ಇಂದಿನ ಮಹಾಭಾರತ :
ನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗುರು ಹಿರಿಯರನ್ನು ನಗೆಪಾಟಲಿಗೆ ಈಡು ಮಾಡುತ್ತಿರುವ ಈ ಮಾತ್ಸ್ಯ ನ್ಯಾಯದ ಆರ್ಥಿಕ / ಸಾಮಾಜಿಕ ವ್ಯವಸ್ಥೆ ಇಂತಿದೆ :
೧. ಹುಚ್ಚು ಮುಂಡೆ ಮದುವೆಯಲ್ಲಿ ಸಾಫ್ಟ್ ವೇರ್ ಬಂದೋನೇ ಜಾಣ
೨. ವ್ಹೆನ್ ಈಂಡಿಯಾ ಇಸ್ ಬರ್ನಿಂಗ್ ಐ. ಸಿ. ಎಲ್ (Indian Cricket League) ಇಸ್ ಫ್ಹಿಡ್ಡ್ಲಿಂಗ್
೩. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಓಡಿಸಲು ಲಕ್ಶುರಿ ಕಾರು ಬೇಕು
೪. ಗಂಡಾ ಗುಂಡಿ ಮಾಡಿಯಾದರೂ ಗಡಿಗೆ ಬೀರು ಕುಡಿ
೫. ರೈತರ ಕೊಂದ ಪಾಪ ಪೀಟ್ಜಾ ತಿಂದು ಕೋಕ್ ಕುಡಿದು ಪರಿಹಾರ
೬. ಡಾಲರ್ ಇದ್ದವನಿಗೆ ಸಂತೆಯಲ್ಲೂ ನಿದ್ದೆ
೭. ಅಂತೂ ಕನ್ನಡದ ಮಕ್ಕಳಿಗೆ ಕಾವೇರಿ ನೀರಿಲ್ಲ
೮. ಕೈ ಕೆಸರಾಗದಿದ್ದರೂ ಬಾಯಿ ಮೊಸರು
೯. ಡಾಲರಿರಲವ್ವಾ ಮನೆ ತುಂಬ
೧೦. ಪೀಟ್ಜಾಕ್ಕಿಂತ ರುಚಿಯಿಲ್ಲ ‘ಎಮ್. ಎನ್. ಸಿ.’ ಕಂಪೆನಿಗಿಂತ ಬಂಧುವಿಲ್ಲ
೧೧. ಏನೇ ಬರಲಿ ಗೋವಿಂದನ ಮೇಲೆ ದಯೆಯಿರಲಿ !
೧೨. ನೀನ್ ಯಾಕೋ ನಿನ್ನ ಹಂಗ್ಯಾಕೋ, ನಿನ್ನ ಬ್ರಾಂಡ್ ನೇಮಿನ ಬಲವೊಂದೇ ಸಾಕೋ ಜೀವನಕೆ
೧೩. ಹಿತ್ತಲ ಮತ ಮದ್ದಲ್ಲ / ಕಟ್ಟುಕೊಂಡ ಮತಕ್ಕಿಂತ ಇಟ್ಟುಕೊಂಡ ಮತವೇ ಚೆನ್ನ
೧೪. ಭಾರತಕ್ಕೆ ಮಾರಿ, ಅಮೆರಿಕಕ್ಕೆ ಉಪಕಾರಿ
ಈ ಕೌರವಾಡಳಿತದಲ್ಲಿ, ನಮ್ಮ ಅದಃಪತನದ ಸಮಯದಲ್ಲಿ ಬೇಡೋಣ ನಾವು ‘ಕೃಷ್ಣಾ ನೀ ಬೇಗನೆ ಬಾರೋ ಬರುವ ಎಲೆಕ್ಷನಲ್ಲಿ ಗೆಲ್ಲೋ, ಕಾಪಾಡೋ ನಮ್ಮ ಪುರಂದರ ವಿಠಲ’