ಆಸ್ಪತ್ರೆಯ ಮೂಲೆಯೊಂದರ ವಾರ್ಡಿನ ಕತ್ತಲ ಮೌನದಲ್ಲಿ ನರಳಿಕೆಯ ಕೂಗು

ಆಸ್ಪತ್ರೆಯ ಮೂಲೆಯೊಂದರ ವಾರ್ಡಿನ ಕತ್ತಲ ಮೌನದಲ್ಲಿ ನರಳಿಕೆಯ ಕೂಗು

 ಅದೇಕೋ ಗೊತ್ತಿಲ್ಲ ಅವಳ ಭಾವಚಿತ್ರ ಕಣ್ಣಿನಿಂದ ಕದಲುತ್ತಿಲ್ಲ..ಅವಳ ವೇದನೆ ಕಿವಿಯಲ್ಲಿ ಪ್ರತಿದ್ವನಿಸುವುದು ಇನ್ನೂ ನಿಂತಿಲ್ಲ. ಅವಳ ಹೆಸರು ಇಲ್ಲಿ ಅಪ್ರಸ್ತುತ. ವಯಸ್ಸು ಸುಮಾರು ೨೦ ಆಸು ಪಾಸು. ಸಣ್ಣನೆಯ ಆಕರ್ಷಕ ಮೈ, ತಿರುಗಿ ಮತ್ತೊಮ್ಮೆ ನೋಡಬೇಕು ಎನಿಸುವ ಸುಂದರ ಮುಖಭಾವ. ಬೆಳದಿಂಗಳ ಮೈ ಬಣ್ಣ. ಅವಳ ಬೆರಗು ಕಣ್ಗಳಲ್ಲಿ ಆಗೊಮ್ಮೆ ಈಗೊಮ್ಮೆ ಇಣುಕುತ್ತಿದ್ದ ಅದೆಂಥದ್ದೋ ಭೀತಿ. ಆದರೂ ಮಾಸದ ಮಂದಹಾಸ. ಆದರೆ ಆಕೆ ಈಗ ಎಲ್ಲರ ತಾತ್ಸಾರಕ್ಕೆ ಈಡಾಗಿದ್ದಾಳೆ. ಎಲ್ಲರ ಕಣ್ಣಿನಿಂದ ಅವಳೆಡೆಗೆ ಚುಚ್ಚುವಂತಹ ನೋಟ, ಕಣ್ಣಿನಲ್ಲೇ ಸಾವಿರ ಪ್ರಶ್ನೆ. ಇದಕ್ಕೆಲ್ಲಾ ಕಾರಣ ಆಕೆ ಈಗ ತಿಂಗಳ ಅವಿವಾಹಿತ ಗರ್ಭಿಣಿ.

ಆಕೆ ದಾಖಲಾಗಿದ್ದ ಒಂದು ಖಾಸಗಿ ಆಸ್ಪತ್ರೆಯ ವಾರ್ಡಿನಲ್ಲೇ ನನ್ನ ಪತ್ನಿ ಸಹಾ ದಾಖಲಾಗಿದ್ದ ನಿಮಿತ್ತ ಒಂದೆರಡು ದಿನಗಳ ಕಾಲ ನಾನೂ ಸಹಾ ನನ್ನ ಪತ್ನಿಯ ಆರೈಕೆಯಲ್ಲಿ ನಿರತನಾಗಿದ್ದೆ. ಒಂದೆರಡು ದಿನಗಳ ಮಟ್ಟಿಗೆ ನನ್ನ ದಿನನಿತ್ಯದ ಜಂಜಡಗಳಿಂದ ಒಂದು ರೀತಿಯ ಮುಕ್ತಿ. ಪತ್ನಿಯ ಆರೈಕೆ ಮಾಡುತ್ತಾ, ನನಗಿಷ್ಟವಾದ ಪುಸ್ತಕಗಳನ್ನು ಓದುತ್ತಾ, ಇಂಟರ್ನೆಟ್ನಲ್ಲಿ ಸ್ವಲ್ಪ ಕಾಲ ಕಳೆಯುತ್ತಾ, ನಡು ನಡುವೆ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುತ್ತಾ ಕಾಲ ದೂಡುತ್ತಿದ್ದೆ. ನಮ್ಮನ್ನು ಹೊರತಾಗಿ ವಾರ್ಡಿಗೆ ದಾಖಲಾಗಿದ್ದು ಅದೇ ಬೆರಗು ಕಣ್ಗಳ ಹುಡುಗಿ.

