ಆಸಾಯಕತೇ

Submitted by Harish S k on Mon, 09/17/2018 - 14:07

ನಾವು ನೂರು ಸಿನಿಮಾ ನೋಡುತ್ತಿವಿ , ಮರೆತು ಬಿಡುತ್ತಿವಿ , ಆದರೆ ಯಾವುದಾದರು ಒಂದು ಸಿನಿಮಾದ ಕಥೆ ನಮ್ಮ ಜೀವನದಲ್ಲಿ ನಡೆದರೆ ಅದರ ಭಾವ ಅದರ ನೋವು ನಮ್ಮಗೆ ತಿಳಿಯೋದು. ನನಗು ಅಂತಹದೇ ಅನುಭವ ಆಯಿತು, ಇದ್ದನ ಹೇಗೆ ಹೇಳೋದು ಗೋತ್ತಿಲ್ಲ.
ನಾನು ಶೀಲಾ , ಪ್ರತಾಪ ಮತ್ತೆ ಇನ್ನು ಕೆಲವು ಸ್ನೇಹಿತರು , ಶೀಲಾ ಲೀಡರ್ಶಿಪ್ ನಲ್ಲಿ ಒಂದು ಸಾಮಜಿಕ ಸಂಸ್ಥೆ ನಡಿಸುತ್ತಾ ಇದ್ವಿ. ಒಂದು ದಿನ ನಾನು ಶೀಲ ಆಫೀಸ್ ಅಲ್ಲಿ ಇದ್ದಾಗ.
ಆಫೀಸ್ ಡೋರ್ ಬೆಲ್ ಆಯಿತು. ನಾನು ಹೋಗಿ ಬಾಗಿಲು ತೆಗೆದೇ. ಒಬ್ಬ ಮಧ್ಯ ವಯಸ್ಸಿನ ಗಂಡಸು ಮತ್ತೆ ಮಧ್ಯ ವಯಸ್ಸಿನ ಹೆಂಗಸು ಬಾಗಿಲ ಬಳಿ ನಿಂತ್ತಿದರು. ನಾನು ನಗುತ್ತ ಒಳ್ಳಗೆ ಬನ್ನಿ ಅಂತ ಹೇಳಿದರು. ಶೀಲ ಇದ್ದ ಟೇಬಲ್ ಬಳಿ ಕರೆದುಕೊಂಡು ಹೋದೆ.

ಶೀಲಾ ನನ್ನಗೆ ಕೈ ಸನ್ನೆ ಮಾಡಿ ಚೇರ್ ತರೋಕ್ಕೆ ಹೇಳಿದರು. ನಾನು ಬಂದವರಿಗೆ ಚೇರ್ ಹಾಕಿ ಶೀಲಾ ಪಕ್ಕಕ್ಕೆ ಹೋಗಿ ನಿಂತೇ.
ಶೀಲಾ "ಹೇಳಿ ಸರ್ ನೀವು ಯಾರು , ಏನಗಬೇಕಿತು"

"ನಾನು ಸುಧಾಕರ್ ಮೇಡಂ, ಈಕೆ ನರಸಮ್ಮ ನಮ್ಮ ಮನೆಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ , ಈಕೆ ಗೆ ಮೂರು ಜನ ಹೆಣ್ಣು ಮಕ್ಕಳು , ಗಂಡ ಇಲ್ಲ , ಬೇರೆ ಯಾರು ಇವರಿಗೆ ಇಲ್ಲ , ಅಲೆಮಾರಿ ವಂಶಸ್ಥರು , ಈಕೆ ಮೊದಲನೇ ಮಗಳನ ಇವರ ಗುಂಪಿನಲ್ಲಿ ಇರೋ ಒಬ್ಬ ಹುಡುಗನಿಗೆ ಕೊಟ್ಟು ಮಾಡುವೆ ಮಾಡಿದ್ದಾರೆ , ಇನ್ನೊಬ್ಬ ಮಗಳು ಮೂರು ವರುಷದ ಹಿಂದೆ ಬ್ಯಾಂಗಲೋರ್ ಗೆ ಬಂದಿದ್ದಾಳೆ , ಮೂಲತಃ ಈಕೆ ಕಲ್ಲುಬುರ್ಗಿ ಕಡೆಯವರು"

"ಸರಿ ಇವಾಗ ನಮ್ಮಿಂದ ಏನು ಆಗಬೇಕು ಹೇಳಿ ಸರ್ "

