ಇನ್ನಷ್ಟು ಗಝಲ್ ಮತ್ತು ಹನಿಗಳು

ಇನ್ನಷ್ಟು ಗಝಲ್ ಮತ್ತು ಹನಿಗಳು

ಕವನ

ಗಝಲ್

ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ  ಕೂಗುತಿದೆ ಜಾತಿಯಿದೆಯೆಂದು

ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು

 

ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ

ಕತ್ತು ಉಳುಕಿ ತಲೆಯೆತ್ತಲಾಗದಿದ್ದರೂ ಪ್ರಜಾಪ್ರಭುತ್ವವೇ ಹೇಳುತಿದೆ ಜಾತಿಯಿದೆಯೆಂದು

 

ಕೊರೊನಾದ ನಡುವೆಯಲ್ಲಿಯೂ ಕಾನೂನುಗಳೆಲ್ಲವೂ ಗಾಳಿಯೊಳಗೇ ತೂರಿಕೊಂಡು ಹೋಗಿವೆ

ಧರಣಿಕೂತವರಿಗೆಲ್ಲ ಕಾಶಿಗೆ ಹೋಗುವ ಚೊಂಬಲ್ಲಿ ನೀರು ಕೊಟ್ಟು ಕಳಿಸುತಿದೆ ಜಾತಿಯಿದೆಯೆಂದು

 

ಮುಟ್ಟಿಸಿಕೊಳ್ಳದಿರುವ ತತ್ವಗಳಡಿಯಲ್ಲೇ ಚುಕ್ಕಾಣಿ ಹಿಡಿದವರ ಆಡಳಿತ ಯಂತ್ರ ಕೆಲಸ ಮಾಡುತ್ತಿದೆ 

ಸಮಾನತೆಗೆ ಅಡ್ಡಲಾಗಿರುವ ಅಸಮಾನತೆಯ ನಡುವಿನಲ್ಲಿಯೇ ಚಲಿಸುತಿದೆ ಜಾತಿಯಿದೆಯೆಂದು

 

ನಿಜವಾದ ಆಲೋಚನೆಗಳ ಭವಿಷ್ಯದಡಿಯಲಿ ದೇಶವೆಂದೂ ಸಾಗದಿರುವುದೆ ಶೋಚನಿಯವು ಈಶಾ 

ಸಂವಿಧಾನದಡಿಯೇ ಇರಬೇಕಾಗಿದ್ದ ನೆಲ ವರ್ಗದೊಳಗೆ ಸಿಲುಕಿ ಒಡೆಯುತಿದೆ ಜಾತಿಯಿದೆಯೆಂದು

***

ಹನಿಗಳು

ನೋವಿನಲ್ಲಿಯು

ನಲಿವಿರಲಿಯೆಂದೂ

ಒಲವಿರಲಿ !

 

ಜೀವದಲೆಗೆ

ಚಂದಿರನ ಬೆಳಕು

ಹುಣ್ಣಿಮೆಯಾಗು !

 

ಪ್ರೀತಿಯುಸಿರು

ನಿನ್ನಂತೆಯೆ ಕಾಣಲಿ

ದಿನಕರನೆ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್