ಮೊದಲಿಗೆ ತನ್ನ ಹುಡುಗನೊಂದಿಗೆ (BoyFriend!!) ಬಂದ ಆಕೆ ಮೇಲ್ನೊಟಕ್ಕೆ ಗರ್ಭಿಣಿ ಎಂದು ಪತ್ತೆಹಚ್ಚುವುದು ಸಾಧ್ಯವಿರುತ್ತಿರಲಿಲ್ಲ. ಆಸ್ಪತ್ರೆಯ ಸಿಬ್ಬಂದಿ ಸ್ಕಾನಿಂಗ್ಗೆಂದು ಕರೆದೋಯ್ದಾಗ ಸಹಾ ಯಾವುದೋ ಹೊಟ್ಟೆನೋವು ಇರಬಹುದೇನೋ ಎಂದು ಎಣಿಸಿದ್ದೆ. ಆದರೆ Labour Ward ಗೆ ಕರೆದೊಯ್ದಾಗ ಮಾತ್ರ I was little confused ಆಸ್ಪತ್ರೆಯ ಕೆಲಸದಾಕೆ ಹೇಳಿದ ವಿಚಾರ ನನ್ನ ಊಹೆಯನ್ನು ನಿಜವಾಗಿಸಿತ್ತು. ಆದರೆ ನಿಜಕ್ಕೂ ನನ್ನ ಮನಸ್ಸಿಗೆ ತೀವ್ರ ಘಾಸಿ ಉಂಟು ಮಾಡಿದ್ದು ಆಕೆಯೆಡೆಗೆ ನಮ್ಮ ಸಮಾಜ, ನಮ್ಮ ಜನರು ಬೀರುತ್ತಿದ್ದ ದೃಷ್ಟಿ. ಒಬ್ಬ ಕೊಲೆಗಡುಕ, ಅತ್ಯಾಚಾರಿಯನ್ನೂ ಮಟ್ಟದಲ್ಲಿ ನಿಲ್ಲಿಸುತ್ತಿರಲಿಲ್ಲವೇನೋ ಅಂತಹ ಅಪರಾಧಿಗಳಿಗಿಂತ ಆಕೆಯನ್ನು ಹೀನವಾದ ಸ್ಥಿತಿಯಲ್ಲಿ ಕಾಣಲಾಗುತ್ತಿತ್ತು. ಆಸ್ಪತ್ರೆಯ ಕೆಲಸದಾಕೆ, ಸಿಬ್ಬಂದಿಯವರಿಗಂದ ಹಿಡಿದು, ಎಲ್ಲರ ನಿಂದನೆಗೆ ಆಕೆ ಗುರಿಯಾಗುತ್ತಿದ್ದಳು. ಎಲ್ಲರ ದೃಷ್ಟಿಯನ್ನು ಎದುರಿಸುವುದು ಆಕೆಗೆ ನಿಜಕ್ಕೂ ಸವಾಲಿನ ವಿಷಯವಾಗಿತ್ತು. ಆದರೆ ಆಕೆ ಇವೆಲ್ಲದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತಿರಲಿಲ್ಲ, ತನ್ನ ಮೊಬೈಲಿನಲ್ಲಿ ಸಂಗೀತ ಕೇಳುತ್ತಿದ್ದಳು, ತನ್ನ ಹುಡುಗನೊಂದಿಗೆ ಪಿಸು ಮಾತಿನಲ್ಲಿ ನಿರತಳಾಗಿದ್ದಳು, ನಡು ನಡುವೆ ನಗುತ್ತಿದ್ದಳು. ಮೌನದಲ್ಲೂ ನಿರ್ಲಿಪ್ತವಾಗಿದ್ದಳು.