"ಹೇಳುತ್ತೀನಿ , ಈಕೆಯ ಎರಡನೆಯ ಮಗಳು ಎಲ್ಲಿ ಇದ್ದಾಳೆ , ಏನು ಕೆಲಸ ಮಾಡುತ್ತಾಳೆ ಅಂತ ಗೊತ್ತಿಲ್ಲ , ಆದರೆ ಅವಾಗವಾಗ ಈಕೆ ಗೆ ಫೋನ್ ಮಾಡಿ , ನಾನು ಚೆನ್ನಾಗಿ ಇದೀನಿ ಅಂತ , ಯಾವುದೊ ಲೇಡೀಸ್ ಹಾಸ್ಟೆಲ್ ನಲ್ಲಿ ಇದ್ದೀನಿ ಅಂತ ಅಡ್ರೆಸ್ ಕೊಟ್ಟಿದ್ದಾಳೆ , ಆದರೆ ಅಲ್ಲಿ ಆಕೆ ಇಲ್ಲ , ಆಕೆ ಹೆಸರು ಸಂಗೀತ , ನೋಡಿ ಇದೆ ಆ ಅಡ್ರೆಸ್ " ಅಂತ ಜೆಬ್ಬಿಂದ ಒಂದು ಪೇಪರ್ ಕೊಟ್ಟರು. ಶೀಲಾ ಪೇಪರ್ ತಗೊಂಡು ನನ್ನ ಕೈ ಗೆ ಕೊಟ್ಟರು.
"ನೋಡೋ ಹರಿ , ನಿನ್ನಗೆ ಆ ಅಡ್ರೆಸ್ ಗೊತ್ತ ಅಂತ " ಅಂತ ನನ್ನ ನೋಡುತ್ತಾ ಹೇಳಿದರು.
ನಾನು ಆ ಅಡ್ರೆಸ್ ನೋಡಿ "ಶೀಲಾ ಬಾ , ಆ ಕಡೆ ಹೋಗಿ ಮಾತು ಆಡೋಣ " ಅಂತ ಕರೆದೆ. ಶೀಲಾ ಸರಿ ನಡಿ ಅಂತ ಹೇಳಿ "ಒಂದು ನಿಮಿಷ ಬರ್ತಿವಿ" ಅಂತ ಹೇಳಿ ನನ್ನ ಜೊತೆ ಮುಂದಕ್ಕೆ ಬಂದರು.
"ಲೇ ಹರಿ , ಏನ್ನೋ ಅದು , ಅಲ್ಲೇ ಹೇಳೋಕ್ಕೆ ಆಗೋಲ್ಲವಾ, ಯಾಕೋ ಏನು ಆಯಿತು"
"ಇರು ಶಿಲು , ಯಾಕೆ ಅಷ್ಟು ಕೋಪ , ಕೇಳು ಇಲ್ಲಿ , ಅವರು ಕೊಟ್ಟ ಅಡ್ರೆಸ್ ನಲ್ಲಿ ಆ ಹುಡುಗಿ ಇರೋದು ಡೌಟ್ , ಆಕೆ ಇರೋ ಜಾಗ ಬೇರೆ"
"ಅಂದರೆ" ಅಂತ ಹೇಳುತ್ತಾ ಲಿಪ್ ಗಾರ್ಡ್ ತೆಗೆದು ಕೊಂಡು ಹಚ್ಚಿ ಕೊಳೋಕ್ಕೆ ಶುರು ಮಾಡಿದಳು.
"ಅಂದರೆ , ಆಕೆ ಇರೋ ಜಾಗ.. ಹ್ಮ್ಮ್.. "
"ಒಹ್ ಇದು ಆ ಕೇಸ್ ಅಂತಿಯಾ"
"ಹು ಕಣೋ ಇದು ಆ ಕೇಸ್"
"ಸರಿ ಏನ್ನೋ ಮಾಡೋದು ಇವಾಗ , ಅವರಿಗೆ ಇರೋ ವಿಷಯ ಹೇಳಿಬಿಡೋದ"
"ಗ್ಯಾರಂಟೀ ಆಗದೆ ಏನು ಹೇಳುತಿಯ , ಆಮೇಲೆ ನಾವು ಅಂದುಕೊಂಡ ಹಾಗೆ ಇಲ್ಲ ಅಂದರೆ, ತಪ್ಪು ಆಗುತ್ತೆ ಕಣೋ"
"ನೀನು ಹೇಳೋದು ಸರಿ ಕಣೋ , ನೀನು ಒಂದು ಕೆಲಸ ಮಾಡು , ಅವಳನ ಪತ್ತೆ ಮಾಡು"
"ಸರಿ , ನಾಳೆ ಸಾಯಂಕಾಲ ಬರೋಕ್ಕೆ ಹೇಳು , ಇವತ್ತೇ ಆಕೆನ ಹುಡುಕಿ ನೋಡಿ ಕೊಂಡು ಬರ್ತ್ತಿನಿ"
"ಸರಿ ಹಾಗೆ ಮಾಡು, ಹುಷಾರು , ಕಾರ್ ತಗೊಂಡು ಹೋಗು , ವಾಟ್s ಅಪ್ ನಲ್ಲಿ ಸದಾ ಇರು , ಅಪ್ಡೇಟ್ ಕೊಡುತ್ತ ಇರು , ನನ್ನಗೆ ಭಯ ಆಗುತ್ತಾ ಇದೆ , ನಿನ್ನ ಕಳಿಸೋಕ್ಕೆ"
"ಬಿಡು ಹೆದರ ಬೇಡ".

