ಇಂದು ರೀಮೇಕ್ ಸಿನೆಮಾ ಕಥೆಯ ಆಯ್ಕೆ ಎಷ್ಟು ಸರಿಯಾಗಿದೆ?

ಇಂದು ರೀಮೇಕ್ ಸಿನೆಮಾ ಕಥೆಯ ಆಯ್ಕೆ ಎಷ್ಟು ಸರಿಯಾಗಿದೆ?

ಬರಹ

ಇಂದು ರೀಮೇಕ್ ಸಿನೆಮಾ ಕಥೆಯ ಆಯ್ಕೆ ಎಷ್ಟು ಸರಿಯಾಗಿದೆ?
ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಕನ್ನಡ ಸಿನೆಮಾ ನೋಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಸಿನೆಮಾ ಮಂದಿ ಟಿವಿಯಲ್ಲಿ ನಿತ್ಯ ಹೇಳುತ್ತಿರುತ್ತಾರೆ.ನಮ್ಮ ಸಿನೆಮಾ ನೋಡಿ, ನಮ್ಮ ಸಿನೆಮಾ ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿರುತ್ತಾರೆ.ಆದರೆ ಅವರು ಯೋಚಿಸದ ಅಥವಾ ಯೋಚಿಸಲು ಇಷ್ಟ ಪಡದ ವಿಷಯವೆಂದರೆ ತಮ್ಮ ಸಿನೆಮಾದಲ್ಲಿ ಸರಿಯಾದ ಕಥಾವಸ್ತುವಿದೆಯೇ ಎಂದು.ಎಲ್ಲಾ ಸಿದ್ಧವಾದ ಪರ ಭಾಷಾ ಚಿತ್ರಗಳ ಸಣ್ಣ ಎಳೆ ಹಿಡಿದೋ ಅಥವಾ ಗೆದ್ದ ಚಿತ್ರಗಳ ಸಂಪೂರ್ಣ ಕಥೆಯನ್ನೋ ಭಟ್ಟಿ ಇಳಿಸಿ ಚಿತ್ರ ಬಿಡುಗಡೆಗೊಳಿಸುತ್ತಾರೆ.ಹೀಗೆ ನಿತ್ಯ ಒಂದು ರೀಮೇಕ್ ಸಿನೆಮಾ ಬರುತ್ತಿದ್ದರೆ ಜನ ಅದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?ಈಗ ಸಿನೆಮಾ ಮಂದಿಗೆ ಕಥೆ ಹೇಗಿದೆ ಅನ್ನುವುದಕ್ಕಿಂತ ಅದು ಎಷ್ಟು ಹಣ ಗಳಿಸಬಹುದು ಎಂದು ಲೆಕ್ಕಾಚಾರ ಹಾಕುವುದೇ ಚಿಂತೆ.ಚಿತ್ರಗಳು ಇಂದು 25 ದಿನ ಮಂದಿರದಲ್ಲಿ ನಡೆದರೆ ಅದೇ ದೊಡ್ಡ ಸಾಧನೆ. ಏನು ಗತಿ ಬಂತು ಕನ್ನಡಕ್ಕೆ? ನಾನು ಇಂದು ಕನ್ನಡ ಚಿತ್ರಗಳ್ಯಾವೂ ಸರಿ ಇಲ್ಲ ಎಂದೇನೂ ಹೇಳುತ್ತಿಲ್ಲಾ.ಆದರೆ ಅವುಗಳು ಚಿತ್ರರಂಗದವರ ರಾಜಕೀಯದಿಂದಲೇ ಹೆಚ್ಚು ಪ್ರದರ್ಶನ ಕಾಣದೆ ಹೋಗುತ್ತವೆ. ಇವೆಲ್ಲಾ ಎಂದು ಸರಿ ಹೋಗುತ್ತವೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet