ಇನ್ನೆಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಭಾರತ ಸಮಾಜಕ್ಕೆ ಇದೆಯೋ?

ಇನ್ನೆಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಭಾರತ ಸಮಾಜಕ್ಕೆ ಇದೆಯೋ?

ಘಟನೆ-1

ಅದು 1927 ರಿಂದ 1932 ರ ವರೆಗಿನ ಕಾಲಾವಧಿ ಆ ವೇಳೆಗಾಗಲೇ ತಮ್ಮ ಬಹುಪಾಲು ವಿಧ್ಯಾಭ್ಯಾಸ ಮುಗಿಸಿ ಮೂಕ  ನಾಯಕ, ಬಹಿಷ್ಕೃತ ಭಾರತ, ಪತ್ರಿಕೆಗಳನ್ನು ಆರಂಬಿಸಿದ್ದ ಅಂಬೆಡ್ಕರ್, ಕಾಂಗ್ರೇಸ್ಸಿನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ಮೌಲಾನ ಅಬ್ದುಲ್ರವರ ಅಸ್ಪೃಷ್ಯರನ್ನು ಹಿಂದೂ ಮತ್ತು ಮುಸಲ್ಮಾರ ನಡುವೆ ಸಮಾಜವಾಗಿ ಹಂಚಿಬಿಡಿ ಎಂಬ ಹೇಳಿಕೆಗೆ ತಿರ್ವ ವಿರೋಧ ವ್ಯಕ್ತಪಡಿಸಿ ದೇಶದ ದಲಿತರ ಸಮಸ್ಯಗಳನ್ನು ಆಗಿನ ಬ್ರೀಟೀಷ್ ಸಕರ್ಾರದ ಮುಂದೆ ಇಡಲು ಬಹಿಷ್ಕುತ ಹಿತಕಾರಿಣಿ ಸಭಾ ಎಂಬ ಸಂಸ್ಥೆ ಸ್ಥಾಪಿಸಿ ಆ ಮೂಲಕ, ಅಸ್ಪೃಷ್ಯತೆ ಮತ್ತು ಜಾತಿಯನ್ನು ನಮ್ಮ ಸಮಾಜದಿಂದ ಕಿತ್ತೋಗೆಯಬೇಕೆಂಬ ಅಹಿಂಸಾತ್ಮಕ ಅಂದೋಳನವನ್ನು ರಚಿಸುತ್ತಿದ್ದರು ಆದರ ಮೊದಲ ಭಾಗವಾಗಿ ಮಹಾರಾಷ್ಟ್ರದ ಮಹಡ್ನ ಮುನ್ಸಿಪಾಲಿಟಿ 1923 ರಲ್ಲಿಯೇ ಒಂದು ನಿರ್ಣಯ ಮಾಡಿ ಅಲ್ಲಿನ ಚೌಡಾರ್ ಕೆರೆಯ ನೀರನ್ನು ದಲಿತರ ಬಳಕೆಗೆ ಅನುಮೊದಿಸಿದ್ದರೂ ಸಹ ಸವಣರ್ಿಯರ ಭಯದಿಂದ ಅಸ್ಪೃಷ್ಯರು ಅದನ್ನು ಬಳಸುತ್ತಿರಲಿಲ್ಲ ಇದರಿಂದ ನೊಂದ ಅಂಬೆಡ್ಕರ್ ಸಾವಿರಾರು ದಲಿತರೊಂದಿಗೆ ಚೌಡಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ದಲಿತರಿಗೆ ಕೆರೆ ನೀರನ್ನು ಬಳಸಲು ಅನುವು ಮಾಡಿಕೊಡುತ್ತಾರೆ ಆದರೆ ಇದರಿಂದ ಕೋಪಗೊಂಡ ಸವಣರ್ಿಯರು ಈ ಕೆರೆ ನೀರು ಚಳುವಳಿಗೆ ಆಗಮಿಸಿದ ಜನರನ್ನು ಧಳಿಸುವ ಮೂಲಕ ಹಿಂಸಾತ್ಮಕವಾಗಿ ಪ್ರತಿಕ್ರೀಯಿಸುತ್ತಾರೆ ಮತ್ತು ಅಸ್ಪೃಷ್ಯರು ಮುಟ್ಟಿ ಕೆರೆ ಅಪವಿತ್ರವಾಗಿದೆಯೆಂದು ಭ್ರಾಹ್ಮಣ ವಿಧಿ-ವಿಧಾನಗಳ ಮೂಲಕ ಶುದ್ಧಿಕರಿಸುತ್ತಾರೆ ಅಲ್ಲದೆ ಈ ಕೆರೆ ಪರಂಪರಾಗತವಾಗಿ ಸವಣರ್ಿಯರಿಗೆ ಸೇರಿದೆ ಎಂಬ ಅಂಶದ ಮೇಲೆ ನ್ಯಾಯಲಯದ ಮೆಟ್ಟಿಲು ಹತ್ತುತ್ತಾರೆ. ಮುಂದೆ ಅನೇಕ ವರ್ಷಗಳ ನಂತರ ನ್ಯಾಯಲಯ ಕೆಳವರ್ಗದ ಪರವಾಗಿ ತಿಪರ್ುನಿಡುತ್ತದೆ ಅದು ಬೇರೆಯದೇ ವಿಚಾರ

