ಇಂತವರೂ ಇರ್ತಾರೆ...!!
ಇಂತವರೂ ಇರ್ತಾರೆ!!
ನಿರುದ್ಯೋಗಿಯಂತೆ ಕಾಣುತ್ತಿದ್ದ ಯುವಕನೊಬ್ಬ ಶ್ರೀಮಂತನ ಬಳಿ ಬಂದು ಸಮಯವೆಷ್ಟಾಯಿತೆಂದು ಕೇಳಿದ.ಅವರು ಮೌನವಾಗಿದ್ದರು.ಆತ ಮೂರ್ನಾಲ್ಕು ಸಾರಿ ಕೇಳಿದರೂ, ಅವರು ಮೌನವಾಗಿಯೇ ಇದ್ದರು.ಆತ ಮತ್ತಾರನ್ನೋ ಸಮಯ ಕೇಳಿ ತಿಳಿದುಕೊಂಡು ಹೊರಟುಹೋದ.ಇದನ್ನೆಲ್ಲ ಗಮನಿಸುತ್ತಿದ್ದ ಅಲ್ಲಿದ್ದ ಹಿರಿಯರೊಬ್ಬರು, ಶ್ರೀಮಂತರನ್ನು 'ನಿಮ್ಮ ಬಳಿ ಕೈಗಡಿಯಾರವಿದ್ದರೂ ಆತನಿಗೆ ಸಮಯವೇಕೆ ಹೇಳಲಿಲ್ಲ?ಎಂದರು.ಶ್ರೀಮಂತರು'ನಾನು ಸಮಯ ಹೇಳಿದ್ದರೆ ಆತ ನನ್ನೊಂದಿಗೆ ಸ್ನೇಹದ ಮಾತಿಗೆ ನಿಲ್ಲುತ್ತಿದ್ದ.ನನ್ನೊಂದಿಗೆ ಚಹಾ ಹಂಚಿಕೊಳ್ಳುತ್ತಿದ್ದ.ನನ್ನ ವಿಳಾಸ ಕೇಳುತ್ತಿದ್ದ.ಮುಂದೊಂದು ದಿನ ನಮ್ಮ ಮನೆಗೆ ಬರುತ್ತಿದ್ದ. ನನ್ನ ಒಬ್ಬಳೇ ಮಗಳನ್ನು ಭೇಟಿಯಾಗುತ್ತಿದ್ದ.ಪರಸ್ಪರ ಭೇಟಿಯ ನಂತರ ಅವರು ಸ್ನೇಹಿತರಾಗುತ್ತಿದ್ದರು.ಮುಂದೊಂದು ದಿನ,ನಾವು ಮದುವೆಯಾಗುತ್ತೇವೆ ನಮ್ಮನ್ನು ಆಶೀರ್ವದಿಸಿ ಎಂದು ಕೇಳುತ್ತಿದ್ದರು.ಒಂದು ಕೈಗಡಿಯಾರ ಕೊಳ್ಳುವಷ್ಟು ಶಕ್ತಿಯೂ ಇಲ್ಲದ ನಿರುದ್ಯೋಗಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನನಗೆ ಇಷ್ಟವಿಲ್ಲ.ಅದಕ್ಕೇ ನಾನು ಅವನಿಗೆ ಸಮಯ ಹೇಳಲಿಲ್ಲ'ಎಂದರು.ಅ ಹಿರಿಯರು,'ಈಗ ನಿಮ್ಮ ಮಗಳಿಗೆ ವಯಸ್ಸೆಷ್ಟು? 'ಎಂದಾಗ,ಅವರು'ಆಕೆಗೀಗ ಮೂರು ವರ್ಷ ವಯಸ್ಸು'ಎಂದರು.
#sklines
-@ಯೆಸ್ಕೆ
Comments
ಉ: ಇಂತವರೂ ಇರ್ತಾರೆ...!!
:))
ಉ: ಇಂತವರೂ ಇರ್ತಾರೆ...!!
ಖಂಡಿತ ಇರ್ತಾರೆ ಇಂತಹ ಮುಂದಾಲೋಚಕರು