ಇನ್ನು ಹುಟ್ಟದ ನನ್ನ ಮಗಳು...
ಕವನ
ನನ್ನ ಮಗಳು ಇನ್ನು ಹುಟ್ಟಿಲ್ಲ.
ನನ್ನ ಮಗಳು ನನ್ನಲಿಯೇ ಇದ್ದಾಳೆ.
ನನ್ನ ಮಗಳು ನನ್ನ ಕಾಡುತ್ತಾಳೆ.
ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...
ನನ್ನ ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್...
-ರೇವನ್
ಆಗಲೇ ಅವಳ ಆಟ ಶುರುವಾಗಿದೆ.
ಹಾಗಂತ ನನ್ನವಳು ಗರ್ಭಿಣಿ ಅಂತ
ಭಾವಿಸಬೇಡಿ. ನನ್ನ ಮಗಳು ಇನ್ನು
ನನ್ನಲಿಯೇ ಇದ್ದಾಳೆ. ಅಮ್ಮನ ಸೇರುವ
ಕಾತರದಲ್ಲಿ ಕಾಯುತ್ತಿದ್ದಾಳೆ...
ನನ್ನ ಮಗಳು ನನ್ನಲಿಯೇ ಇದ್ದಾಳೆ.
ಇಲ್ಲ...ಸಲ್ಲದ ಆಸೆ ಹುಟ್ಟುಸುತ್ತಿದ್ದಾಳೆ.
ಹೋದಲ್ಲಿ. ಬಂದಲ್ಲಿ ಅದು ಬೇಕು.
ಹೋದಲ್ಲಿ. ಬಂದಲ್ಲಿ ಅದು ಬೇಕು.
ಇದು ಬೇಕು ಅಂತ ನನಗೆ ಕೊಡಿಸುವ
ಆಸೆ ಹೆಚ್ಚಿಸುತ್ತಿದ್ದಾಳೆ...
ಆಸೆ ಹೆಚ್ಚಿಸುತ್ತಿದ್ದಾಳೆ...
ನನ್ನ ಮಗಳು ನನ್ನ ಕಾಡುತ್ತಾಳೆ.
ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...
ನನ್ನ ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್...
-ರೇವನ್
Comments
ಉ: ಇನ್ನು ಹುಟ್ಟದ ನನ್ನ ಮಗಳು...
ಉ: ಇನ್ನು ಹುಟ್ಟದ ನನ್ನ ಮಗಳು...