Labour Ward ನಿಂದ ಬಂದ ಆಕೆ ವಿಪರೀತ ಪ್ರಸವ!! ವೇದನೆ ಯಿಂದ ಬಳಲುತ್ತಿದ್ದಳು. ಆಕೆಯ ಬಳಿ ಆಕೆಯ ತಾಯಿಯಾಲೀ, ಸಹೋದರಿಯಾಗಲೀ ಯಾರೂ ಇರಲಿಲ್ಲ. ಮಾನಸಿಕ ವೇದನೆಯ ಜೊತೆ ದೈಹಿಕ ಯಾತನೆ. ಕೆಲ ಸಮಯದ ನಂತರ ಗರ್ಭಪಾತ. ವಿಪರೀತ ಬಳಲಿಕೆಯಿಂದ ಹುಡುಗಿ ಅರೆಪ್ರಜ್ಞಾವಸ್ಥೆಗೆ ತಲುಪಿದ್ದಳು. ಆದರೆ ಅವಳ ಜೊತೆಗಿದ್ದ ಹುಡುಗ ಮಾತ್ರ ಅವಳ ದುಃಖಕ್ಕೆ ಆಸರೆಯಾಗಿ, ಅವಳ ಯಾತನಗೆ ದ್ವನಿಯಾಗಿ, ಅವಳ ಕಷ್ಟದಲ್ಲೂ ಭಾಗಿಯಾಗಿ, ಜೊತೆಯಲ್ಲಿಯೇ ಇದ್ದ.

ಆಕೆಯ ಪರಿಸ್ಥಿತಿಯನ್ನು ನೆನೆದು ಒಂದು ಕ್ಷಣ ದಿಗ್ಭ್ರಾಂತನಾದೆ. ಹುಡುಗಿ ತಪ್ಪೆಸೆಗಿದ್ದಾಳೆ ಎಂದು ದೂರುವ ಜನ ಹಾಗೂ ಸಮಾಜವಾದರೂ ಎಂತಹದ್ದು? ಯಾರೂ ಮಾಡದಂತಹ ಪಾಪವನ್ನೇನಾದರೂ ಹುಡುಗಿ ಮಾಡಿದ್ದಾಳೆಯೇ. ಎಲ್ಲರೂ ದಿನ ನಿತ್ಯ ಮಾಡುವಂತಹ ಕಾರ್ಯವಲ್ಲವೇ ಅದು. ಮದುವೆಗೆ ಮುನ್ನ ಲೈಂಗಿಕತೆಯನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ರೀತಿಯ ವಿವಾಹ ಪೂರ್ವದ ಲೈಂಗಿಕತೆಯಲ್ಲಿ ತೊಡಗಲು ಕಾರಣವಾದರೂ ಏನುದೈಹಿಕವಾಗಿ ಪ್ರೌಡ ದೆಶೆಗೆ ಬಂದಂತಹ ಎಷ್ಟು ಜನ ಹುಡುಗ ಅಥವಾ ಹುಡುಗಿಯರು ತಮ್ಮ ಮನದಾಳದ ಮಾತನ್ನು, ತಮ್ಮ ಬಯಕೆಯನ್ನು, ತಮ್ಮ ಕಷ್ಟ ಸುಖಗಳನ್ನು, ತಮ್ಮ ಮನೋದೈಹಿಕ ವಾಂಛೆಗಳನ್ನು, ಮಾನಸಿಕ ದೈಹಿಕ ಬದಲಾವಣೆಗಳನ್ನು ಅದರಲ್ಲೂ ಪ್ರಮುಖವಾಗಿ ಸೆಕ್ಸ್ ಸಂಬಂಧೀ ವಿಷಯಗಳನ್ನು ತಮ್ಮ ತಂದೆ ತಾಯಿಯರೊಡನೆ ಮಾತನಾಡಲು ಸಾಧ್ಯ? ಲೈಂಗಿಕತೆಯ ಬಗ್ಗೆ ಹುಡುಗ ಅಥವಾ ಹುಡುಗಿಯರನ್ನು ಪ್ರೌಢ ಶಿಕ್ಷಣದಲ್ಲೇ ಶಿಕ್ಷಿತರನ್ನಾಗಿ ಮಾಡಬೇಕಾದುದು ತಂದೆ ತಾಯಿ ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿ ಅಲ್ಲವೇ? ಆದರೆ ನಾವು ಮಾಡುತ್ತಿರುವುದಾದರೂ ಏನನ್ನು? ನನಗೆ ಇನ್ನೂ ಚೆನ್ನಾಗಿ ನೆನಪಿದೆ ನನ್ನ ಪ್ರೌಢಶಾಲೆಯ ಜೀವಶಾಸ್ತ್ರ ವಿಭಾಗವನ್ನು ಬೋಧಿಸುತ್ತಿದ್ದುದ್ದು ಒಬ್ಬ ಶಿಕ್ಷಕಿ. “ಪ್ರಜನನಎಂಬುದು ೧೦ ನೇ ತರಗತಿಯ ಜೀವಶಾಸ್ತ್ರದ ಅಧ್ಯಾಯವೊಂದರ ಭಾಗ. ಒಂದೆರಡು ಪುಟಗಳಷ್ಟು ಮಾತ್ರ ಮಾಹಿತಿ ಇದರಲ್ಲಿತ್ತು. ಆದರೆ ಎರಡೂ ಪುಟಗಳ ವಿವರಣೆ ನಮಗೆ ದೊರೆಯಲಿಲ್ಲ. ನಮ್ಮ ಶಿಕ್ಷಕಿ ಅಧ್ಯಾಯದ ಭಾಗವನ್ನೇ Skip ಮಾಡಿದ್ದರು. ರೀತಿಯದ್ದೇ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಇಂದಿಗೂ ಇರುವುದು ನಮ್ಮ ದುರಾದೃಷ್ಟವೇ ಸರಿ.

