ಆ ಒಂದು ವಾರ

ಆ ಒಂದು ವಾರ

 

ಒಂದು ವಾರ ಟ್ರಾಫಿಕ್ಕಿಲ್ಲ, ಸಿಗ್ನಲ್ಲಿಲ್ಲ 
ಬಸ್ಸು ಬೈಕು ಕಾರುಗಳ ಆರ್ಭಟವಿಲ್ಲ 
 
ಪಾಂ ಪಾಂ, ಕೀಂ ಕೀಂಗಳ ಕರ್ಕಶ ಶಬ್ಧವಿರಲಿಲ್ಲ
ವಿಧವಿಧವಾದ ಹಕ್ಕಿಗಳ ನಿನಾದವಿತ್ತಲ್ಲ
 
ನೆಟ್ ಇಲ್ಲ ಇ-ಮೈಲ್ ಇಲ್ಲ
ಕಂಪ್ಯೂಟರ್ ಮುಖವೇ ಇಲ್ಲ
 
ತರಕಾರಿ ತರುವ ತೊಂದರೆ ಇಲ್ಲ
ಈರುಳ್ಳಿ ಟೊಮೇಟೊ ಹಚ್ಚುವ ಗೋಜಿಲ್ಲ
 
ಹಾಲು ತರುವ ಪ್ರಮೇಯವಿರಲಿಲ್ಲ
ಆದರೂ ಕಾಫಿ ಬಂದು ಕೈಗೆ ಕುಳಿತಿರುತ್ತಿತ್ತಲ್ಲ
 
ಮೊಬೈಲ್ ಮಲಗಿತ್ತು
ಲ್ಯಾಂಡ್ಲೈನಿಗೆ  ಗತ್ತು ಬಂದಿತ್ತು
 
ಪ್ಯಾಂಟ್ ಹೋಗಿ
ಪಂಚೆ ಬಂದಿತ್ತು
 
ಊರಲ್ಲಿ ವಾರ ಕಳೆದದ್ದೇ ಗೊತ್ತಾಗಲಿಲ್ಲ
ಇಲ್ಲಿ ದಿನವೇ ಹೋಗುತ್ತಿಲ್ಲ

 

Comments