ಇದು ಜಗದ್ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯ !

ಇದು ಜಗದ್ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯ !

ಇದು ಜಗದ್ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯ. devalayada shilpa'ಯುನೆಸ್ಕೊ ವಿಶ್ವ ಪರಂಪರೆಯ ತಾಣ'ವೆಂದು ಪ್ರಖ್ಯಾತಿಯಾಗಿದೆ. ಸೂರ್ಯದೇವಾಲಯ ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊಂದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು  ೧೩ ನೆಯ ಶತಮಾನದಲ್ಲಿ ಮೂರನೆಯ ನರಸಿಂಹ ರಾಜನ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿದೆಎಂದು ಚರಿತ್ರಾಕಾರರು ಹೇಳುತ್ತಾರೆ.   ಬ್ರಿಟಿಷರಕಣ್ಣಿಗೆ ಬಿದ್ದ ಈ ದೇಗುಲವನ್ನು  ಅವರು  'ಪುರಾತತ್ವ ಇಲಾಖೆ'ಯ ಅಡಿಯಲ್ಲಿ ಇರಿಸಿ  ದೇವಾಲಯವನ್ನು ಸಂರಕ್ಷಿಸಿದರು. ಗರ್ಭಗುಡಿಯ ಸೂರ್ಯನ ವಿಗ್ರಹವನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.  ಸಮುದ್ರದಮೇಲಿನ ಬಿರುಗಾಳಿ ದೇವಾಲಯನ್ನು ಘಾಸಿಗೊಳಿಸಿದೆ. ಗುಡಿಯ ಪಾಯದಲ್ಲಿ ಉಸುಕುಮನ್ನು ಇರುವುದರಿಂದ  ಬಿಗಿ ಬರದೇ ದೇವಾಲಯವನ್ನು ಬಿದಿರುಮೆಳೆಗಳ ಆಧಾರಕೊಟ್ಟು ನಿಲ್ಲಿಸಿದ್ದಾರೆ. ಇಲ್ಲಿನ ಮಿಥುನ ಶಿಲ್ಪಗಳು ರಥ ಚಕ್ರಗಳ ಅಂದ- ಚೆಂದ ಪರ್ಯಟಕರ ಗಮನ ಸೆಳೆಯುತ್ತದೆ. ಆನೆ-ಸಿಂಹಗಳ ಸೇರುವಿಕೆಯ ಕಲೆ, ಕುದುರೆಗಳು, ಕುದುರೆ  ಸವಾರರು, ಮೊದಲಾದ ಶಿಲ್ಪಗಳು ನೋಡಲು ಯೋಗ್ಯವಾಗಿವೆ.  ವರ್ಷಕ್ಕೊಮ್ಮೆ ನಡೆವ 'ಕೋನಾರ್ಕ ಉತ್ಸವ'ವನ್ನು ಭಕ್ತಾದಿಗಳು ಆಸ್ಥೆಯಿಂದ ನೋಡಲು ಕಾಯುತ್ತಿರುತ್ತಾರೆ. 

ಕೊಣಾರ್ಕದ ದೇವಾಲಯ  ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳು ಕೊನಾರ್ಕಿನ  ಭವ್ಯ ಸೂರ್ಯ ದೇವಾಲಯ, 'ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ' ಎಂದು ಪರಿಗಣಿಸಲಾಗಿದೆ. ಭಾರತದ  ಧಾರ್ಮಿಕ ಶಿಲ್ಪಕಲೆಯಲ್ಲಿ ಮಾನ್ಯತೆಯನ್ನು ಗಳಿಸಿವೆ.  ಈಗ ಭಾಗಶ: ಹಾಳಾಗಿರುವ ಈ ದೇವಾಲಯ, ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ಶ್ರದ್ಧಾಳುಗಳ ನಂಬಿಕೆಯಂತೆ , ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪಾದಕಮಲಗಳಲ್ಲಿ ಬೀಳುತ್ತಿದ್ದವು !