ಇನ್ನೂ ಸ್ವಲ್ಪ ಹನಿಗಳು
ಕವನ
ತಿನ್ನುವುದನ್ನ
ಕೊಬ್ಬದು ಬೇಕೆಯಿಂದು
ಓ ಮೈ ಶುಗರ್ !
ಒಂಟಿತನವು
ಬೇಸರ ದುಮ್ಮಾನವು
ತಾಳಿ ಕಟ್ಟಿರಿ !
ಚಿಪ್ಪು ಜೊತೆಗೆ
ಮುತ್ತಿನ ಚಿಪ್ಪಿನಂತೆಯೇ
ಸಿಮ್ ಚಿಪ್ಪೊಂದಿದೆ !
ಕರಿ ನೆರಳು
ನನ್ನನ್ನೇ ನೋಡಿತಿಂದು
ಹಲ್ಲು ಕಿಸಿದು !
ಕತ್ತಲಿನಲ್ಲೇ
ದೇಶವು ಬೆಳಗಿತು
ಕೋಟಿ ಕೋಟೆಯು !
ಪ್ರಪಂಚದಲ್ಲಿ
ಧರ್ಮಕ್ಕೆ ಬೈಸಿಕೊಂಡ
ಧರ್ಮವೇ ಹಿಂದೂ !
ಪ್ರಪಂಚದಲ್ಲಿ
ಎಲ್ಲರನ್ನೂ ತಬ್ಬಿದ
ದೇಶ ಭಾರತ !
ದೇಶದೊಳಗೆ
ಭಾವನಾತ್ಮಕ ರಾಜ್ಯ
ಕರ್ನಾಟಕವು !
ಮನದೊಳಗೆ
ನೀನು ಸವಿಯನಿಡು
ಪ್ರೇಮಿಯಾಗುವೆ !
ತಪ್ಪುಗಳಲ್ಲೂ
ಹೆಜ್ಜೆಗಳಿರುತ್ತದೆ
ಅರಿಯಬೇಕು !
ಸಿನಿಮಾಗಳು
ಮನುಷ್ಯ ಜೀವನದ
ದಲ್ಲಾಳಿಗಳು !
ಘರ್ಜನೆಯೆಂದೂ
ಹುಲಿಯಂತಿರಲಯ್ಯಾ
ಇಲಿಯಂತಲ್ಲ !
ಮುತ್ತುಗಳನ್ನು
ಮಾರಬೇಡ ನೀಯೆಂದೂ
ಪ್ರೀತಿ ಸರಕೇ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್