ಇನ್ನಷ್ಟು ಹನಿಗಳು...!

ಇನ್ನಷ್ಟು ಹನಿಗಳು...!

ಕವನ

ಅಸಾಧ್ಯಾನುಭವ

ಅವರವರ-

 

ಹುಟ್ಟಿನಾಗಮದ

ಸಂಭ್ರಮದ

ಸುಖವ

ಕಂಡವರಿಲ್ಲ....

 

ಸಾವಿನ ಕೂಪದ

ಭಯಾನಕ

ಅನುಭವವ

ಹೇಳ್ದವರಿಲ್ಲ!

***

ಸುಂದರ ಸಂಸಾರ!

ಅವನು

ಗಂಡ-

ಕರ್ತವ್ಯದ

ಸರದಾರ...

 

ಇವಳು

ಹೆಂಡತಿ-

ಹಕ್ಕುಗಳ

ಒಡತಿ...

 

ಇದುವೇ

ಈ ಜಗದ

ಸುಂದರ

ಸಂಸಾರ!

**

ಹಾಯ್...

ವಾಹನ

ಚಾಲಕರೇ

ಚಲಿಸುವಾಗ

ಎದುರು ನೋಡಿ

ಮುಖವನೇಕೆ

ಗಂಟಿಕ್ಕುವಿರಿ?

ಪರಸ್ಪರ

ಹಾಯುವಾಗ

'ಹಾಯ್' 

ಎಂದು ಬಿಡಿ...

ಉರುಳಿದರು

ಅರುಳುವ

ಮುಖವ

ಕಾಣ್ಬಿರಿ!

***

ಜೀವನ ಲೆಕ್ಕಾಚಾರ

ಈ ಜೀವನವೆಂದರೆ-

ಸ್ಥಾವರ

ಭಾವಗಳ

ಭಾಗಾಕಾರ

ಗುಣಿತವಿದೆ

ಕೂಡು-ಕಳೆಯಿದೆ

ಆದರೆ...

ಇವುಗಳೆಲ್ಲದರ

ಮೊತ್ತ ಮಾತ್ರ

ಪರಮ ಶೂನ್ಯವೇ!

***

ದೂರದ ಬೆಟ್ಟ

ಓ ಬೆಟ್ಟವೇ

ನೀನೆನ್ನ ಬಳಿ

ಬರದಿರು;

ನಿನ್ನಯ

ನಿಜರೂಪದ

ದರ್ಶನವಾದೀತು!

 

ಕಾಡು ಮೃಗಗಳು

ಎನ್ನ ಮೇಲೆ

ಧಾಳಿ ಮಾಡಿಯಾವು;

ಗಿಡ ಗಂಟಿ

ಮುಳ್ಳುಗಳೆನ್ನ

ಚುಚ್ಚಿಯಾವು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್