ಇಂದ್ರಿಯ ಸೆರೆ !
ಕವನ
ಅನಂತ ಸುಖದ ಸ್ವರ್ಗದ ಹಾದಿಯಲಿ
ಸಚ್ಚಿದಾದಂದದ ಅನ್ವೇಷಣೆಯಲಿ
ಭಕ್ತಿ- ಜ್ನಾನ ಯೋಗದಲೆಯ ಮೇಲೆ ತೇಲುತ್ತಿರಲು
ಜಪ-ತಪ ಧ್ಯಾನ ಯೋಗದಲಿ ಒಂದಾಗಿ ಬೆರೆತಿರಲು
ಕಾಣದ ಕೈಯೊಂದು, ಮಾಯೆಯ ಸುಳಿಯೊಂದು
ರಸತಳ- ಪಾತಾಳಕೆ ಸೆಳೆದೊಯ್ದಿತು.
ಎಲ್ಲಿ ಅರ್ಥ-ಕಾಮದ ವಿಷ ಜಂತುಗಳಿರುವುದೋ
ಅವಿದ್ಯೆಯ ಬಿರುಗಾಳಿ ಬೀಸುವುದೋ
ಅವರ್ಣದ ಮೋಡ ಮುಸುಕಿರುವುದೋ
ಎಲ್ಲಿ ಭ್ರಾಂತಿಯಲಿ ಬಾಳು ತೊಳಲುತ್ತಿರುವುದೋ
ಮನ, ವಿಕ್ಷೇಪ , ವಿಕಾರಗಳ ಬಲಿಯಾಗಿರುವುದೋ
ಇಂದ್ರಿಯಗಳ ಪೈಶಾಚಿಕ ನೃತ್ಯ ಸಾಗಿರುವುದೋ
ಎಲ್ಲಿ ಅಹಂ ! ಅಹಂ ! ಎಂದು ಜೀವ ಘೀಳಿಡುವುದೋ
ಅಲ್ಲಿ,
ನರಕ ತಾಪದಲಿ
ಪಾಪ ಕೂಪದಲಿ
ಸೆರೆಯಾಳಾಗಿರುವೆ
ಬಂಧನವೆಲ್ಲಾ ತೊರೆದು
ಮನವ ನಿಗ್ರಹಿಸಿ
ಆ ಪ್ರೇಮ-ಸಾಗರದಲಿ ನಾನೊಂದು ಹನಿಯಾಗುವ ಬಯಕೆ
ಪರಮಾತ್ಮನಲ್ಲಿ ಒಂದಾಗುವ ತವಕ ಜೀವಕೆ !
ಶ್ರೀ ನಾಗರಾಜ್.
Comments
ಉ: ಇಂದ್ರಿಯ ಸೆರೆ !
In reply to ಉ: ಇಂದ್ರಿಯ ಸೆರೆ ! by Rajendra Kumar…
ಉ: ಇಂದ್ರಿಯ ಸೆರೆ !
ಉ: ಇಂದ್ರಿಯ ಸೆರೆ !
In reply to ಉ: ಇಂದ್ರಿಯ ಸೆರೆ ! by venkatb83
ಉ: ಇಂದ್ರಿಯ ಸೆರೆ !
ಉ: ಇಂದ್ರಿಯ ಸೆರೆ !
In reply to ಉ: ಇಂದ್ರಿಯ ಸೆರೆ ! by makara
ಉ: ಇಂದ್ರಿಯ ಸೆರೆ !
In reply to ಉ: ಇಂದ್ರಿಯ ಸೆರೆ ! by S.NAGARAJ
ಉ: ಇಂದ್ರಿಯ ಸೆರೆ !