ಇಂಧನ ಖಾಲಿಯಾದ್ರೆ ಬಂಧನ !

ಇಂಧನ ಖಾಲಿಯಾದ್ರೆ ಬಂಧನ !

ಭಾರತದಲ್ಲಿ ನೀವು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಇಂಧನ ಖಾಲಿಯಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು ನೋಡೇ ಇರುತ್ತೀರಿ. ನಮ್ಮಲ್ಲಾದರೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಅಥವಾ ಡೀಸಿಲ್ ತಂದು ತುಂಬಿಸಿದರಾಯಿತು. ಮತ್ತೆ ಪ್ರಯಾಣ ಶುರು. ಅಲ್ಲವೇ? ಆದರೆ ಹೀಗೆ ನಿಮ್ಮ ಕಾರಿನ ಇಂಧನವು ಜರ್ಮನ್ ದೇಶದಲ್ಲಿ ಖಾಲಿಯಾಗಿ ನಿಮ್ಮ ಕಾರ್ ರಸ್ತೆ ಪಕ್ಕ ನಿಲ್ಲಿಸಿದ್ದರೆ…

ನೀವು ಸೀದಾ ಜೈಲಿಗೆ ಹೋಗಬೇಕಾಗುತ್ತದೆ. ಅದೂ ಒಂದೆರಡು ದಿನಗಳಿಗಲ್ಲ. ಬರೋಬ್ಬರಿ ಒಂದು ತಿಂಗಳಿಗೆ. ಹಾಂ, ಮತ್ತೆ ಕೇಳಿ ಈ ಜೈಲು ಶಿಕ್ಷೆಯ ಜೊತೆಗೆ ಒಂದು ದೊಡ್ಡ ಮೊತ್ತದ ದಂಡವನ್ನೂ ಕಟ್ಟಬೇಕು. ಹಾಗಾಗಿ ಜರ್ಮನಿಗೆ ಹೋದಾಗ ಡ್ರೈವ್ ಮಾಡೋ ಮನಸ್ಸಾದರೆ  ನೀವು ಬಿಡೋ ಕಾರಿನಲ್ಲಿ ಇಂಧನ ಪೂರ್ಣ ಪ್ರಮಾಣದಲ್ಲಿ ಇದೆಯೇ ಎಂಬುದನ್ನು ಮಾತ್ರ ಮೊದಲು ಚೆಕ್ ಮಾಡಿ. ಜರ್ಮನಿಯಲ್ಲಿ ನೀವು ಇಂಧನ ಖಾಲಿ ಆಗುತ್ತದೆ (?!) ಎಂದು ವಿಪರೀತ ವೇಗದಲ್ಲಿ ಪ್ರಯಾಣ ಮಾಡಿದರೆ ನಿಮಗೆ ಯಾವ ದಂಡವೂ ಇಲ್ಲ. ! ಇದೇನಪ್ಪ ಆಶ್ಚರ್ಯ? ಏನು ಈ ದೇಶದ ವಿಚಿತ್ರ ಕಾನೂನು ಅಂತೀರಾ? ಹೌದು, ವೇಗದ ವಾಹನ ಚಲಾವಣೆಗೆ ಅಲ್ಲಿ ದಂಡ ಕಟ್ಟಬೇಕಿಲ್ಲ !

ಆದರೆ ಇಂಧನ ಖಾಲಿಯಾದರೆ ಜೈಲು ಎನ್ನುವ ಕಾನೂನು ಇರುವುದು ಅಲ್ಲಿನ ವಾಹನ ದಟ್ಟನೆಯನ್ನು ನಿಯಂತ್ರಿಸಲು. ಕಾರೊಂದು ರಸ್ತೆಯ ಪಕ್ಕ ಇಂಧನ ಖಾಲಿಯಾಗಿ ನಿಂತು ಬಿಟ್ಟರೆ ಅಲ್ಲಿ ಸಂಚಾರ ದಟ್ಟನೆಯ ಸಮಸ್ಯೆ ಪ್ರಾರಂಭವಾಗಿ ಬಹಳಷ್ಟು ಮಂದಿಗೆ ತೊಂದರೆಯಾಗುತ್ತದೆ. ಈ ರೀತಿಯ ಜೈಲು ಶಿಕ್ಷೆಯ ಕಾನೂನಿನ ಹೆದರಿಕೆಯಿಂದಾಗಿ ಎಲ್ಲರೂ ಪರ್ಯಾಪ್ತ ಪ್ರಮಾಣದಲ್ಲಿ ಇಂಧನ ತುಂಬಿಸಿಕೊಂಡೇ ಹೊರಡುತ್ತಾರೆ. ನಮ್ಮಲ್ಲಿ ಈ ರೀತಿಯ ಕಾನೂನು ಬಂದರೆ…?

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