SEX ಎಂಬುದು ಭಾರತ ದೇಶದಲ್ಲಿ ಭದ್ರವಾಗಿ ಪ್ಯಾಕ್ ಮಾಡಿದ ಉಡುಗೊರೆಯಂತೆ. ಒಂದು ಉಡುಗೆಯನ್ನು ನೀವು ಭಧ್ರವಾಗಿ, ಆಕರ್ಷಣೀಯವಾಗಿ ಪ್ಯಾಕ್ ಮಾಡಿ ನಿಮ್ಮ ಮಿತ್ರರೊಬ್ಬರಿಗೆ ನೀಡಿ. ನೀಡುವಾಗ ಉಡುಗೊರೆಯನ್ನು ಒಂದು ವರ್ಷದ ನಂತರ ತೆರೆಯುವಂತೆ ಹೇಳಿ ಕೊಡಿ. ಗಮನಿಸಿ ಅಂದಿನಿಂದ ಉಡುಗೊರೆಯನ್ನು ಪಡೆದ ವ್ಯಕ್ತಿಗೆ ಸರಿಯಾಗಿ ನಿದ್ರೆ ಸಹಾ ಹತ್ತುವುದಿಲ್ಲ. ಪ್ರತೀ ದಿನ ಉಡುಗೊರೆಯ ಪ್ಯಾಕಿನದ್ದೇ ಧ್ಯಾನ. ಅದರಲ್ಲೇನಿರಬಹುದು ಎಂಬ ಕುತೂಹಲ, ದಿನೇ ದಿನೇ ಕುತೂಹಲ ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಉಡುಗೊರೆಯೆಡೆಗೆ ದಿಟ್ಟಿಸಿ ನೋಡುತ್ತಾನೆ. ಕೈಯಲ್ಲಿ ಹಿಡಿದು ತೂಗುತ್ತಾನೆ. ಮೇಲೆ-ಕೆಳಗೆ ಮಾಡಿ ನೋಡುತ್ತಾನೆ. ತಾಳ್ಮೆ ಕಳೆದುಕೊಂಡು ಇಣುಕಿ ನೋಡಲು ಸಹಾ ಹತ್ತು ಹಲವು ರೀತಿ ಪ್ರಯತ್ನಿಸುತ್ತಾನೆ. ಕೆಲವರಂತೂ ಪುನಃ ಅದೇ ರೀತಿ ಪ್ಯಾಕ್ ಮಾಡಬಹುದೆಂದು ಪ್ಯಾಕ್ ತೆರೆದೇ ಬಿಡುತ್ತಾರೆ. ತೆರೆದು ನೋಡಿದ ಪ್ರತಿಯೊಬ್ಬರಲ್ಲೂ ಉಳಿಯವುದುದೊಂದೇ ಭಾವಇಷ್ಠೇನಾ..!!” 

