ಆ ಊರೆಂದರೆ...

ಆ ಊರೆಂದರೆ...

ಕವನ

ಅವಳ ಸೊಂಟದಂತೆ ಕಿರಿದಾದ ಕಾಲುದಾರಿಗಳು
ಕೊರೆಯುವ ಕೊರಕಲುಗಳು


ಆ ಊರೆಂದರೆ...
ದೇವಸ್ಥಾನದ ಘಂಟೆ,ಪಕ್ಕದಲ್ಲೊಂದು ಮಂಟಪ
ಮೊದಲ ಪ್ರೇಮಸಲ್ಲಾಪ.
ಎಡೆಬಿಡದೆ ಬಂಡೆಗಪ್ಪಳಿಸುವ
ಉಪ್ಪುನೀರಿನ ಸಪ್ಪಳ.


ಆ ಊರೆಂದರೆ...
ಅವಳ ಹಣೆಗಿರಿಸಿದ ಗಂಧ
ಚಪ್ಪರಿಸಿದರೆ ಉಪ್ಪುಉಪ್ಪೆನಿಸುವ ನೆನಪುಗಳ ದುರ್ಗಂಧ.
ಉಸುರುವ ಬೆವರಿನ ನಡುವೆ ಕುಸುರಿ ಮಾಡಿದ ಕಣ್ಣುಗಳು
ಬೆಂಬಿಡದೆ ಕಾಡುವ ಬೆಳ್ಳಗಿನ ಬೆನ್ನು.


...ಇವತ್ತಿಗೂ ಅನುರಣಿಸುವ ದೇವಸ್ಥಾನದ ಘಂಟೆ
ನೆನಪುಗಳ ನೇಗಿಲಿಗೆ ಸಿಕ್ಕು ಹುಡಿಯಾಗುವ
ಹೃದಯ ಮಣ್ಣಿನ ಹೆಂಟೆ!

Comments