ಇದ್ಯಾವ ನ್ಯಾಯ? (ಒಂದು ಸುನೀತ)

ಇದ್ಯಾವ ನ್ಯಾಯ? (ಒಂದು ಸುನೀತ)

ಬರಹ

ಜಾತ್ರೆಯಲ್ಲಿ ಕಡಿದರೆ ಮೂಢನಂಬಿಕೆ, ಪ್ರಾಣಿಘಾತ
ಈದ್‌ನಲ್ಲಿ ಕಡಿದರೆ ತ್ಯಾಗ-ಬಲಿದಾನಗಳ ಸಂಕೇತ!

ಪ್ರಾಣಿಹಿಂಸೆ ಕಂಡರೆ ಸಂಸದೆಯೋರ್ವರ ಆಕ್ರಂದನ
ಗೋಹತ್ಯೆ ಕಂಡೂ ಕೂಡ ಸರ್ಕಾರವೇ ಮೌನ!

ಹಜ್ ಯಾತ್ರೆ ’ಕೈ’ಗೊಳ್ಳಲು ಎಲ್ಲ ಬಗೆಯ ನೆರವು
ಕಾಶಿಯಾತ್ರೆಗೆ ಹಣವಿಲ್ಲದ ಬಡವರ ಬಗ್ಗೆ ಮರವು!

ದೇವಸ್ಥಾನಕ್ಕೆ ಬಂದ ಕಾಣಿಕೆ ಸರ್ಕಾರದ ಆಸ್ತಿ
ವಕ್ಫ್ ಮಂಡಳಿಗಳಿಗೆ ಮಾತ್ರ ಸಹಾಯ’ಹಸ್ತ’ ಜಾಸ್ತಿ!

ಬಹುಪತ್ನಿತ್ವ, ಘೋಷಾ...ಅವರ ಧರ್ಮಬದ್ಧ ಹಕ್ಕು
ಕುಂಕುಮ, ಕೇಸರಿಗೆ ಮಾತ್ರ ಕಾನೂನಿನ ಸಿಕ್ಕು!

ಮಾಧ್ಯಮಗಳಲ್ಲಿ ಅವರು ’ಮುಸ್ಲಿಂ ಬಾಂಧವರು’
ಇವರು ಮಾತ್ರ ’ಮನುವಾದಿ, ಪುರೋಹಿತಶಾಹಿಗಳು’!

’ಜಾತ್ಯತೀತ ರಾಷ್ಟ್ರ’ದಲ್ಲಿ ಅವರ ತುಷ್ಟೀಕರಣ
ಬಹುಸಂಖ್ಯೆಯ ಹಿಂದು ಜನಸ್ತೋಮದ ಕಡೆಗಣನ!

(P.S. ಈ ಸುನೀತಕ್ಕೆ ಈ ಕೆಳಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳ ಪೈಕಿ ಆಕ್ಷೇಪಗಳಿಗೆ ಉತ್ತರವಾಗಿ, ’ಇದ್ಯಾವ ನ್ಯಾಯ : ಆಕ್ಷೇಪಕ್ಕೆ ಉತ್ತರ’ ಎಂಬ ಪ್ರತ್ಯೇಕ ಲೇಖನ ಪ್ರಕಟಿಸಿದ್ದೇನೆ. ದಯೆಯಿಟ್ಟು ಅದನ್ನೂ ಓದಿ.)