ನಮ್ಮ ದೇಶದಲ್ಲಿ SEX ಅನ್ನೂ ಸಹಾ ಇದೇ ರೀತಿ ವಿಶ್ಲೇಶಿಸಬಹುದಾಗಿದೆ. ಇದು ಒಂದು ರೀತಿಯ ಪ್ಯಾಕ್ ಮಾಡಿದಂತಹ ಉಡುಗೊರೆ. ಎಲ್ಲರಲ್ಲೂ ಇದರ ಬಗ್ಗೆ ಎಲ್ಲಿಲ್ಲದ ಕುತೂಹಲ. ತೆರೆದು ನೋಡುವ ಹಂಬಲ. ಎಲ್ಲರ ಮನದಲ್ಲೂ, ಎಲ್ಲರ ಮನೆಯಲ್ಲೂ SEX ಇದೆ. ಆದರೂ ಸಹಾ ಇದರ ಬಗ್ಗೆ ಎಲ್ಲಿಲ್ಲದ ಮಡಿವಂತಿಕೆ. ಕೇವಲ ನಾಲ್ಕೂ ಗೋಡೆಯ ಮಧ್ಯೆ ಸೀಮಿತವಾದಂತಹ ಸಂಗತಿ. ತಪ್ಪು ಇರುವುದು ಇಲ್ಲೆ. ನಾನು Open Sex ಬಗ್ಗೆ ಖಂಡಿತ ಮಾತನಾಡುತ್ತಿಲ್ಲ. ಆದರೆ ಸಂಪೂರ್ಣವಾದ ಲೈಂಗಿಕ ಶಿಕ್ಷಣದ ಅವಶ್ಯಕತೆ ಬಗ್ಗೆ ಹೇಳುತ್ತಿದ್ದೇನೆ. ಎಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡಲೂ ಸಹಾ ಸಾಧ್ಯವಿಲ್ಲವೋ ಅಲ್ಲಿ ಸಂಪೂರ್ಣ ಲೈಂಗಿಕ ಶಿಕ್ಷಣದ ಪ್ರಸರಣ ಹೇಗೆ ಸಾಧ್ಯ..?

ಇಲ್ಲಿ ಬೆಳೆಯುವಾಗ ಮಕ್ಕಳು ತಂದೆ ತಾಯಿಯರು ಹೇಳಿದಂತೆ ಕೇಳುತ್ತಾರೆ, ಬೆಳೆಯುತ್ತಾ ಶಾಲೆಯ ಶಿಕ್ಷಕರು ಹೇಳಿದಂತೆ ಕೇಳುತ್ತಾರೆ. ಹೀಗೆ ಮತ್ತೊಬ್ಬರ ಮಾತು ಕೇಳಬೇಕೆಂದು ತಂದೆ ತಾಯಿ, ಸಮಾಜ ಆದೇಶ ಮಾಡಿರುತ್ತದೆ. ತಮ್ಮ ಸ್ವಂತ ನಿರ್ಧಾರ ಮಾಡುವ ಶಕ್ತಿಯನ್ನು ಮಕ್ಕಳು ಬಾಲ್ಯದಲ್ಲೇ ಕಳೆದುಕೊಂಡಿರುತ್ತಾರೆ. ಅವರೆಂದು ನಿರ್ಧಾರ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಎಲ್ಲ ರೀತಿಯ ನಿರ್ಧಾರಗಳನ್ನು ತಂದೆ ತಾಯಿಯರೋ, ಪೋಷಕರೋ ಅಥವಾ ಗುರು ಹಿರಿಯರೋ ಮಾಡಿರುತ್ತಾರೆ. ಅವರ ನಿರ್ಧಾರಗಳಂತೆ ಇವರು ನಡೆಯುತ್ತಾರೆ. ಆದರೆ ದುರದೃಷ್ಟವಷಾತ್ ಲೈಗಿಕತೆ SEX ನಂತಹ ವಿಚಾರಗಳಲ್ಲಿ ಇವರ್ಯಾರ ನಿರ್ಧಾರಗಳು ದೊರೆಯುವುದಿಲ್ಲ ಕಾರಣ ಒಂದೇ, ಮಡಿವಂತಿಕೆ. ಇಂತಹ ಅನಿವಾರ್ಯ ಪರಿಸ್ಥಿತಿಗಳಲ್ಲಿ ಯೌವನಾವಸ್ಥೆಯ ಹುಡುಗ ಹುಡುಗಿಯರು ಆತುರದ, ಅಪಕ್ವವಾದ ನಿರ್ಧಾರವನ್ನೇ ತೆಗೆದುಕೊಂಡು ಬಿಡುತ್ತಾರೆ. ಸರಿಯಾದ ಲೈಂಗಿಕ ಶಿಕ್ಷಣ ಇಲ್ಲದ ಕಾರಣ ಬೇಕಾದ Pre-Cautionary  ವಿಧಾನಗಳನ್ನು ಸಹಾ ಅನುಸರಿಸಿರುವುದಿಲ್ಲ. ಕೊನೆಗೆ ತಮ್ಮ ದೇಹದ ಮೇಲೆ ಗರ್ಭಪಾತ ಬೀರುವಂತಹ ದುಷ್ಪರಿಣಾಮಗಳ ಅರಿವೂ ಇಲ್ಲದೆಯೇ ಅಂತಹ ನಿರ್ಧಾರಕ್ಕೆ ಬಲಿಯಾಗಿ ಬಿಡುತ್ತಾರೆ.

