ಆ ಒ0ದು ವರ್ಷ....ಬಿಡದೆ ಕಾಡೋ ನೆನಪು.
ಆ ಒಂದು ವರ್ಷದಲ್ಲಿ ಅದೇನೆನೆಲ್ಲ ಆಗಿತ್ತು. ಮಗಳ ಮದುವೆ, ಮಗನ ಒದು, ಸಾಲದೆಂಬಂತೆ ಸಾಲದ ಹೊರೆ, ಹಳೆನಗರದಿಂದ ಹೊಸನಗರಕ್ಕೆ ಮನೆ
ಬದಲಾಯಿಸಿ ಒಂದು ವರ್ಷ ತುಂಬಿತ್ತು. ಈ ಒಂದು ವರ್ಷದಲ್ಲಿ ಮಗಳ ಮದುವೆ ಆಗಿತ್ತು.ಮಗಳ ಗಂಡ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದೆ
ಮಗಳು ತವರಿಗೆ ಬಂದಿದ್ದಳು. ಮಗನನ್ನು ಪ್ರತಿಷ್ಟಿತ ಕಾಲೇಜಿನಲ್ಲಿ ಹೆಚ್ಚು ಖರ್ಚ ಮಾಡಿ ಒದಿಸಿದರು ಪಿಯುಸಿಯಲ್ಲಿ ಅನುತ್ತೀರ್ಣನಾಗಿ ಬೆಂಗಳೂರು ಸೇರಿದ್ದ.
ಮನೆ ಯಜಮಾನ ಬಂದು ಮನೆ ರಿಪೇರಿ ಮಾಡಿಸಬೇಕು ಖಾಲಿ ಮಾಡಿ ಎಂದಿದ್ದ.ಕರಾರು ಮುಗಿದದ್ದರಿಂದ ವಿಧಿಯಿಲ್ಲದೆ ರಾಮಯ್ಯ ಮನೆ ಖಾಲಿ ಮಾಡಬೇಕಿತ್ತು.ಮತ್ತೆ ಹೊಸಮನೆ
ಹುಡುಕಬೇಕು. ತವರು ಸೇರಿರುವ ಮಗಳನ್ನು ಮತ್ತೆ ಗಂಡನ ಮನೆ ಸೇರಿಸಬೇಕು ಮಗನಿಗೊಂದು ದಾರಿ ಮಾಡಬೇಕು. ಸಾಲ ಮಾಡಿ ಮಾಡಿದ್ದ ಮಗಳ ಮದುವೆ ಸಾಲ ತೀರಿಸಬೇಕು.ಇಷ್ಟೆಲ್ಲಾ ಜಂಜಾಟ
ದ ನಡುವೆ ಹೆಂಡತಿ ಬಿಟ್ಟಿದ್ದ ಅಳಿಯ, ಯಾವ ದೇವರು ನೀಡಿದ ಒಳ್ಳೆಯ ಬುದ್ದಿಯಿಂದಾಗಿ ಏನೋ ಮತ್ತೆ ಹೆಂಡತಿಯನ್ನು ಕರೆದೊಯ್ಯಲು ಬಂದಿದ್ದ. ವ್ಯಾಪಾರ ವಹಿವಾಟು ನೆಡೆಸಿ
ಮೊದಲಿಗಿಂತ ಸ್ಥಿತಿ ವಂತನಾಗಿದ್ದ. ತನ್ನ ಹೆಂಡತಿಯ ತಮ್ಮನಿಗೆ ತಾನೇ ಕೆಲಸಕೊಡುವುದಾಗಿ ಆತನ ಭವಿಷ್ಯಕ್ಕೂ ದಾರಿ ಮಾಡಲು ಮುಂದೆ ಬಂದಿದ್ದ.ರಾಮಯ್ಯನ ನಿವೃತ್ತಿ ಹಣ
ಸಕಾಲಕ್ಕೆ ಕೈ ಸೇರಿತ್ತು. ಮಗಳ ಮದುವೆ ಸಾಲ ತೀರಿತ್ತು. ಅವರ ಗೆಳೆಯನ ಮನೆ ಖಾಲಿ ಇದ್ದು ಅಡ್ವಾನ್ಸ್ ಇಲ್ಲದೆ ಕೊಡುವುದಾಗಿ ಕರೆದಿದ್ದರು.ನಿವೃತ್ತಿಯ ಪಿಂಚಣಿಯಲ್ಲಿ ಆರಾಮಾಗಿ
ಜೀವನ ಸಾಗಿಸಬಹುದಿತ್ತು.ಎಲ್ಲವೂ ಮಂಜಿನಂತೆ ಕರಗಿಹೋಗಿತ್ತು. ಈಗ ಆ ಮನೆ ಸೇರಲು ಹೊರಡಲು ಅನುವಾದರು. ಆದರೆ ಆ ಒಂದು ವರ್ಷ ಮಾತ್ರ ಮತ್ತೆ ಮತ್ತೆ ಕಾಡತೊಡಗಿತ್ತು.......,
Comments
ಉ: ಆ ಒ0ದು ವರ್ಷ....ಬಿಡದೆ ಕಾಡೋ ನೆನಪು.
In reply to ಉ: ಆ ಒ0ದು ವರ್ಷ....ಬಿಡದೆ ಕಾಡೋ ನೆನಪು. by venkatb83
ಉ: ಆ ಒ0ದು ವರ್ಷ....ಬಿಡದೆ ಕಾಡೋ ನೆನಪು.