ಇಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಯ ಮೌಲ್ಯ

ಇಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಯ ಮೌಲ್ಯ

೧. ಊರಲ್ಲಿ ಉತ್ತಮ ಸಾಹಿತಿಯಾಗಿದ್ದರೂ ಸಾಲದು ; ಕಿಸೆಯು ಯಾವತ್ತೂ ಹಣದಿಂದ ಕಂಗೊಳಿಸುತ್ತಿರಬೇಕು. ನೋಟಿದ್ದರೆ ಎಂಥ ಸಾಹಿತಿಗೂ ಪ್ರಶಸ್ತಿಗೆ ಬರಗಾಲವಿಲ್ಲ, ಇಲ್ಲದಿದ್ದರೆ ಸಾಹಿತಿಗೆ ಬರಿಗಾಲೇ ಗತಿ.

೨. ಸಾಹಿತಿಯಾಗಲು ಈಗೀಗ ಏನೂ ಕಷ್ಟವಿಲ್ಲ. ಗೂಗಲ್ ತೆರೆದರೆ ಎಲ್ಲವೂ ಕೈ ಅಳತೆಯಲ್ಲೆ ಸಿಲುಕುತ್ತದೆ ಕವಿಯಾಗಲು ಗೆಲುವಾಗಲು.

೩. ಇನ್ನೊಬ್ಬರ ಹಳಿಯುವ ಸಾಹಿತ್ಯವೇ ಈಗಿನ ಓದುಗರ ಕಣ್ಣಲ್ಲಿ ಬಹು ದೊಡ್ಡ ಸಾಹಿತ್ಯ ಭಂಡಾರವಾಗಿದೆ.

೪. ಈಗಿನ ಹೆಚ್ಚಿನ ಸಾಹಿತ್ಯಕ್ಕೆ ಮಾನದಂಡವೂ ಇಲ್ಲ. ಬರಹದ ಹಿಂದೆ ಮುಂದೆ ಓದು ಪರಿಶೀಲನೆ ಇಲ್ಲವೇ ಇಲ್ಲ. ಎಲ್ಲವೂ ಅಲರ್ಜಿ.

೫. ಇಂದಿನ ಹೆಚ್ಚಿನ ಸಾಹಿತ್ಯ ಮತ್ತು ಸಾಹಿತಿಗಳ ಪರಿಸ್ಥಿತಿ ಹಲವರ ಲೆಕ್ಕದಲ್ಲಿ ಕೂಸು ಹುಟ್ಟುವ ಮುನ್ನವೇ ಅಂಗಿ ಹೊಲಿಸಿಟ್ಟಂತೆ ಆಗಿದೆ.

೬. ಕವಿ ಸ್ವಯಂ ಘೋಷಿಸಿ ಕೊಂಡ ಕೂಡಲೆ ಸಂಘಟಕ ಪೇಟ ತೊಡಿಸುವುದರಿಂದ ನಿಜವಾದ ಕವಿ ಮನೆಯೊಳಗೆ ಇರುತ್ತಾನೆ. ಸ್ವಯಂ ಘೋಷಿತ ಕವಿ ವೇದಿಕೆಯಲ್ಲಿರುತ್ತಾನೆ.

ಇಂತಹ ಬೆಳವಣಿಗೆ ಸಾಹಿತ್ಯಲೋಕಕ್ಕೆ ಒಂದು ಕಳಂಕ . ಅನಾದಿ ಕಾಲದಿಂದಲೂ ಸ್ವಲ್ಪಮಟ್ಟಿಗೆ ಇದ್ದ ಈ ವಿಚಾರಗಳು ಕಂಪ್ಯೂಟರ್ ಯುಗದಲ್ಲಿ ಹದ್ದು ಮೀರಿದ್ದು ನಾವೆಲ್ಲರೂ ಆಲೋಚಿಸ ಬೇಕಾದ್ದೇ ಆಗಿದೆ. “ಸಾಹಿತ್ಯ ವಲಯದಲ್ಲಿ ಕಂಪ್ಯೂಟರ್ ಕ್ರಾಂತಿಯಾದದ್ದೇ ; ತಿಳಿದ -- ಅರಿತ ಸಾಹಿತಿ ಅವಕಾಶಕ್ಕಾಗಿ ಬಾಯೊಡೆದು ಕುಳಿತನಂತೆ”

ವಿ.ಸೂ :- ಯಾರನ್ನೂ ಉದ್ದೇಶ ಪೂರ್ವಕವಾಗಿ ಇಲ್ಲಿ ಅವಹೇಳನ ಮಾಡಿಲ್ಲ. ನನಗೆ ನನ್ನ ೪೩ ವರುಷಗಳ ಸಾಹಿತ್ಯ ಕ್ಷೇತ್ರದಲ್ಲಿ ಆದ ಅನುಭವದ ಮೇಲಿಂದ ನಾಲ್ಕು ಮಾತುಗಳ ಬರೆದಿರುವೆ. ಎಲ್ಲರೂ ಅಂಥವರಲ್ಲ ; ಆದರೂ ಇಂಥವರೂ ಇದ್ದಾರೆ ಎಂದು ತಿಳಿಸುವ ಸಣ್ಣ ಪ್ರಯತ್ನವಷ್ಟೆ.

-ಹಾ ಮ ಸತೀಶ  ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