ಆ ಮುಸುಕಿನೊಳಗೆ ನಿನ್ನೊಡನೆ

ಆ ಮುಸುಕಿನೊಳಗೆ ನಿನ್ನೊಡನೆ

ಕವನ

ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕು
ಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕು
ನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕು
ಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕು
ಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ
ಕರೆದೊಯ್ಯುವೆಯಾ ,,,ಹೇ ಗೆಳತಿ ,,,,,
ಚಿಟ್ಟೆಯ೦ತೆ ಹಗುರವಾಗಬೇಕು
ನೀರಿನ೦ತೆ ಹರಿಯಬೇಕು
ಆಕಾಶದ೦ತೆ ಶುಬ್ರವಾಗಬೇಕು,,
ಆ ಮುಸುಕಿನೊಳಗೆ ನಿನ್ನೊಡನೆ......
ಕಿಲ ಕಿಲನೆ ನಗಬೇಕು ಮತ್ತೆ ಮತ್ತೆ ನಗಬೇಕು