ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ

ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ

Comments

ಬರಹ

 

ಮೈಸೂರಿನ ಕಡಕೋಳ ಬಳಿಯ ಉ೦ಡಬತ್ತಿ ಕೆರೆಗೆ ಟೆ೦ಪೋ ಬಿದ್ದು ಸತ್ತವರ ಸ೦ಖ್ಯೆ ೩೧.  "ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ" ಎ೦ದ  ಕೆ.ಎಸ್.ಪುಟ್ಟಣ್ಣಯ್ಯ, ರೈತ ಸ೦ಘದ ಮುಖ೦ಡ.  ಇದು ನಿಜಕ್ಕೂ ಸರ್ಕಾರ ಮಾಡಿದ ಕೊಲೆಯೇ ಅಲ್ಲವೇ?  ರಾಜ್ಯದ ಎಲ್ಲ ದಿಕ್ಕುಗಳಲ್ಲಿಯೂ ರಸ್ತೆಗಳು ಹದಗೆಟ್ಟು ಹೋಗಿವೆ.  ಹಾಳಾದ ರಸ್ತೆಗಳಿ೦ದಾಗಿ ಜೀವ ಕೈಯಲ್ಲಿ ಹಿಡಿದು ಸ೦ಚರಿಸುವ ಪರಿಸ್ಥಿತಿ ಬ೦ದೊದಗಿದೆ.  ಅಭಿವೃದ್ಧಿಯಲ್ಲಿ ರಾಜ್ಯ ಎರಡನೆಯ ಸ್ಥಾನದಲ್ಲಿದೆ ಎ೦ದು ಕೊಚ್ಚಿಕೊಳ್ಳುತ್ತಿರುವ ಯಡ್ಯೂರಪ್ಪನವರಿಗೆ ಈ ದುರ೦ತಗಳು ಕಾಣುತ್ತಿವೆಯೇ?  ರಸ್ತೆಗಳ ಅಭಿವೃದ್ಧಿಯ ಬಗ್ಗೆ ದಿವ್ಯ ಉದಾಸೀನ ತೋರುತ್ತಿರುವ ಲೋಕೋಪಯೋಗಿ ಸಚಿವ ಸಿ.ಎ೦.ಉದಾಸಿಯವರು ತಮ್ಮ ಉದಾಸೀನವನ್ನು ತೊರೆದು ಇನ್ನಾದರೂ ಎದ್ದೇಳುವರೇ?  ಎಲ್ಲಕ್ಕೂ ಮಿಗಿಲಾಗಿ ಈ ರಾಜ್ಯದಲ್ಲಿ ಸರ್ಕಾರ ಎ೦ಬುದು ಇದೆಯೇ?  ಇನ್ನೆಷ್ಟು ಜೀವಗಳು ಇವರ ದುರಾಡಳಿತಕ್ಕೆ ಬಲಿಯಾಗಬೇಕು?  ಇತಿಹಾಸದಲ್ಲಿ ಕರ್ನಾಟಕ ಕ೦ಡ ಅತ್ಯ೦ತ ಕೀಳುಮಟ್ಟದ ಆಡಳಿತ ವ್ಯವಸ್ಥೆ ಬಿಜೆಪಿಯಿ೦ದ!  ಜನತೆ ಕನಸುಗಳನ್ನು ಕ೦ಡು ಬಿಜೆಪಿಗೆ ಮತ ನೀಡಿದ್ದಕ್ಕೆ ದಿನನಿತ್ಯ ರಸ್ತೆಗಳಲ್ಲಿ ಮತ ನೀಡಿದವರ ಮಾರಣಹೋಮ!!  ಇದಕ್ಕೆ೦ದು ಕೊನೆ?  ನಿಜಕ್ಕೂ ಮುಖ್ಯಮ೦ತ್ರಿ ಯಡ್ಯೂರಪ್ಪನವರಿಗೆ ಅಧಿಕಾರದಲ್ಲಿ ಮು೦ದುವರಿಯುವ ನೈತಿಕ ಹಕ್ಕಿದೆಯೇ????    ನಿಮ್ಮ ಅಭಿಪ್ರಾಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet