ಇನ್ನೂ ಬರಬಾರದೇ..... ?
ಕವನ
ಕರೆಯೇ ಕೋಗಿಲೆ
ನನ್ನ ಇನಿಯನ.......
ಮೊರೆಇಡುತಿದ್ದರು ....ನಾ...
ಮುನಿಸಿಕೊಂಡಿರುವನಾ.....
ಮನದ ಮಡಿಕೆಯಲಿ
ಭಾವನೆಗಳ ಮಜ್ಜಿಗೆಯ
ಕಡೆದವನನ.......
ತೇಲಿ ಬಂದ
ಒಲುಮೆಯ ಬೆಣ್ಣೆಯ
ಕದ್ದವನನ.......
ಕಳ್ಳ ಕೃಷ್ಣನಾ.......
ಸೂರ್ಯನು ಯಮುನೆಯ
ಕೆನ್ನೆಯ ಹಿಂಡಿ
ಕೆಂಪಾಗಿಸಿದಂತೆ.. .....ನಾ.....
ಅವನ ನೆರಳ ಸೋಕಿ
ಕೆಂಪಾಗಿರುವೆನಾ. .....?
ದಿಟ್ಟಿಯೋಳು ನನ್ನನು
ಮುಟ್ತುವನ.....
ಮುಟ್ಟದೆಯೇ....
ಮುಂಗುರುಳನು ನೇವರಿಸುವನ......
ಮನವು ಬರಿದಾಗಿದೆ.....
ಜಾರಿದ ಕಣ್ಣ ಬಿಂದುವು
ಕೆನ್ನೆಯ ಮೇಲೆ
ಗೆರೆ ಬರೆದಾಗಿದೆ......
ಹೃದಯದ ಒಳಗೆ
ಬರೆ...ತಾಗಿದೆ
ಕಣ ಕಣದಲ್ಲಿ
ನೀನು ಬೆರೆತಾಗಿದೆ
ಇನ್ನೂ ಬರಬಾರದೇ..... ?
Comments
ಉ: ಇನ್ನೂ ಬರಬಾರದೇ..... ?
In reply to ಉ: ಇನ್ನೂ ಬರಬಾರದೇ..... ? by kamath_kumble
ಉ: ಇನ್ನೂ ಬರಬಾರದೇ..... ?