ಆಸೆ

ಆಸೆ

ಕವನ

 ಆಸೆ

ರೈತನ ಕಷ್ಟಕ್ಕೆ ಮಳೆಯಾಗಿ ಸುರಿವಾಸೆ
ಭಕ್ತನ ಕಷ್ಟಕ್ಕೆ ದೈವನಾಗಿ ಹರಸುವಾಸೆ
ಹೂವಿನ ಕಷ್ಟಕ್ಕೆ ದುಂಬಿಯಾಗಿ ಮೈದಡುವಾಸೆ
ದುಂಬಿಯ ಕಷ್ಟಕ್ಕೆ ಹೂವಾಗಿ ಮೈಯೊಡ್ಡುವಾಸೆ
ಹಸುಗೂಸಿನ ಕಷ್ಟಕ್ಕೆ ತಾಯಾಗಿ ಸಲಹುವಾಸೆ
ಹಸಿದವರ ಕಷ್ಟಕ್ಕೆ ಅನ್ನವಾಗುವಾಸೆ

ನೊಂದವರ ಕಷ್ಟಕ್ಕೆ ಸಾಂತ್ವಹಿಸುವಾಸೆ
ಅಳುವವರ ಕಷ್ಟಕ್ಕೆ ಭುಜವ ಕೊಡುವಾಸೆ
ಕಷ್ಟದ ಪ್ರಶ್ನೆಗಳಿಗೆ ಉತ್ತರವಾಗುವಾಸೆ 

ಆಸೆಯೇ ದುಃಖಕ್ಕೆ ಮೂಲಕಾರಣವೆಂದು ತಿಳಿದೂ
ಇತರರ ಆಸೆಗಳ ಪೂರೈಸುವ ಮಹದಾಸೆ ನನಗೆ....

Comments