ಇನ್ನಷ್ಟು ಆಯ್ದ ಗಾದೆ ಮಾತುಗಳು(೨೧-೩೦)
ಬರಹ
೨೧. ಅರಮನೆಯಿದ್ದರೂ ನೆರೆಮನೆ ಬೇಕು
೨೨. ಅರಸನ ಅಂಕೆಯಿಲ್ಲ ; ದೆವ್ವದ ಕಾಟ ಇಲ್ಲ .(ನಿಶ್ಚಿಂತ ಜೀವನ)
೨೩. ಅರಸನ ಕುದುರೆ ಲಾಯದಲ್ಲಿ ಮುಪ್ಪು . ( ಮಂತ್ರಿಯ ಕಾರು ಷೆಡ್ಡಿನಲ್ಲಿ ತುಕ್ಕು ಹಿಡಿದ ಹಾಗೆ!)
೨೪. ಅರಸನ ಮಾನ ಅರಸನಿಗೆ , ಅಗಸನ ಮಾನ ಅಗಸನಿಗೆ.
೨೫. ಅರಿಯೆ ಅನ್ನುವದನ್ನು ಆನೆ ಕೊಟ್ಟಾದರೂ ಕಲಿ.
೨೬. ಅರಿಯೆನೆಂದರೆ ಅರವತ್ತು ಗುಣ , ಕಾಣೆನೆಂದರೆ ಕೋಟಿ ಗುಣ.
೨೭. ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು.
೨೮. ಅಲ್ಪ ಕಾರ್ಯಕ್ಕೆ ಅರಮನೆಗೆ ಹೋಗಬಾರದು.
೨೯. ಅಲ್ಲದ ಕೆಲಸಕ್ಕೆ ಹೋಗಿ ಹಲ್ಲು ಮುರಿಸಿಕೊಂಡ ಹಾಗೆ.
೩೦. ಅವ್ವನ ಸಂಗಡ ಉಂಡರೇನು , ಅಪ್ಪನ ಸಂಗಡ ಉಂಡರೇನು?