ಇಂಟೆಲ್‌ನಿಂದ 6 ಕೋರ್ ಸಂಸ್ಕಾರಕ

ಇಂಟೆಲ್‌ನಿಂದ 6 ಕೋರ್ ಸಂಸ್ಕಾರಕ

ಬರಹ

intel

ಇಂಟೆಲ್ ಕಂಪೆನಿಯು ಕ್ವಾಡ್ ಕೋರ್(4) ಪ್ರಾಸೆಸರ್‍ನಿಂದ  ಭಿನ್ನವಾದ ಸಂಸ್ಕಾರಕವನ್ನು ಅಭಿವೃದ್ಧಿ ಪಡಿಸಿದೆ. ಹೊಸ ಇಂಟೆಲ್ ಕ್ಸಿಯಾನ್ 7400 ಚಿಪ್ ಆರು ಸಂಸ್ಕಾರಕಗಳನ್ನು ಹೊಂದಿದೆ. ಇನೊಂದು ವಿಶೇಷವೆಂದರೆ,ಇದನ್ನು ಭಾರತದ ಅಭಿವೃದ್ಧಿ ಕೇಂದ್ರದಲ್ಲೇ ವಿನ್ಯಾಸಗೊಳಿಸಲಾಗಿದೆ.

ಆರು ಕೋರ್‌ಗಳು  ಇದ್ದರೆ ಒಂದೇ ಸಮಯದಲ್ಲಿ ಆರು ಕಂಪ್ಯೂಟರ್ ಅಪ್ಲಿಕೇಷನುಗಳನ್ನು ಕಂಪ್ಯೂಟರಿನಲ್ಲಿ ಒಟ್ಟಿಗೆ ಚಾಲೂ ಇಡಬಹುದು. ನಿಜವಾಗಿ ಇಂತಹ ಸಂಸ್ಕಾರಕಗಳು ಸರ್ವರ್ ಆಗಿ ಬಳಸುವ ಕಂಪ್ಯೂಟರುಗಳಲ್ಲಿ ಹೆಚ್ಚು ಪ್ರಯೋಜನಕಾರಿ-ನಮ್ಮ ಡೆಸ್ಕ್‌ಟಾಪ್ ಅಥವ ಲ್ಯಾಪ್‌ಟಾಪ್‍ಗಳಲ್ಲಿ ಇವು ಬೇಕೆಂದಿಲ್ಲ.ಈ ಸಂಸ್ಕಾರಕದಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆ ಹತ್ತಿರ ಹತ್ತಿರ ಎರಡು ಬಿಲಿಯನ್ ಅಷ್ಟು!ಈ ಸಂಸ್ಕಾರಕ ಅಭಿವೃದ್ಧಿಗೆ 200-300 ದುಡಿದಿದ್ದಾರೆ.45ನ್ಯಾನೋ ಮೀಟರ್‌ನ ಐ.ಸಿ. ತಂತ್ರಜ್ಞಾನ ಇದರಲ್ಲಿ ಬಳಕೆಯಾಗಿದೆ.ಹಳೆಯ ಸಂಸ್ಕಾರದ ಒಂದೂವರೆ ಪಟ್ಟು ಹೆಚ್ಚು ದಕ್ಷತೆ ಇದರಿಂದ ಸಿಗಲಿದೆ.

ಅಂದ ಹಾಗೆ ಬೆಂಗಳೂರಿನ ಇಂಟೆಲ್ ಇಂಡಿಯಾ ಘಟಕದಲ್ಲಿ ಎರಡೂವರೆ ಸಾವಿರ ಉದ್ಯೋಗಿಗಳಿದ್ದಾರೆ. ಇಲ್ಲಿ ಇಂಟೆಲ್ ಮಾಡಿದ ಹೂಡಿಕೆ 1.7 ಬಿಲಿಯನ್ ಡಾಲರು.

ಚಿತ್ರ: ಸಂಸ್ಕಾರಕದ ಬಿಡುಗಡೆ ಸಮಾರಂಭದಲ್ಲಿ ಯಕ್ಷಗಾನ)

ರಸಪ್ರಶ್ನೆ:

1.ಐಸಿ ತಂತ್ರಜ್ಞಾನ ಬಂದು ಎಷ್ಟು ವರ್ಷಗಳಾದುವು?

2.ಐಸಿಗಳ ಜತೆ ಬರುವ ನಿಯಮ ಯಾವುದು?

3.ಏನು ಈ ನಿಯಮ?