ಇದೆಂಥಾ ವಿಪರ್ಯಾಸ ?
ಅವತ್ತೊಂದು ದಿನ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ.
ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ..
START SPORTSನಲ್ಲಿ WWE (ಕುಸ್ತಿ) ಬರ್ತಾ ಇತ್ತು. ಧಡೀ ನನ್ ಮಕ್ಳು ಕಿರುಚಾಡಿ ಕೂಗಾಡೋದನ್ನ ನೋಡಿದೆ (ಹಂಗೆ ಪಕ್ಕದಲ್ಲಿ ನಿಂತ್ಕೊಳೋ ಮಸ್ತ್ ಮಸ್ತ್ ಫಾರಿನ್ ಬೇಬ್ ಗಳ್ನ ಹೆಂಡ್ತಿ ಮನೇಲಿ ಇಲ್ದೇ ಇರೋ ಟೈಂನಲ್ಲಿ ನೋಡ್ಕೊಂಡು ಬಿಡೋಣ ಅಂತ ಅನ್ಕೊಂಡು ನೋಡಕ್ಕೆ ಶುರು ಮಾಡ್ದೆ).
ಒಬ್ಬ ಇಂಡಿಯನ್ ಕುಸ್ತಿಪಟು, ಹೆಸರು ಕಾಳಿ. ಅಜಾನುಬಾಹು, ಅನಾಮತ್ತು 7 ಅಡಿ ಇದಾನೆ. ಒಂದು ಚಾಂಪಿಯನ್ ಶಿಪ್ ಗೆದ್ದಿದ್ದ. ಅವನ ಮ್ಯಾನೇಜರ್ ಕೂಡಾ ಓರ್ವ ಅಮೇರಿಕ ಸಂಜಾತ ಭಾರತೀಯ.
ಕಾಳಿ ಗೆದ್ದ ಮೇಲೆ, ರಿಂಗ್ ಒಳಗೆ ಪ್ರಶಸ್ತಿ ಕೊಟ್ಟ ಮೇಲೆ ಕಾಳಿಯ ಮ್ಯಾನೇಜರ್ ಅವನನ್ನು ಇಂದ್ರ, ಚಂದ್ರ, ದೇವೇಂದ್ರ ಅಂತೆಲ್ಲ ಹೊಗಳಿ, ಬರೀ ಅಮೇರಿಕನ್ ಕುಸ್ತಿಪಟುಗಳು ಮಾತ್ರ ಗೆಲ್ತಾ ಇದ್ದ ಪಂದ್ಯದಲ್ಲಿ ಇವನು ಗೆದ್ದಿದಾನೆ, ಭಾರತದ ಹೆಸರು ಮೇಲೇರಿಸಿದ್ದಾನೆ... (ಇದಾದ ಮೇಲೆ ಅವನು ಹೇಳಿದ್ದು ಕೇಳಿ ನಂಗೆ ಅವನ ಮಾತು ಕೇಳಿ ಉರಿ ಕಿತ್ಕೊಂಡಿದ್ದು). "ಇವತ್ತು ಈ ಗೆಲುವಿನಿಂದ, ಕಾಳಿಯು ಭಾರತೀಯ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರುತ್ತನೆ..ಮಹಾತ್ಮ ಗಾಂಧಿ, ಭಗತ್ ಸಿಂಗ್, ಮದರ್ ತೆರೆಸಾ ಮುಂತಾದವರುಗಳ ಜೊತೆಗೆ ಇವನ ಹೆಸರೂ ಸೇರುತ್ತದೆ".
ಸರಿ, ಕಾಳಿಯೇನೋ ಗೆದ್ದ.. ಆದ್ರೆ ಆ ಅಮೇರಿಕನ್ ಜನಗಳು ಆ ಕುಸ್ತಿಯನ್ನ ನೋಡಲು ಬಂದವರಿಗೆ ಅಪ್ಪಿ ತಪ್ಪಿ ಸ್ವಲ್ಪ ನಮ್ಮ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಗೊತ್ತಿದ್ರೆ, ಅವರು ನಮ್ಮ ದೇಶದ ಜನರ ಆಲೋಚನಾಶಕ್ತಿಯ ಬಗ್ಗೆ ತಿ* ಬಡ್ಕೊಂಡು ನಗೋದಿಲ್ವಾ ??
ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಿಸಲು ಅವನೇನು ಅಂಥಾದ್ದನ್ನ ಕಿತ್ತಿ ಹಾಕಿದ್ದು ?
ಇನ್ನು ನಮ್ಮ ಅನಿವಾಸಿ ಭಾರತೀಯರು (ABCD - Abroad Born Confused Desi's) ಅವರಿಗೆ ಭಾರತದ ಬಗ್ಗೆ ಇರೋ ಅರಿವು ಎಷ್ಟು ಅಂತ ನಾನೇನು ಹೇಳಬೇಕಾಗಿಲ್ಲ (ಎಲ್ಲಾ ಅನಿವಾಸಿ ಭಾರತೀಯರು ಹಾಗೆ ಅಲ್ಲಾ, ಕೆಲವರಿಗೆ ಭಾರತದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಚರಿತ್ರೆ ಬಗ್ಗೆ ಇರುವ ಪ್ರೌಢಿಮೆ ಅಪಾರವಾದದ್ದು). ಆದರೆ WWE ಕಾಳಿಯ ಮ್ಯಾನೇಜರ್ ಥರದ ಅನಿವಾಸಿ ಭಾರತೀಯರು ಪಾಶ್ಚಾತ್ಯರ ಮುಂದೆ ನಮ್ಮ ದೇಶದ ಚರಿತ್ರೆ ಹಾಗು ಮಹಾನ್ ವ್ಯಕ್ತಿಗಳನ್ನು ನಗೆಪಾಟಲು ಮಾಡ್ತಾ ಇದಾರೆ.
ಇದನ್ನೇ ವಿಪರ್ಯಾಸ (IRONY) ಅನ್ನೋದು.
-------------------------------------------------------------------------------------
ನಿಮ್ಮವನು
ಕಟ್ಟೆ ಶಂಕ್ರ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com