ಇದು ನಮ್ಮ ಬದುಕು,

ಇದು ನಮ್ಮ ಬದುಕು,

ಇಂದು ಹನುಮ ನಾಳೆ ಭೀಮ

ಮತ್ತೆ ಆ ರಾಮಾ...

ಕಾಸುಹಾಕಿದರೆ ಬದುಕು ತುಸು ಆರಾಮ..

 

ಹೊಟ್ಟೆಗಾಗಿ ಈಬಣ್ಣ..

ಹಾಕದಿರೆ ಹಿಡಿಮಣ್ಣ

 

ಸಂಸಾರ ಸಾಗರೋಲಂಘನ ಬಲು ಕಠಿಣ!

ಈ ಬಹುರೂಪ...

ನಿಶ್ಚಿಂತೆ ಅಪರೂಪ

 

ಪಾಪಗಳ ಕಳೆಯಲು ದೇವರು ಬಂದ ನಂತೆ.. 

ಇಲ್ಲಿ ಪಾಪದ ಹೊಟ್ಟೆಯ ಹೊರಲು ದೇವರಾ ವೇಷ,

ವಾಸ್ತವ ಬದುಕಿನ ವಿಪರ್ಯಾಸ!

 

-ಅಶೋಕ ಪ್ರ ದೇಸಾಯಿ ಕಲಬುರಗಿ