ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ
ಬರಹ
ಗೆಳೆಯರೇ,
ಇತ್ತೀಚಿನ ದಿನಗಳಲ್ಲಿ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಸತತವಾಗಿ ಜನಾಂಗೀಯ ಹಲ್ಲೆ ನಡೆಸುತ್ತಿರುವ ವಿಚಾರ ತಮಗೆಲ್ಲರಿಗೂ ತಿಳಿದಿದೆ. ಈವರೆಗೆ ದೈಹಿಕ ಹಲ್ಲೆ ನಡೆಸುತ್ತಿದ್ದವರು ಈಗ ಪ್ರಾಣ ತೆಗೆಯುವ ಹಂತಕ್ಕೆ ಬಂದಿರುವುದು ಆತಂಕಕರ ವಿಷಯವಲ್ಲವೇ? ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವುದೋ ಇಲ್ಲವೋ ತಿಳಿಯದು. ಆದರೆ ನಾವುಗಳು ಅಂತರ್ಜಾಲ, ಪತ್ರಿಕೆ ಮುಖಾಂತರ ಎಲ್ಲರೂ ಒಟ್ಟಾಗಿ ಇಂತಹ ಘಟನೆಗಳನ್ನು ಖಂಡಿಸಬೇಕಾಗಿದೆ. ಹಾಗೂ ಅಲ್ಲಿರುವ ಭಾರತೀಯರಿಗೆ ನೈತಿಕ ಬೆಂಬಲ ಸೂಚಿಸಬೇಕಾದ ಅಗತ್ಯ ಇದೆ. ನಮ್ಮ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂಬುದು ನನ್ನ ಅಭಿಪ್ರಾಯ. ನೀವುಗಳು ಏನೆನ್ನುವಿರಿ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ
ಉ: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ
ಉ: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