ಇನ್ನಷ್ಟು ಆಯ್ದ ಗಾದೆಮಾತುಗಳು(೩೧-೪೦) :

ಇನ್ನಷ್ಟು ಆಯ್ದ ಗಾದೆಮಾತುಗಳು(೩೧-೪೦) :

ಬರಹ

(ಬೇಕೆಂತಲೇ ಹೆಚ್ಚು ವಿವರಣೆ ಕೊಡುತ್ತಿಲ್ಲ; ಮೆದುಳಿಗೆ ಮೇವಾಗಿರಲಿ ಅಂತ!)
೩೧. ಆಳ ನೋಡಿ ಹಾರು .
೩೨. ಆಳುದ್ದದ ಬಾವಿ ಮುಚ್ಚಬಹುದು , ಗೇಣುದ್ದದ ಹೊಟ್ಟೆ ಮುಚ್ಚಲಾಗದು.
೩೩. ಆಳೋರಿಲ್ಲದೆ ನಾಡು ಕೆಟ್ಟಿತು.
೩೪. ಇಕ್ಕಟ್ಟಾದರೂ ತನ್ನ ಮನೆಯೇ ಚೆಂದ .
೩೫. ಇಕ್ಕುವವಳು ನಮ್ಮವಳಾದರೆ ಕೊಟ್ಟಿಗೆಯಲ್ಲಾದರೂ ಉಂಡೇನು.
೩೬. ಇಟ್ಟರೆ ತೊಟ್ಟರೆ ಪುಟ್ಟಕ್ಕನೂ ಚೆಂದ. (--ಬಟ್ಟೆ ,ಒಡವೆ )
೩೭. ಇತ್ತತ್ತ ಬಾ ಅಂದರೆ ಹೆಗಲೇರಿ ಕೂತ .
೩೮. ಇದ್ದ ಮಕ್ಕಳಿಗೇ ಕೂಳಿಲ್ಲ ; ಮತ್ತೊಂದು ಕೊಡೋ ಶಿವರಾಯ ಅಂದರಂತೆ.
೩೯. ಇದ್ದರೆ ಈ ಊರು . ಎದ್ದರೆ ಮುಂದಿನೂರು . ( ನಿಶ್ಚಿಂತಾತ್ಮನ ಪರಿ!)
೪೦. ಇದ್ದಾಗ ನವಾಬ ; ಇಲ್ಲದಾಗ ಫಕೀರಸಾಬ ( ಹಣ ಇದ್ದಾಗ ಧಾರಾಳತನದಿಂದ ಇದ್ದು ಇಲ್ಲದಾಗ ಬಡ ಫಕೀರನಂತಿರುವದು )