ಆಸೆ
ಬರಹ
ಆಸೆಗಳು ಬೇರುಗಳು
ಯಾಕಾಗಬೇಕು ಎಲೆಗಳು
ಕೇಳುತ್ತದೆ ಬೇರು ನೆಲೆ
ತನ್ನತನ ಬೆಳೆಸಲು
ಉಳಿಸಲು ಫಲಿಸಲು
ಭದ್ರ,ಸುಭದ್ರ
ಎಲೆ.....?
ಎಲೆಗೆ ನೆಲೆ ಕಾಂಡ
ಅಂಟಿಕೊಂಡಿರುವಷ್ಟು ಹೊತ್ತು
ನಂತರ?
ಗಾಳಿಯ ಸಾಥಿ
ಗಾಳಿಯ ಸವಾರಿಯಲ್ಲಿ
ವಿಶ್ವ ಪರ್ಯಟನೆ
ಕಂಡಷ್ಟೆ ಜಗತ್ತು
ದಿಗ್ಭ್ರಮೆ!
ಕೊನೆಗೆ
ಯಾವುದೊ ತಿಪ್ಪೆಗುಂಡಿ
ಮುಂದೊಮ್ಮೆ ಕಳೆತು
ನೆಲಕ್ಕೆ ಹೊಲಕ್ಕೆ ಗೊಬ್ಬರ
ಸ್ವಂತಿಕೆಯಿಲ್ಲ ಗೊಬ್ಬರಕ್ಕೆ
ಅದಕ್ಕೇ ಕಾಣುವುದಿಲ್ಲ ಎಲೆ
ಆಸೆಗಳು ಬೇರುಗಳು
ಯಾಕಾಗಬೇಕು ಎಲೆಗಳು?