ಇಂಪಾದ ಸಂಜೆಯ ತಂಪು ..
ಕವನ
ಒಂದು ದಿನ ಸಂಜೆ ಹೊತ್ತು
ನೀನು ಬಂದಿದ್ದು ಕತ್ತಲಿಗೆ ಗೊತ್ತು
ಕಾಯುತ್ತಿದ್ದೆ ನಾನು ನಿನಗಾಗಿ
ನೀನು ಬಂದಿದ್ದೆ ನನಗಾಗಿ
ಮನ ಖುಷಿಯಿಂದ ಮಿಡಿಯಿತು
ನಗುವಿನ ಬಳ್ಳಿ ಹಬ್ಬಿತು
ಮಾತಿನ ಮಿಂಚು ಗುಡುಗಿತು
ಭಾವನೆಗಳ ನಕ್ಷತ್ರ ಹೊಳೆಯಿತು
ನೀ ನನಗೆ ಮೆಲ್ಲನೆ ಅಪ್ಪಿದೆ
ಸುಂದರ ಪ್ರೀತಿಯ ಮನಸಾಯಿತು
ಮಿಲನದ ಹೊತ್ತು ಕತ್ತಲಾಯಿತು
ತುಟಿಯ ಅಂಚಿನಲಿ ಪ್ರೀತಿ ತುಂಬಿತು
ಮಾತು ಮರೆತು ಮೌನವಾಯಿತು
ನಯನಗಳ ಮಿಲನ ಮನಗಳ ತಲ್ಲಣ
ಎರಡು ಜೀವಗಳ ಒಂದೇ ಪಯಣ
ಮೂಡಿದ ಭಾವಗಳ ಸುಂದರ ಗಾಯಣ