ಶೀಲಾ ಹೋಗಿ ಅವರಿಬ್ಬರನ ನಾಳೆ ಬರೋಕ್ಕೆ ಹೇಳಿ ಕಳಿಸಿದಳು. ನಾನು ಆಕೆ ಇದ್ದ ನಿಜವಾದ ಅಡ್ರೆಸ್ ಗೆ ಹೋದೆ. ಅವರು ಕೊಟ್ಟ ಅಡ್ರೆಸ್ ಫೇಕ್ ಅಂತ ನನ್ನಗೆ ತಿಳಿಯಿತು. ಹಾಗಾಗಿ ನಾನು ಆಕೆ ಇರಬಹುದಾದ ನಿಜವಾದ ಅಡ್ರೆಸ್ ಗೆ ಸಂಜೆ ೬ ಕೆ ಹೋದೆ , ನಾನು ಆ ಅಡ್ರೆಸ್ ಇದ್ದ ಬಿಲ್ಡಿಂಗ್ ಇಂದ ಸುಮ್ಮರು ಅರ್ಧ ಕಿಲೋಮೀಟರು ದೂರ ನಿಂತು ಆಕೆ ಗೆ ಬರ ಹೇಳಿದೆ.
ಸ್ವಲ್ಪ ಸಮಯದಲ್ಲೇ ಒಬ್ಬಳು ಸಾಮಾನ್ಯ ಮೈಕಟ್ಟು ಹೊಂದಿದ್ದ ಹುಡುಗಿ ನನ್ನ ಕಾರ್ ಹತೀರಕ್ಕೆ ಬಂದಳು. ಕೆದರಿದ ತಲೆ , ಬೆವರುತಿದ್ದ ಮುಖ , ಸಣ್ಣ ಗಾಯ ವಾಗಿದ ತುಟ್ಟಿಗಳು , ತೇವ ವಾಗಿದ ಎದೆ , ಆಕೆಯಾ ಸ್ಥಿತಿ ಹೇಳುತ್ತಾ ಇತ್ತು. ಆಕೆಯ ಕಷ್ಟ ಆಕೆಯ ಕಣ್ಣುಗಳು ತಿಳಿಸುತ್ತ ಇತ್ತು. ಆಕೆಯ ನ ನೋಡಿದ ನನ್ನಗೆ ಚುರುಕ್ ಅನ್ನಿಸಿತ್ತು.
ಕಾರ್ ಹತ್ತೀರ ಬಂದು "ಯಾರು ನೀವು , ಎಷ್ಟು ಜನ ಇದ್ದೀರಾ , ಎಲ್ಲಿಗೆ ಬರಬೇಕು , ಡೀಟೇಲ್ ಹೇಳಿ" ಅಂದಳು .
ಇದ್ದನ ಕೇಳಿದ ನನ್ನಗೆ ನನ್ನ ಮೇಲೆ ನನ್ನಗೆ ಜಿಗುಪ್ಸೆ ಬಂದ ಹಾಗೆ ಆಯಿತು. ನಾನು ಬಂದ ವಿಷಯ ಆಕೆಗೆ ಹೇಳಿದೆ. ಆಕೆಯ ಮುಖ ಬಾಡಿತು. ಬಡತನಕ್ಕೆ ಹೆದರಿ ಆಕೆ ಹಿಡಿದ ದಾರಿ ಆಕೆಯೇ ಆಯ್ದುಕೊಂಡ ದಾರಿ ಆಗಿತು. ಈ ರೀತಿ ಹುಡುಗಿಯರು ಇದ್ದಾರೆ ಅಂತ ತಿಳಿದಾಗ ನಮ್ಮ ಸಮಾಜದ ವ್ಯವಸ್ಥೆ ಮೇಲೆ ಬೇಜಾರು ಆಯಿತು.
ಆಕೆ "ಸಾರ್ , ನೀವು ಯಾರೋ ಗೊತ್ತೀಲ್ಲ , ದಯವಿಟ್ಟು ನನ್ನ ಅಮ್ಮ ನ ಇಲ್ಲಿಗೆ ಕರೆದು ಕೊಂಡು ಬರಬೇಡಿ , ಆಕೆಗೆ ನಾನು ಈ ಕೆಲಸ ಮಾಡುತ್ತ ಇದ್ದೀನಿ ಆಕೆಗೆ ತಿಳಿದರೆ ನನ್ನ ಕಥೆ ಅಷ್ಟೇ , ನನ್ನ ಕೊಂದು ತಾನು ವಿಷ ಕುಡಿದು ಸಾಯುತ್ತಾಳೆ ಅಷ್ಟೇ" ಅಂತ ಕಣ್ಣೀರು ವರೆಸುತ್ತ ಹೇಳಿದಳು.

