ಆಶು ಕವಿತೆಯ ಶಾಪ ಗ್ರಸ್ತನು ಈ ಹುಳು ಮಾನವ
ಕವನ
ಆಶು ಕವಿತೆಯ ಶಾಪ ಗ್ರಸ್ತನು ಈ ಹುಳು ಮಾನವ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸರಸ್ವತಿ ಅವರೇ
ನನ್ನ ಕಾವ್ಯ ಸುಂದರಿಗೆ ಸ್ವಲ್ಪ ಆತುರ;
"ಹಿಡಿದು ಕೊಳ್ಳೋಣವೇ, ಬಹಳ ಭದ್ರವಾಗಿ ಅಪ್ಪಿ, ಮುದ್ದಿಟ್ಟು, ತಣಿಸಿ, ತಣಿಯೋಣವೇ " ಎನ್ನುವಷ್ಟರಲ್ಲಿ ಕಳಚಿ ಓಡಿ ಬಿಡುತ್ತಾಳೆ.
ಓದುಗರತ್ತ ಅವಳ ಕಣ್ಣೆಲ್ಲಾ; ಆಶು ಕವಿತೆಯ ಶಾಪ ಗ್ರಸ್ತನು ಈ ಹುಳು ಮಾನವ!
ನಿಮ್ಮ ಹೆಸರೇ ಸರಸ್ವತಿ. ನಿಮ್ಮ ಎಜಮಾನರು, ಅಂದರೆ ಬ್ರಹ್ಮ, ವರ-ಶಾಪಗಳನ್ನು ಅವಳಿ-ಜವಳಿಯಾಗಿ ಹುಟ್ಟಿಸುವುದೇಕೆ?