ಆ ಹುಡುಗಿ

ಆ ಹುಡುಗಿ

ಬರಹ

ಲಾಲ್‌ಬಾಗ ಪುಷ್ಪಪ್ರದರ್ಶನ, ಎಲ್ಲೆಡೆ ಜನ ಜಂಗುಳಿ, ಒಂದು ಹುದುಗರ ಗುಂಪೂ ಅಲ್ಲಿ ಬಂದಿತ್ತು
ಆ ಹುಡುಗಿ ಸುಮಾರು 19 ವರ್ಷವಿರಬೇಕುಎರೆಡು ಜಡೆ ಭುಜದ ಮೇಲೆ ಕುಣಿಯುತ್ತಿತ್ತು. ಜೀನ್ಸ್ ಮೇಲೆ ಜಾಕೆಟ್ ಧರಿಸಿದ್ದಳು ಒಳಗೆ ಬಂದು ನಿಂತಳು. ಹುಡುಗರ ಕಣ್ಣುಗಳು ಸಹಜವಾಗಿಯೇ ಅವಳತ್ತ ವಾಲಿದವು . ಆಗಂತೆ ಅರಳಿದ ಸುಮದಂತೆ ಚೆಲುವಾಗಿದ್ದಳು

ಹುಡುಗರ ಮನಸಲ್ಲಿ ಪ್ರಶ್ನೆಗಳು ಆರಂಭವಾದವು . ಈ ಲಾಲ್ ಬಾಗ್‌ಗೆ ಒಂಟಿಯಾಗಿ ಯಾಕೆ ಬಂದಿದಾಳೆ ?

ಆಕೆ ಫೋನ್ ತೆಗೆದುಕೊಂಡು ಯಾರಿಗೋ ಫೋನ್ ಮಾಡಿದಳು. ಮತ್ತೆ ಯಾರಿಗೋ ಕಾಯುತೊಡಗಿದಳು ಅತ್ತಿಂದಿತ್ತ ಓಡಾಡತೊಡಗಿದಳು
ಹುಡುಗರು ತಮ್ಮಲ್ಲೇ ಮಾತನಾಡಿಕೊಂಡರು. ಪ್ರೇಮಿಗಾಗಿ ಕಾಯುತ್ತಿರಬಹುದು. ಅಂತ ಒಬ್ಬ ಹೇಳಿದ
ಏ ಇಲ್ಲ ಕಣೋ ಅವಳ ಕಣ್ಣಲ್ಲಿ ಲವರ್‌ಗೆ ಕಾಯೋ ಕಾತುರ ಇಲ್ಲ. ಇದು ಬೇರೆ ಕೇಸಿರಬೇಕು.ಮತ್ತೊಬ್ಬ ಹೇಳಿದ
"ಕೇಸಂದ್ರೆ?"
"ಅದೇ ಕಣೋ ಕಾಲ್‌ಗರ್ಲ್ ಇರಬೇಕು"
ಅವರ ಮಾತು ಅವಳ ಸುತ್ತಾ ಸುತ್ತುತಲೆ ಇತ್ತು.
ಅಷ್ಟರಲ್ಲಿ ಮದ್ಯವಯಸ್ಕನೊಬ್ಬ ಇವಳತ್ತ ಬಂದು ಏನೋ ಹೇಳಿದ . ಆಕೆ ಇಲ್ಲವೆಂಬಂತೆ ತಲೆ ಆಡಿಸಿ ಮತ್ತೆ ಕೊನೆಗೆ ಏತಕ್ಕೊ ಒಪ್ಪಿದಂತೆ ತಲೆ ಮೇಲೆ ಕೆಳಗೆ ಆಡಿಸಿದಳು
ಮತ್ತೆ ಆ ಹುಡುಗಿಗೆ ಆ ವ್ಯಕ್ತಿ ತನ್ನ ಪರ್ಸ್ ತೆಗೆದು ದುಡ್ದು ಕೊಟ್ಟ.
"ಈ ಹುಡುಗರ ಗುಂಪಲ್ಲಿ ಮಾತು " ಎಲ್ಲಾ ಬಿಟ್ಟು ಆ ಮುದಿಯಾನೆ ಬೇಕಿತ್ತಾ ಇವಳಿಗೆ ದುಡ್ಡು ಬೇಕಿದ್ರೆ ನಾವು ಕೊಡ್ತಿರಲಿಲ್ಲವೇನೋ"
ಸ್ವಲ್ಪ ಹೊತ್ತಿನ ನಂತರ ಅ ವ್ಯಕ್ತಿ ಹಾಅಗು ಆ ಹುಡುಗಿ ಜನಜಂಗುಳಿಯಲ್ಲಿ ಬೆರೆತು ಕಾಣದಾದರು.
"ಅಬ್ಬಾ ಮುದುಕನದೇ ಚಾನ್ಸ್ ಕಣೋ ಈಗೇನು ನಡೀತಿರುತ್ತೋ."
"ಬಾರೊ ಹೋಗಲಿ flower show ಆದ್ರೂ ನೋಡೋಣ"
"ಏ ಇಲ್ಲ ಕಣೋ ನಂಗೆ ಮೂಡೆ ಇಲ್ಲ"

ಬೇಜಾರು ಮಾಡಿಕೊಂಡ ಹುಡುಗರ ಗುಂಪು ಸುಮ್ಮನ್ದೆ ಗೇಟಿಂದ ಹೊರಗೆ ಹೊರಟಿತ್ತು

ಆದದ್ದಿಷ್ಟು
ಆ ಹುಡುಗಿ ತನ್ನ ತಂದೆಗೆ ಮೂರುದಿನದಿಂದ ತನ್ನ ನೆಚ್ಚಿನ ಸಿನಿಮಾಕೆ ಕರೆದುಕೊಂಡು ಹೋಗಲು ಹೇಳಿದ್ದಳು
ತಂದೆ ಒಪ್ಪಿರಲಿಲ್ಲ
ಅಂದು ಆ ಥೇಟರ್‌ನಲ್ಲಿ ಕೊನೆಯ ದಿನ
ಹಾಗಾಗಿ
ಅವಳು ಕೋಪ ಮಾಡಿಕೊಂಡು ಹಟ ಹಿಡಿದು ಇಲ್ಲಿ ಬಂದು ನಿಂತಿದ್ದಳು. ಕೊನೆಗೆ ತಂದೆಯೇ ಸೋತು ಇಲ್ಲಿಗೆ ಬಂದು ಮಗಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಬಂದಿದ್ದರು. ಅಷ್ಟೆ ಅಲ್ಲಾ ತನ್ನನ್ನು ಇಷ್ಟು ಕಾಡಿಸಿದ್ದಕ್ಕೆ ತನಗೆ ಕಾಂಪನ್ಸೇಷನ್ ಕೊಡಲು ಬೇಡಿಕೆ ಸಲ್ಲಿಸಿ ಅದನ್ನು ಸ್ಥಳದಲ್ಲಿಯೇ ತೆಗೆದುಕೊಂಡಿದ್ದಳು.

ಆ ಹುಡುಗಿ ಹಾಗು ಅವಳ ಅಪ್ಪ ಆರಾಮವಾಗಿ ಸಿನಿಮಾ ನೋಡಿದರು

ಇತ್ತ ಹುಡುಗರ ಗುಂಪು ತಲೆ ಕೆಡಿಸಿಕೊಂಡು ಒಂದು ನಾಲಕ್ಕು ದಮ್ಮು ಎಳೆದರು .