ಇದು ಯಾವೂರ ಭಾಷೆ ?
ಕವನ
ಕನ್ನಡ ನಾಡಿದು ನಮ್ಮದು ಎನ್ನುವ
ಹೆಮ್ಮೆಯು ಹರಿದಿದೆ ನರನಾಡಿ
ಕನ್ನಡ ಮಾತೆಗೆ ಮಣಿಯುವ ಭಕ್ತಿಯು
ನಮ್ಮಯ ಎದೆಯಲಿ ಮನೆಮಾಡಿ
ನೌಕರಿ ಹಿಡಿಯಲು ಬರುವರು ಕೆಲವರು
ಜೀವನ ಪಯಣಕೆ ರಹದಾರಿ
ಅಂಗಡಿ ಇರಿಸಲು ಬರುವರು ಹಲವರು
ಲಾಭವ ದೃಷ್ಟಿಯ ವ್ಯಾಪಾರಿ
ಕನ್ನಡ ಮಾತೆಯು ದೂರಕೆ ತಳ್ಳದೆ
ಮಡಿಲನ್ನೀವಳು ಮಮತೆಯಲಿ
ಬದುಕನು ನೀಡಿದ ಕನ್ನಡ ಮಾತೆಗೆ
ಗೌರವ ಇಲ್ಲವೆ ಇವರಲ್ಲಿ?
ಕನ್ನಡ ಅರಿಯದ ಯಾರನೊ ಕರೆವರು
ಬರೆಸಲು ಕನ್ನಡ ಬರಹಗಳ
ಏನಿದರರ್ಥವು ಯಾರಿಗೆ ಅರಿವುದು?
ಮಾಡುವರಿಂತಹನರ್ಥಗಳ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಚಿತ್ರ್