ಆಸ್ಕರ್ ಪರಿಣಾಮ:ಭಾರತದ ಹೊಸ ರಾಷ್ಟ್ರಗೀತೆ "ಜೈ ಹೋ"!

ಆಸ್ಕರ್ ಪರಿಣಾಮ:ಭಾರತದ ಹೊಸ ರಾಷ್ಟ್ರಗೀತೆ "ಜೈ ಹೋ"!

ಬರಹ

ಎಂಟು ಆಸ್ಕರ್ ಪ್ರಶಸ್ತಿಗಳು,ಸಾಲದೆಂಬಂತೆ "ಸ್ಮೈಲ್ ಪಿಂಕಿ" ಸಾಕ್ಷ್ಯಚಿತ್ರಕ್ಕೂ ಪ್ರಶಸ್ತಿ!!
ಭಾರತೀಯ ನಿರ್ದೇಶಕ ಸ್ಲಂ..ಡಾಗನ್ನು ನಿರ್ದೇಶಿಸಿಲ್ಲ ನಿಜ,ನಿರ್ಮಾಪಕನೂ ಭಾರತೀಯನಲ್ಲ. ಆದರೆ ಚಿತ್ರ ಭಾರತೀಯ ಮೂಲದ್ದೇ,ಚಿತ್ರಕ್ಕಾಗಿ ದುಡಿದವರೂ ಭಾರತೀಯರು. ಇದೊಂದು ಭಾರತೀಯ ಚಿತ್ರ.

ಒಂಭತ್ತು ವರ್ಷದಲ್ಲೇ ತಂದೆಯನ್ನು ಕಳೆದು ಕೊಂಡ ಅಲ್ಲಾ ರಖಾ ರಹ್ಮಾನ್( ಎ ಆರ್ ರಹ್ಮಾನ್)ರ ಕುಟುಂಬ, ಹೊಟ್ಟೆ ಪಾಡಿಗಾಗಿ ತಂದೆಯ ಸಂಗೀತ ವಾದ್ಯಗಳನ್ನೂ ಮಾರಬೇಕಾಯಿತು. ಮದ್ರಾಸಿನ ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿ ರಹ್ಮಾನ್ ಎರಡು ಆಸ್ಕರ್ ಗೆದ್ದು ಚರಿತ್ರೆ ನಿರ್ಮಿಸಿದರು.

ಪ್ರಶಸ್ತಿಯನ್ನು ದೇಶದ ಜನತೆಗೆ ಅರ್ಪಿಸಿ" ಇದು ಪ್ರಶಸ್ತಿಯಲ್ಲ, ಚರಿತ್ರಾರ್ಹ ಸಾಧನೆ. ಜೀವನದುದ್ದಕ್ಕೂ ತನಗೆ ಎರಡು ಆಯ್ಕೆಗಳಿದ್ದುವು: ಪ್ರೀತಿ ಮತ್ತು ದ್ವೇಷ. ನಾನು ಮೊದಲನೆಯದ್ದನ್ನು ಆಯ್ದು ಕೊಂಡೆ-ಪರಿಣಾಮ ಇಲ್ಲಿದ್ದೇನೆ", ಎಂದು ಉದ್ಗರಿಸಿದರು.

ibn

(AP/IBN)

ಭಾರತವು ಸ್ಲಂ ಡಾಗ್ ಮಿಲಿಯನೇರ್‌ಗೆ ಸಿಕ್ಕಿದ ಎಂಟು ಪ್ರಶಸ್ತಿಯಿಂದ ಉಬ್ಬಿ ಹೋಗಿದೆ. ಅದರಲ್ಲೂ ರಹ್ಮಾನ್‌ರ ಸಂಗೀತ ನೀಡಿರುವ "ಜೈ ಹೋ.." ಸದ್ಯಕ್ಕಂತೂ ಭಾರತದ ರಾಷ್ಟ್ರಗೀತೆ ಎನ್ನಿಸಲಿದೆ!

ಜತೆಗೇ ಭಾರತದ ಹಿಂದಿ ಸಾಕ್ಷ್ಯ ಚಿತ್ರ "ಸ್ಮೈಲ್ ಪಿಂಕಿ"ಯೂ ಆಸ್ಕರ್ ಗಳಿಸಿತು.

ಡಾನ್ ಬಾಯ್ಲೆ ಅತ್ಯುತ್ತಮ ನಿರ್ದೇಶಕ
ಅತ್ಯುತ್ತಮ ಚಿತ್ರ ಪ್ರಶಸ್ತಿ
ರಹ್ಮಾನ್ ಅತ್ಯುತ್ತಮ ಸಂಗೀತ,ಹಾಡು
ಅತ್ಯುತ್ತಮ ಸಿನೆಮಾಟೋಗ್ರಫಿ,ಚಿತ್ರ ಕತೆ
ರಸೂಲ್ ಪೊಕುಟ್ಟಿಗೆ ಧ್ವನಿಗ್ರಹಣ
ಅತ್ಯುತ್ತಮ ಚಿತ್ರ ಸಂಕಲನ