ಆಸೆ
ಬುದ್ಧದೇವನ ಮಾತು "ಆಸೆ ದುಃಖಕ್ಕೆ ಮೂಲ"
ಆಪ್ಯಾಯಮಾನ ನುಡಿ ಸಾರ್ವಕಾಲಿಕ ಸತ್ಯ;
ಆದರೂ.....
ನನಗೊಂದು ' ಆಸೆ ' ದುರಾಸೆಯಲ್ಲ.....
ಸಮಾಜಕ್ಕೊಂದು ' ಸೇವೆ ' ಮಾಡುವಾಸೆ.
ಗುರಿ ಹಿಡಿದು ನಡೆದೆ ದಾರಿಯಲಿ
ಮಳೆ ಬಿಸಿಲೆನ್ನದೆ, ಕಲ್ಲು ಮುಳ್ಳುಗಳ ದಾಟುತ್ತಲಿ...
ಮೂದಲಿಸಿದರು ಹುಚ್ಚನೆಂದರು ಕೆಲವರು
ಮನನೋಯಿಸಿದರು ಅಪಮಾನ ಅವಮಾನದಲಿ!
ನೋಬಲ್ ವಿಜ್ಞಾನಿ ಆರ್ಕಿಮಿಡಿಸ್ ನೆನಪಾದನು
' ಆ ' ಮಹಾ ವಿಜ್ಞಾನಿಗೂ ಹುಚ್ಚನೆಂದಿದ್ದಾರೆಂದು !
ನನಗೆ ನಾನೇ ಸಮಾದಾನಿಯಾದೆ
ಮತ್ತೆ ಹೊರಟೆ ' ಆ ' ಆಸೆಗೆ ....... ||
ಹಳ್ಳಿಯ ಮುಗ್ಧನೊಬ್ಬ ; ನೋಡಿದ ತಡೆದ ಮಾತಾಡಿದ
ಯಾರಿರುವರು? ನಿನ್ನೀ ಗುರಿ ಆಸೆ ಸಹಾಯಕ್ಕೆ?
ಒಮ್ಮೆಲೆ ಮೈ ಜುಮ್ಮೆಂದಿತು! ಏಕಾಂಗಿ ಎಂದು !
ಮೇಲುಸಿರು ಬಿಟ್ಟು ಕ್ಷಣಕಾಲ ಚಿಂತಿಸಿದೆ,
ಉತ್ತರಿಸಿದೆ ನನ್ನ ಹೃದಯದುತ್ತರವ:
ನನಗೆರಡು ಆಯ್ಕೆಗಳಿವೆ....
ಜನರನ್ನ ಬದಲಿಸೊದೊಂದಾಯ್ಕೆ....
ಅದು ಸಾಧ್ಯವೂ ಇಲ್ಲ! ಸಾಧುವೂ ಅಲ್ಲ...;
ಮತ್ತೊಂದು ಆಯ್ಕೆ ಎನಗೆ
ನನ್ನ ನಾನು ಬದಲಿಸಿಕೊಂಡು ನಡೆಯೋದು
ಮುನ್ನಡೆದು ಗುರಿಯತ್ತ ಸಾಗುತ ನಡೆಯೋದು||
ಜಯವಾದರೆ ಹರುಷ ಹರುಷಾನಂದವು
ಅಪಜಯವಾದರೆ ಕಲಿಕಾನಂದ ಅನುಭವಾನಂದವು ||
ಸ್ವಾಮಿ ವಿವಕಾನಂದರ ನುಡಿ:
"ಮಹತ್ಕಾರ್ಯಗಳಾಗಬೇಕಾದರೆ
ಮಾಹಾತ್ಯಾಗಗಳಾಗಬೇಕು"
ಈ ನುಡಿಯ ನೆನೆ ನೆನೆಯುತ
ಗುರಿ ಮುಟ್ಟುವ ಆಸೆಗಾಗಿ ಸಾಗು ಸಾಗುತಾ ;
ನಡೆಯುತ ನೆನೆಯುತ ನಡೆಯುತ ನಡೆದೆ ನಡೆದೆ...
ಆಸೆಗಾಗಿ.....
- ಟಿ. ಮಂಜಪ್ಪ. ನಿ.ಮು.ಶಿ, ಶಿವಮೊಗ್ಗ.
ಚಿತ್ರ ಕೃಪೆ: ಇಂಟರ್ನೆಟ್ ತಾಣ