'ಇಂದು ಮುಂಬೈ ಆಕಾಶವಾಣಿಯಲ್ಲಿ 'ಕರ್ಣ ಭೇದದ ಗಮಕ ವಾಚನ'ವನ್ನು ಮಾಡಲಾಯಿತು' !
ಮುಂಬೈ ಮಹಾನಗರದ ಆಕಾಶವಾಣಿಯ 'ಸಂವಾದಿತ ಚಾನೆಲ್' ನಲ್ಲಿ ಇಂದು, ಶನಿವಾರ (೬, ಸೆಪ್ಟೆಂಬರ್, ೨೦೧೪),ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಗಮಕವಾಚನದ ಮೊದಲಭಾಗ, ಗಮಕವಾಚನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲು, ಶ್ರೀ. ಎಚ್.ಬಿ.ಎಲ್.ರಾವ್, ಕಲಾವಿದರ ಪರಿಚಯಮಾಡಿಕೊಟ್ಟರು ಇದರಲ್ಲಿ ಭಾಗವಹಿಸಿದ ಕಲಾವಿದರು : ಚಂದ್ರಶೇಖರ ಕೆದಲಾಯ ವಾಚನ ಮಾಡಿದರು., ’ಅಂಬಾತನಯ ಮುದ್ರಾಡಿ’ ಎಂಬ ಕಾವ್ಯನಾಮ ಹೊಂದಿದ ಕೇಶವ ಶೆಟ್ಟಿಗಾರರಿಂದ ಅದರ ಅರ್ಥವನ್ನು ಸುಂದರವಾಗಿಯೂ ಮನೋಜ್ಞವಾಗಿಯೂ
ವಿವರಿಸಲಾಯಿತು
ಚಂದ್ರಶೇಖರ ಕೆದಲಾಯ :
೮೦ ವರ್ಷ ಪ್ರಾಯದ, ಕೆದಲಾಯ, ಸಂಗೀತಜ್ಞ, ಭಕ್ತಿಗೀತೆ,ಸಾಹಿತ್ಯ, ಗಮಕವಾಚನ,ಸಂಗೀತ ಕ್ಷೇತ್ರದಲ್ಲಿ ಕೈಯಾಡಿಸಿದ್ದಾರೆ. ೪೦ ವರ್ಷಗಳಿಂದ ಕರ್ನಾಟಕ ಆಕಾಶವಾಣಿಯ ಹಿರಿಯ ಕಲಾವಿದಾಗಿ ದುಡಿದು ನಿವೃತ್ತರಾಗಿರುವ ಕೆದಲಾಯ. ಇಂದಿಗೂ ಸಕ್ರಿಯರಾಗಿ ಕೆಲಸಮಾದುತ್ತಿದ್ದಾರೆ.
’ಅಂಬಾತನಯ ಮುದ್ರಾಡಿ’ :
ಮೇಲಿನ ಕಾವ್ಯನಾಮ ಹೊಂದಿದ ೮೦ ರ ಹರೆಯದ, 'ಕೇಶವ ಶೆಟ್ಟಿಗಾರ', ಆದರ್ಶ ಅಧ್ಯಾಪಕ, ಗಮಕವಾಚನ, ಈ ಇಬ್ಬರು ಕಲಾವಿದರಿಗೂ ಗಮಕವಾಚನ ಕರಗತವಾಗಿದೆ. ಕವಿ, ಸಾಹಿತಿ,ಯಕ್ಷಾಗಾನ ಪ್ರಸಂಗಕಾರರು,ವೇಷಧಾರಿಗಳು, ಜಿನದಾಸರು,
೮೨ ರ ಪ್ರಾಯದ ಎಚ್. ಬಿ. ಎಲ್. ರಾವ್ :
ಕನ್ನಡ ಸಾಹಿತ್ಯ ಪರಿಷತ್ತು (ಮುಂಬೈ ಘಟಕದ ಅಧ್ಯಕ್ಷರು), ಕರ್ನಾಟ ಗಮಕ ಕಲಾ ಪರಿಷತ್ತು, (ಮಹಾರಾಷ್ಟ್ರ ವಿಭಾಗದ ಅಧ್ಯಕ್ಷರು) ಶ್ರಿ. ಎಚ್. ಬಿ. ಎಲ್. ರಾವ್, ಸ್ವತಃ ಯಕ್ಷಗಾನ ಕಲಾವಿದ. ಮುಂಬೈ ಮಹಾನಗರದ ಧಾರ್ಮಿಕ, ಸಾಂಸ್ಕೃತಿಕ, ಮತ್ತು ಸಾಹಿತ್ಯ ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡಮ್ಮನ ಪರಿಚಾರಿಕರಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. ಇವರೊಬ್ಬ ಅತ್ಯುತ್ತಮ ಸಂಘಟಕರು.
ಶ್ರೀಕೃಷ್ಣ ಸಂಧಾನದಲ್ಲಿ ಕರ್ಣನನ್ನು ಭೆಟ್ಟಿಯಾಗಿ, ಆಡಿದ ಮಾತುಕತೆಗಳನ್ನು ಗಮಕ ವಾಚನಕ್ಕೆ ಅರ್ಥವಿವರಣೆ ಕೊಡುವ ಮೂಲಕ ಸುಂದರವಾಗಿ ನಡೆಸಿಕೊಡಲಾಯಿತು.
ಕಾರ್ಯಕ್ರಮದ ನಿರೂಪಣೆ, ಸುಶೀಲ ದೇವಾಡಿಗ. ಕಾರ್ಯಕ್ರಮ ಆಯೋಜನೆ, ರಾಯ್ಸಿಂಗಾನಿ.