"ಸರಿ , ನೀನು ಆಯ್ದುಕೊಂಡ ದಾರಿ ಸರಿ ನ , ಜೀವನ ಸುಲುಭಾ ಅಂದು ಕೊಂಡು ಇದಿಯ , ತಪ್ಪು ಅನ್ನಿಸೋಲ್ಲವ "

"ಅನ್ನಿಸುತ್ತೆ ಸಾರ್ , ಏನು ಮಾಡಲ್ಲಿ ಕಿತ್ತು ತಿನ್ನೋ ಬಡತನ , ನನ್ನ ಫ್ರೆಂಡ್ಸ್ ಮೇಕ್ಅಪ್ ಸೆಟ್ , ಅವರ ಬಟ್ಟೆಗಳನ ನೋಡಿದಾಗ ನನ್ನಗೆ ಹೊಟ್ಟೆ ಕಿಚ್ಚು ಆಗುತ್ತಾ ಇತ್ತು "

"ಸರಿ ನಿನ್ನ ಹತ್ತೀರ ನನ್ನಗೆ ವಾದ ಬೇಡ , ಬರ್ತ್ತಿನಿ , ನಿಮ್ಮ ಅಮ್ಮ ನಿಗೆ ಈ ವಿಷಯ ಹೇಳೋದಿಲ್ಲ , ಹೋಗು ಗಾಯ ಕೆ ಮುಲಂ ಹಚ್ಚು , ಇನ್ನು ಎದೆ ಕೂಡ ಒಣಗಿಲ್ಲ , ಹೋಗು" ಅಂತ ಹೇಳುತ್ತಾ ನಾನು ಕಾರ್ ಸ್ಟಾರ್ಟ್ ಮಾಡಿಕೊಂಡು ವಾಪಸು ಬಂದು ಬಿಟ್ಟೆ ಆಫೀಸ್ ಗೆ.

ನಾನು ಶೀಲ ಮಾತಾಡಿ ಆ ಹುಡುಗಿ ಅಮ್ಮ ನಿಗೆ ವಿಷಯ ತಿಳಿಸೋದ ಬೇಡ , ಆಕೆ ಗೆ ಆ ಹುಡುಗಿ ಇರೋ ಅಡ್ರೆಸ್ ಕೊಟ್ಟು ಸುಮ್ಮನೆ ಆಗಿ ಬಿಡೋಣ ಅಂತ ತೀರ್ಮಾನಿಸಿದೆವು. ನರಸಮ್ಮ ಬಂದ ಮೇಲೆ ಆಕೆ ಗೆ ಮಗಳ ಅಡ್ರೆಸ್ ಕೊಟ್ಟೇ. ಶೀಲ ನನ್ನಗೆ ನರಸಮ್ಮ ನ ಆ ಅಡ್ರೆಸ್ ಗೆ ಕಳಿಸಿಕೊಟ್ಟು ಬಾ ಅಂತ ಹೇಳಿದಳು.
ನಾನು ನರಸಮ್ಮ ನ ಕರೆದು ಕೊಂಡು ಹೋಗಿ ಅಡ್ರೆಸ್ ತೋರಿಸಿ , ಹೋಗಿ ಅಂತ ಹೇಳಿ ಸ್ವಲ್ಪ ದೂರ ಹೋಗಿ ಕಾರ್ ಪಾರ್ಕ್ ಮಾಡಿ ಸಿಗರಟ್ಟೆ ಸೇದಲು ಹೋದೆ.