ಇಂತಹ ಪರಿಸ್ಥಿತಿಗೆ ನಾನು ನೇರವಾಗಿ ಸಮಾಜ, ಶಿಕ್ಷ ವ್ಯವಸ್ಥೆ ಹಾಗೂ ಪೋಷಕರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ನಾನೊಮ್ಮೆಅಮ್ಮ ಮಕ್ಕಳು ಹೇಗೆ ಹುಟ್ಟುತ್ತವೆ..?’ ಎಂದು ಕೇಳಿ ನನ್ನ ತಾಯಿಯಿಂದ ಬೈಸಿಕೊಂಡಿದ್ದೆ..!! ಮೇಲೆ ತಿಳಿಸಿದ ಹುಡುಗಿಯ ಪರಸ್ಥಿತಿಯನ್ನೊಮ್ಮೆ ಅವಲೋಕಿಸಿ ನೋಡಿ. ದುಡುಕಿನ ನಿರ್ಧಾರ ಮಾಡಿದ್ದು ಹುಡುಗ ಹುಡುಗಿಯೇ ಆದರೂ ಸಹಾ ಅದರ ನಂತರ ಆಕೆಗಿದ್ದ ಆಯ್ಕೆಗಳಾದರೂ ಯಾವುವು? ಪ್ರೀತಿಸುತ್ತಿದ್ದ ಹುಡುಗನನ್ನು ವಿವಾಹವಾಗಲು ಸಾಧ್ಯವಿತ್ತ? ಇಲ್ಲ ಅದಕ್ಕೆ ಅವರ ಪೋಷಕರ ವಿರೋಧ ಎದುರಿಸ ಬೇಕಾಗಿತ್ತದೆ. ಅವರ ವಿರೋಧ ಎದುರಿಸುವ ಹಂತದಲ್ಲಿ ಅವರಿರಲಿಲ್ಲ. ಸರಿ.. ವಿವಾಹವೇ ಇಲ್ಲದೇ ತಾಯಿಯಾಗಬಹುದೇ..?? ಇದು ನಮ್ಮ ಸಮಾಜದ ಊಹೆಗೂ ಸಹಾ ನಿಲುಕದ ಸಂಗತಿಯಾಯಿತು.!! ಹುರಿದು ತಿಂದುಬಿಟ್ಟಾರು..!!!  So ಆಕೆಗಿದ್ದ ದಾರಿಯೊಂದೇ..ಗರ್ಭಪಾತ.!! ವಿಪರ್ಯಾಸವೆಂದರೆ ಹುಡುಗಿಯ ಇಂತಹ ಸಮಸ್ಯೆಯನ್ನು ಎಲ್ಲೂ ಹೇಳುವಂತಿಲ್ಲ..ಪೋಷಕರಿಗಂತೂ ಮೊದಲೇ ಹೇಳುವಂತಿಲ್ಲ..ಅಂತಹ ಮುಕ್ತ ವಾತಾವರಣವನ್ನು ಸಮಾಜ ಅಥವಾ ಪೋಷಕರು ಕಲ್ಪಿಸುವುದೇ ಇಲ್ಲ.

 

Comments