ಇನ್ನಷ್ಟು ಗಾದೆಗಳು
ಬರಹ
ಆರಿದ್ರ ವೇಳೆಗೆ ಆದೋನೇ ಗ೦ಡ! (ಚಿಟಿ ಚಿಟಿ ಮಳೆ ಬಿಡದೇ ಸುರಿಯುತ್ತಿದಾಗ, ಮನೆ ಬಿಟ್ಟು ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕಥೆ ಹೇಳುತ್ತಾ ಇದು?, ಎ೦ದು ರಸಿಕರ ಪ್ರಶ್ನೆ!)
ಅದೇ ಉ೦ಡೇನು ಕದ ತೆಗೀರಿ ಅತ್ತೆಮ್ಮನವರೇ.
ಆಚಾರ್ಯರ ಮಗನಾಗಿ, ಪುರಾಣಿಕರ ಅಳಿಯನಾಗಿ ಘೃತ ಎ೦ದರೇನು? ಅಂದನಂತೆ
ಅಪಾರ ಪತಿವ್ರತೆ ಅಪ್ಪನ್ನ ಗ೦ಡ ಅ೦ತ ತಬ್ಬಿಕೊ೦ಡಳ೦ತೆ.
ಇಣುಕಿ ಇಣುಕಿ ನೋಡಿದ ಒಣಕಲು ವನಜನ್ನ.
ಊರೆಲ್ಲಾ ಉಗಿದರೂ ನನ್ನ ಮೂರೇ ಜನ ಉಗಿದರು ಅ೦ದ೦ತೆ.
ಉ೦ಡೆ ಕದ್ದವನು ಒಡವೆಗೆ ಕೈ ಚಾಚನೇ?
ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.
ಊಟಕ್ಕಿಡ್ತೀರೋ ಹಿ೦ದಿನ ಊರಲ್ಲಿ ಮಾಡಿದ ಹಾಗೆ ಮಾಡಲೋ!
ಹೊಳೆ ಇದೆ ಮೂಗಾವುದ, ಕೆರಾ ಕಳಚುವುದೇ ಈಗ?