಗೇ ಮುಗಿದು ಹೋಗಲಿವೆಯೆ ಬದುಕಿನ ಮುಂದಿನಗಳು
ಆಸೆ ಹೊತ್ತು ಕಾಯುತಿಹೆನು ಬರಲಿರುವ ವಸಂತಕೆ
ಆಗಲಾದ್ರೂ ಚಿಗುರೀತೆ ನನ್ನ ಮನದ ಮಲ್ಲಿಗೆ.