ನರಸಮ್ಮ ಮಗಳನ ಹುಡುಕಿ ಕೊಂಡು ಬಿಲ್ಡಿಂಗ್ ಒಳಗೆ ಹೋದರು. ಆಕೆ ಹೋಗಿ ಒಂದು ೫ ನಿಮಿಷ ಆಗುವುದರಲ್ಲಿ ಆ ಬಿಲ್ಡಿಂಗ್ ನಲ್ಲಿ ಪೋಲಿಸ್ ರೈಡ್ ಆಯಿತು. ಈಚ್ಚಲು ಮರದ ಕೆಳಗೆ ಕೂತು ಮಜ್ಜಿಗೆ ಕುಡಿದರು , ಕುಡಿದಿದು ಹೆಂಡ ಅನ್ನುತ್ತಾರೆ ಹಾಗೆ ಏನು ತಪ್ಪು ಮಾಡದ ನರಸಮ್ಮ ನು ಕೂಡ ಪೋಲಿಸ್ ನವರು ಈ ಕೇಸ್ ನಲ್ಲಿ ಫಿಟ್ ಮಾಡಿ ಮಗಳ ಜೊತೆಗೆ ಅರೆಸ್ಟ್ ಮಾಡಿ ಬಿಟ್ಟರು.

ಇದನ ನೋಡಿದ ನನ್ನಗೆ ತುಂಬ ಕೆಟ್ಟದಾಗಿ ಅನ್ನಿಸಿತ್ತು. ಪೋಲಿಸ್ ಸ್ಟೇಷನ್ ಗೆ ಹೋಗಿ ಅವರನ ಬಿಡಿಸೋ ಪ್ರಯತ್ನ ಮಾಡಿದೆ. ಶೀಲ ಕೂಡ ತುಂಬ ಟ್ರೈ ಮಾಡಿದರು ಆದರೆ ನಮ್ಮಗೆ ಪೋಲಿಸ್ ಸ್ಟೇಷನ್ ನಲ್ಲಿ ಸಿಕ್ಕಿದ ಉತ್ತರ "ನೀವು ಈ ಕೇಸ್ ನಲ್ಲಿ ಇಂಟರ್ ಫಿಯರ್ ಆಗಬೇಡಿ , ಇದ್ದು ನಿಮ್ಮ ಕೆರಿಯರ್ ಮತ್ತೆ ನಿಮ್ಮ ಜೀವನಕ್ಕೆ ಕೆಟ್ಟದು ಆಗುತ್ತೆ , ಹೋಗಿ ಸುಮ್ಮನೆ " ಅಂತ.

ಬಡಪಾಯಿ ನ ಹಾಳು ಬಾವಿಗೆ ತಳ್ಳಿದ ಹಾಗೆ ಅನ್ನಿಸಿತ್ತು , ಎರಡು ಮೂರು ದಿನ ನಿದ್ದೆ ಬರಲ್ಲಿಲ. ಮಾರನೆಯ ದಿನ ಆಫೀಸ್ ನಲ್ಲಿ ಶೀಲ "ಎನ್ನೋ ಮಾಡೋದು ಆ ನರಸಮ್ಮ ನ ಹೇಗೋ ಬಿಡಿಸೋದು , ಲೋ ಹರಿ ಬಿಡೋ ಬಾಯಿ , ಎನ್ನೋ ನೀನು " ಅಂತ ಗೊಣಗಿದಳು. "ಶಿಲು ಈ ಕೇಸ್ ನ ಬೇರೆ ತರಹ ಹ್ಯಾಂಡಲ್ ಮಾಡಬೇಕು , ಬಿಡು ನಾನು ಬಿಡಿಸುತ್ತೀನಿ".

 

ಈ ಸಮಾಜದ ಪಿಡುಗು ಈ ವೇಶ್ಯೆ ವಾಟಿಕ್ಕೆ. ಇದ್ದಕ್ಕೆ ಉತ್ತರವೂ ಇಲ್ಲ , ಪರಿಹಾರವು ಇಲ್ಲ. ಫ್ರೆಂಡ್ಸ್ ಪ್ಲೀಸ್ ಡು ನಾಟ್ ಸಪೋರ್ಟ್ ದಿಸ್ ನಾರ್ ಎನ್ಕರೇಜ್ ದಿಸ್

 

                 ಇಂದ ,ಬಡಪಾಯಿ
                  ಹರೀಶ್ ಎಸ್ ಕೆ