ಇನ್ನಷ್ಟು ಹನಿಗಳು...

ಇನ್ನಷ್ಟು ಹನಿಗಳು...

ಕವನ

ದ್ವೇಶದ

ಪ್ರಥಮ ತುದಿ

ಕತ್ತಿಯ ಮೊನೆ...

ಅಂತಿಮ ತುದಿ

ಸಾವಿನ ಕೊನೆ!

***

ಬಡತನದಲಿ

ಬದುಕಿದ

ಬದುಕೇ

ಶ್ರೇಷ್ಠ ಕಣಾ...

ಶ್ರೀಮಂತಿಕೆಯೆಲ್ಲೇನಿದೆ

ಬರೀ

ಭಣ ಭಣ!

***

ವಾಂಛಲ್ಯ

ವಂಶ ವೃಕ್ಷವನು

ನೆಟ್ಟು 

ಬೆಳಸಲೆಣಿಸುತಿರುವ

ರಾಜಕಾರಣಿಗಳೇ...

ವೃಕ್ಷ ಬೆಳೆವುದು

ತನ್ನ ಅಂತಃ 

ಸಾಮರ್ಥ್ಯದಿಂದಲೇ

ಎಂಬ ಸತ್ಯ

ಮನಗಾಣಿರೇ...

ವಾಂಛಲ್ಯ-

ನಿಮ್ಮದು;

ಆಯ್ಕೆ-

ಹೈಕಮಾಂಡ್ ನದು;

ದುರದೃಷ್ಟ-

ಪ್ರಜೆಗಳದು!

***

ವಿಶ್ವ ಮಾನವ...

ಜಾತಿ ಧರ್ಮಗಳ

ದೇಶ-ದೇಶಗಳ

ಎಲ್ಲೆಯನು ಮೀರಿ

ಸತ್ಯ-ಧರ್ಮ-ನೀತಿಗಳ

ಸ್ವಚ್ಛಂದ ಆಕಾಶದಲಿ

ಹಾರಾಡುವ ಬನ್ನಿ...

ವಿಶ್ವ ಮಾನವರೆಂಬ

ವಿಶಾಲ ಸಾಗರದಲಿ

ತೇಲಾಡುವ ಬನ್ನಿ...

ಈ ಸವಿಯನುಂಡು

ತೇಲಾಡಿದವನೇ

ಈ ಲೋಕದಲಿ

ಪರಮ ಸುಖಿ ಎನ್ನಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್