ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಆಹಾರದ ಬೆಲೆ ಏರಿಕೆಯಿಂದ ಭಾರತದಲ್ಲಿರುವ ೧.೫ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಬಹಳ ತೊಂದರೆಯಾಗಲಿದೆ ಎಂದು ಯೂನಿಸೆಫ್ ಎಚ್ಚರ ನೀಡಿರುವ ಬಗ್ಗೆ [:http://news.bbc.co.uk/2/hi/south_asia/7398750.stm|ಬಿಬಿಸಿ ವರದಿ ಮಾಡಿದೆ].
ಸಿಟಿಗಳಲ್ಲಿರುವವರಿಗೆ ಬಹುಶಃ ಬೆಲೆ ಏರಿಕೆಯ ಹಬೆ ಇನ್ನೂ ಅಷ್ಟಾಗಿ ತಟ್ಟುತ್ತಿರುವಂತೆ ಕಾಣುತ್ತಿಲ್ಲ. ದಿನಗೂಲಿ ಅಥವ ಕಡಿಮೆ ಸಂಬಳದ ನೌಕರಿಗಳಲ್ಲಿರುವ ಸಂಸಾರಗಳಿಗೆ ಬಹುಶಃ ವ್ಯತ್ಯಾಸ ಹೆಚ್ಚು ಗೊತ್ತಾಗಬಹುದು.
ಬಿಬಿಸಿ ವರದಿಯಲ್ಲಿ ಪಟ್ಟಿ ಮಾಡಿರುವ ಕೆಲವು ಅಂಶಗಳು:
• ಇಡಿಯ ವಿಶ್ವದಲ್ಲಿ ಆಗಲೇ ಸರಿಯಾಗಿ ಆಹಾರ ಲಭ್ಯವಾಗದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.
• ಈಗಿನ ತೊಂದರೆಗಿಂತ ಮುಂಚೆಯೇ ಅರ್ಧಕ್ಕರ್ಧ ಭಾರತದ ಮಕ್ಕಳಲ್ಲಿ ಕುಂಟಿತ ಬೆಳವಣಿಗೆ ಕಂಡುಬಂದಿದೆ.
• ಬಡತನದಲ್ಲಿರುವ ಮಂದಿ ಎಂದಿನಂತೆ ಹೆಚ್ಚು. ಬೆಲೆ ಮಾತ್ರ ಇಮ್ಮಡಿಯಾಗಿದೆ.
• ಐದು ವರ್ಷಕ್ಕಿಂತ ಕೆಳಗಿನವರಲ್ಲಿ ೪೮% ಮಕ್ಕಳಿಗೆ ಸರಿಯಾದ ಆಹಾರ ಲಭ್ಯವಾಗುತ್ತಿಲ್ಲ. (ಪಾಕಿಸ್ತಾನದಲ್ಲಿ ಇದು ೩೭%, ಬಾಂಗ್ಲಾದೇಶದಲ್ಲಿ ೪೩% - ಎರಡೂ ಭಾರತಕ್ಕಿಂತ ಕಡಿಮೆ!)
• ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಿದೆ. (ಕೇವಲ ರಾಷ್ಟ್ರದ ಬಜೆಟ್ಟಿನ ೨.೨% ಅಂಶ ಮಾತ್ರ ಕೃಷಿಗೆ ಹೋಗುತ್ತಿದೆ)
• ಬಡತನದಿಂದ ಮಾತ್ರವಲ್ಲ ಸರಿಯಾದ ಕ್ವಾಲಿಟಿ ಆಹಾರ ಸಿಗದೆ ಕೂಡ ತೊಂದರೆ.