ಆ ಚಿಗುರು ಮೀಸೆ ಹೈದ...

ಆ ಚಿಗುರು ಮೀಸೆ ಹೈದ...

ಕವನ

ಮತ್ತೆ ಬರದೆ ಹೋದ 

ಆ ಚಿಗುರು ಮೀಸೆ ಹೈದ... 
ಮಿಂಚಿನಂತೆ ಬಂದ 
'ಚೆಲುವೆ ನೀನು' ಎಂದ 
ಬೊಗಸೆ ಆಸೆ ತಂದ 
ಮತ್ತೆಲ್ಲೋ ಮಾಯವಾದ 
ಆ ಚಿಗುರು ಮೀಸೆ ಹೈದ...!
ಎದೆಯಲ್ಲಿ ಬಂದಿತಾಗ 
ಹರಯದ ಹೊಸ ರಾಗ 
ತಡೆಯದೆ ನಾ ಹೋದೆ 
ನನ್ನೆದೆಬಡಿತದ ವೇಗ!
ಹುಡುಕಲೆಲ್ಲಿ ಅವನ 
ಪ್ರೀತಿ ನೆಟ್ಟವನ 
ಎದೆಯಲ್ಲಿ ಮೂಡಿತೀಗ 
ಮೊಲ್ಲೆ ಮರುಗ ಧವನ! 
ಸುಮ್ಮನಿತ್ತು ವೀಣೆ 
ಮೀಟಿ ಏಕೆ ಹೋದ?!
ಅವನ ನೆರಳನಿಲ್ಲಿ 
ಬಿಟ್ಟು ಏಕೆ ಹೋದ
ಆ ಚಿಗುರು ಮೀಸೆ ಹೈದ...!
-ಮಾಲು 
('ಶತಮಾನಂ ಭವತಿ' ೧೨/೫/೧೩  ಸಂಜೆ ಬಿಡುಗಡೆಯಾದ 
3k ಕವಿತಾ ಸಂಕಲನದಲ್ಲಿ ಸೇರ್ಪಡೆಯಾದ 'ಮಾಲು' ಪದ್ಯ)