ಇನ್ನಷ್ಟು ಹನಿಗಳು...

ಇನ್ನಷ್ಟು ಹನಿಗಳು...

ಕವನ

 

ರಾಜಕೀಯ ಹೊಂದಾಣಿಕೆ 

ಈ ರಾಜಕೀಯದಲ್ಲಿ

ಕಾರ್ಯಾಭಿಲಾಶೆಗೆ

ಒಂದಾದವರು-

ಎಂದೂ

ಹಾಲೂ-ಜೇನಾಗಿ

ಬೆರೆಯದ ಚಾಣಾಕ್ಷರು...

 

ಅವರು

ಬೆರೆತದ್ದು

ನೀರು-ಸೀಮೇಎಣ್ಣೆಯಂತೆ;

ಬೇಡವೆನಿಸಿದಾಗ

ಶೋಧಿಸಿ ಬೇರೆಯಾಗುವ

ಬುದ್ಧಿವಂತರು!

***

ಪ್ರಜಾಪ್ರಭುತ್ವದ ಮೌಲ್ಯ 

ನಮ್ಮದು

ಮೌಲ್ಯಯುತ

ಪ್ರಜಾಪ್ರಭುತ್ವ-

ಇಲ್ಲಿ ಬರೀ

ಅಧಿಕಾರಕಾಗಿ

ಸಾಫ್ಟ್ ಕಚ್ಛಾಟ...

 

ಮಿಲಿಟರೀ

ಆಡಳಿತದ

ರಾಷ್ಟ್ರಗಳನು

ನೋಡಿ-

ಅಲ್ಲಿ ಅಧಿಕಾರಕಾಗಿ

ಕ್ರೂರ ಕೊಚ್ಛಾಟ!

***

ಭೂತ-ಪ್ರೇತ....

ಆ ಎಳೆ

ಮಗುವನ್ನು

ಕರುಣೆಯಿಲ್ಲದೆ,

ಕೊಂದದ್ದು

ಆ ಹೆತ್ತಮ್ಮನಲ್ಲ;

ಅದೊಂದು ಪ್ರೇತ...

 

ಆಕೆ ಧಿಕ್ಕರಿಸಿ

ಆ ಗಂಡನೊಂದಿಗೆ

ಮಾಡಿಕೊಂಡಿದ್ದ

ಆ ಡೈವೋರ್ಸ್

ಎಂಬ

ಮಹಾಭೂತ!

***

ಭಾರತೀಯರು ನಾವು ಒಂದೇ...

ಆಮೇಲೆ ಸಿದ್ಧಾಂತವೆಂದೇ...

ಕಾಂಗ್ರೆಸ್ ನಿಂದ

ತಿರಸ್ಕಾರ-

ಅಯೋಧ್ಯೆಯಲ್ಲಿ

ನಡೆಯಲಿರುವ

ರಾಮಲಲ್ಲಾ

ಪ್ರಾಣ ಪ್ರತಿಷ್ಠಾನ...

 

ಅಯ್ಯೋ...

ಭಾರತೀಯರೇ-

ತೋರಿಸಿ

ಮೊದಲು

ನಾವು ಒಂದೇ ಎಂಬ

ಸಂಸ್ಕೃತಿ-ಅಭಿಮಾನ!

***

ಕುರೂಪ-ಸುರೂಪ 

ಪ್ರತಿ ದಿನವೂ

ನೋಡುತ್ತಿದ್ದರೆ

ಆ ಸುರ

ಸುಂದರಿಯೂ

ಕಾಣುವಳು

ಕುರೂಪ...

 

ಅಪರೂಪಕ್ಕೊಮ್ಮೆ

ನೋಡಿದರೆ

ಆ ಮುದಿ

ಕತ್ತೆಯಲ್ಲೂ

ಕಾಣುವಿರಿ

ಸುರೂಪ!

***

ಅಪೇಕ್ಷೆ.....

ಏನೂ ಕೇಳದಿರ

ವಿಧೇಯ

ಸತಿ ಸಾವಿತ್ರಿಯಂತಹ

ಹೆಂಡತಿಯನು

ಬಯಸುವನು

ಯಜಮಾನ...

 

ಹೆಂಡತಿಗೆ ಇರಬೇಕು

ಮೂಕ ಬಸವ

ಪ್ರಶಾಂತ ಹೃದಯೀ

ಗಂಡನೆಂಬ ಪ್ರಾಣಿ

ಬಿಟ್ಟ- ಸಿಟ್ಟು

ಬಿಗುಮಾನ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್