ಇಂಡಿಯಾ ೧೯೪೭ ರಲ್ಲಿ ಕಂಡ ಕನಸಿನಂತೆ ಬದುಕುತ್ತಿದೆಯೇ?
ಬರಹ
ಬಿಡುಗಡೆಯ ಅರವತ್ತನೇ ಏಡಿಗೆ ಅಡಿ ಇಟ್ಟ ಇಂಡಿಯಾ, ೧೯೪೭ರಲ್ಲಿ ಒಂದೊಮ್ಮೆ
’ಬಂಗಾರದ ಹಕ್ಕಿ’ ಅಂತ ಕರೆಸಿಕೊಳ್ಳುತ್ತಿದ್ದುದನ್ನು ಮತ್ತೆ ಪಡೆದುಕೊಳ್ಳುವ ಕನಸು
ಕಂಡಿತ್ತು. ಆನೆ ತೂಕದ ನಮ್ಮ ಈ ಡೆಮಾಕ್ರಸಿ ಇಂದು ಅದರಂತೆ ಬದುಕುತ್ತಿದೆ ಅಂತ
ಟೈಮ್ ವರದಿ ಮಾಡಿದೆ.
ಇಂಡಿಯಾಗೆ ಹರೆಯ ಮೂಡಿದೆ, ಇಂಡಿಯಾ ಬಡ ನಾಡು ಎಂಬ ಪಡುವಣ(ಪಾಶ್ಚಾತ್ಯ)
ನಾಡುಗಳಲ್ಲಿ ಇರುವ ಅನಿಸಿಕೆ, ತುಂಬಾ ಇತ್ತೀಚಿನದು, ಹಿಂದೊಮ್ಮೆ ನಮ್ಮ ನಾಡು ಇದೇ
ಪಡುವಣಿಗರಿಂದ ಬಂಗಾರದ ಹಕ್ಕಿ ಅನಿಸಿಕೊಂಡಿದ್ದು ಸುಳ್ಳಲ್ಲ.
ಆದರೆ ನಮ್ಮಲ್ಲಿರುವ ಬಡತನ, ಕೊಳಕು ರಾಜಕೀಯ, ಕೋಮುಗಳ ನಡುವಿನ ಬಡಿದಾಟ,
ನುಡಿಗಳ ಹೆಸರಲ್ಲಿ ಕಿತ್ತಾಟ, ಇದನ್ನೆಲ್ಲಾ ನೋಡಿದರೆ, ನಿಮಗೇನನಿಸುತ್ತೆ? ಇಂಡಿಯಾಗೆ
ಮೊದಲಿನ ಮೆರಗು ಬಂದೀತೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