ಇನ್ನಷ್ಟು ಹನಿಗಳು...

ಇನ್ನಷ್ಟು ಹನಿಗಳು...

ಕವನ

ಬಾಲ್ಯ ಮತ್ತು ವಾರ್ಧಕ್ಯ

ಬಾಲ್ಯವದು

ಮೂಡಣದ

ಚಿಲುಮೆಯ ಸೂರ್ಯ-

ಹೊಸ ಉತ್ಸಾಹ

ವಿಸ್ಮಯ

ಕೌತುಕದ ಬೆರಗು...

 

ವಾರ್ಧಕ್ಯವದು

ಪಡುವಣದ

ಬಸವಳಿದ ಆರ್ಯ-

ಸಾರವಿಲ್ಲದ

ಅದೇ ಅನುಭಾವ

ಹಳತೆಂಬ ಕೊರಗು!

***

ಆದರ್ಶಗಳ ಧೂಳೀಪಟ

ಅತ್ತ ಕಡೆ ರಾಮ

ಇತ್ತಕಡೆ ಗಾಂಧಿ

ಮಗದೊಂದು ಕಡೆ

ಧರ್ಮರಾಯರು-

ಮೇಲೆ ಅಳುತಿಹರು

ನೋಡಾ...

 

ರಾಜಕೀಯದೊಂಬರಾಟಕೆ

ಮಾತ್ರ ಅವರ ಹೆಸರು...

ಅವರಾದರ್ಶಗಳನು

ಯಾರೂ ಬಳಕೆ

ಮಾಡುತಿಲ್ಲವೋ

ಮೂಢಾ!

***

ಇತಿಹಾಸ 

ತಿನ್ನುವ ಅನ್ನ

ಹೊಟ್ಟೆ ಬಟ್ಟೆ

ಆಶ್ರಯಕಾಗಿ-

ಎಂದೂ ಹುಟ್ಟಲಿಲ್ಲ

ರೋಚಕ

ಇತಿಹಾಸ...

 

ಅದು ಹುಟ್ಟಿದ್ದು- 

ಮಾನವನ

ಅರಿಷಡ್ವರ್ಗಗಳ

ಹುಚ್ಚು ಕುಣಿತದಿಂದಲೇ

ಎಂಬುದು

ವಿಪರ್ಯಾಸ!

***

ಹಣದ ಬಾಜಿ  

ಕುದುರೆ ಜೂಜು

ಲಾಟರಿ

ಕಾರ್ಡ್ಸ್-

ಆರಂಭದಲಿ

ಎಲ್ಲರದೂ

ಉತ್ಕಟ ಸಂಭ್ರಮ...

 

ಅಂತ್ಯದಲಿ

ಕೆಲವರದೇ

ಗೆಲುವು;

ವಿಕೃತ ಸಂತೋಷ...

ಸೋತ ಬಹು ಜನ

ನಿರಾಸೆಯ ವಿಭ್ರಮ!

***

ಜಾಹೀರಾತಿನ ಕೀರ್ತಿ 

ಸಿದ್ಧಾಂತ

ಸದ್ಗುಣ

ಪರೋಪಕಾರ-

ಇವುಗಳಿಂದ

ಗಳಿಸಿದ ಕೀರ್ತಿಯೇ

ಕೀರ್ತಿ ಕಣಾ....

 

ರಾಜಕಾರಣಿಗಳು

ಬೋಗಸ್

ಜನಪ್ರಿಯತೆಗಾಗಿ

ಚೆಲ್ಲಿಸುವರು-

ಪುಟ ಪುಟ ಜಾಹೀರಾತಿಗೆ

ರಾಶಿ ಹಣಾ!

***

ಸಿರಿ-ಗರ 

ಎಪ್ಪತ್ತು

ಲಕ್ಷರೂ

ಕೇರಳ

ಲಾಟರಿ 

ಗೆದ್ದ ವ್ಯಕ್ತಿ

ಆತ್ಮಹತ್ಯೆ...

 

ಅವನಲ್ಲದ

ಸಿರಿಯ

ಹರಿವು-

ತಂತೇ

ಅವನ

ಪ್ರಾಣಕ್ಕೆ ಕುತ್ತೇ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್