ಘಟನೆ-2

ಅದು ಐತಿಹಾಸಿಕ ನಾಸಿಕ್ನ ಕಳಾರಾಮನ ದೇವಸ್ಥಾನ ಪ್ರವೇಶ ಹೋರಾಟದ ಸಂಧರ್ಭ ಕಳಾರಾಮನ ದೇವಸ್ಥಾನ ಪ್ರವೇಶಕ್ಕೆ ಎಲ್ಲಾ ಸಿದ್ಧತೆಗಳಾಗಿವೆ ತಾವು ಅದರ ನಾಯಕತ್ವ ವಹಿಸಬೇಕು ಎಂದು ಅಂಬೇಡ್ಕರ್ ಅವರನ್ನು ಅವರ ಅನುಯಾಯಿಗಳು ಕೇಳಿಕೊಳ್ಳುತ್ತಾರೆ. ಆಗ ಅಂಬೇಡ್ಕರ್ ಅಸ್ಪೃಷ್ಯರಿಗೆ ಸಮಾಜದಲ್ಲಿ ಸಮಾಜಿಕ ಮತ್ತು ರಾಜಕೀಯ ಸ್ಥಾನ-ಮಾನ ಗಳಿಸಿಕೊಳ್ಳುವುದು ದೇವಸ್ಥಾನ ಪ್ರವೇಶಕ್ಕಿಂತ ಮುಖ್ಯವಾದುದು ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅಲ್ಲದೇ ಎಲ್ಲಾ ಹೋರಾಟಗಳನ್ನು ಕಾನೂನಿನ ಮತ್ತು ಅಹಿಂಸಾತ್ಮಕ ಸತ್ಯಗ್ರಹದ ಪ್ರಕಾರವೇ ನಡೆಸುತ್ತಿದ್ದ ಅಂಬೇಡ್ಕರ್ ಇಲ್ಲಿಯೂ ಕಳಾರಾಮನ ದೇವಸ್ಥಾನ ಪ್ರವೇಶದ ವಿಷಯವಾಗಿ ದೇವಾಲಯದ ಟ್ರಷ್ಟಿಗಳಿಗೆ ನೋಟಿಸ್ ಕಳುಹಿಸುತ್ತಾರೆ. ಅದಕ್ಕೆ ಪ್ರತಿಯಾಗಿ ದೇವಾಲಯದ ಪುರೋಹಿತರುಗಳು ದೇವಾಲಯದ ಟ್ರಷ್ಟಿಗಳು (ನ್ಯಾಸಿಗಳು) ದೇವಾಲಯದ ಮಾಲಿಕರಲ್ಲ ಅವರಿಗೆ ದೇವಾಲಯದ ಪರಂಪರೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಅಧಿಕಾರ ಇಲ್ಲ ಬದಲಾಗಿ ಪೂರ್ವಜರು ಈ ಮಂದಿರ ಸ್ಥಾಪಿಸಿದಾಗಲೇ ನಮ್ಮ ಹಿರಿಯರನ್ನು (ಬ್ರಾಹ್ಮಣರನ್ನು) ದೇವಾಲಯದ ಅರ್ಚಕರಾಗಿ ನೇಮಿಸಿದ್ಧರು ಆ ಪರಂಪರೆಯನ್ನು ನಾವು ವಂಶಪಾರಂಪರ್ಯವಾಗಿ ಪ್ರಾಮಾಣಿಕವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಆದ್ದರಿಂದ ಇಲ್ಲಿನ ಅರ್ಚಕರೇ ದೇವಾಲಯದ ನಿಯಮಗಳ ಕುರಿತಂತೆ ಅಂತಿಮ ನಿರ್ಣಯ ಕೈಗೊಳ್ಳುವ ಶಕ್ತಿಯಾಗಿರುತ್ತಾರೆ. ಒಂದು ವೇಳೆ ದೇವಾಲಯದ ಟ್ರಷ್ಟಿಗಳು ಅಸ್ಪೃಷ್ಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ದೇವಾಲಯವನ್ನು ಅಪವಿತ್ರಗೊಳಿಸಲು ಮುಂದಾದರೆ ನಾವು ಅದನ್ನು ತಿರ್ವವಾಗಿ ವಿರೋಧಿಸುತ್ತೇವೆ ಎಕೆಂದರೆ ಇದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಶ್ನೆ ಎಂದು ಪತ್ರಿಕೆಯ ಮೂಲಕ ಅಸ್ಪೃಷ್ಯರಿಗೆ ಉತ್ತರ ನೀಡುತ್ತಾರೆ.

(ಈ ಎರಡೂ ಘಟನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿ ಇರುವವರು ಮಾಹಿತಿ ಹಂಚಿಕೊಂಡರೆ ಉತ್ತಮ)

ಘಟನೆ-3

ಮೇಲಿನ ಎರಡು ಘಟನೆಗಳು ನಡೆದು ಸಮಾರು 75 ವರ್ಷಗಳ ನಂತರ ಕನರ್ಾಟಕದ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಡೆಸ್ನಾನದ(ಎಂಜಲೆಲೆಯ ಮೇಲೆ ಭಕ್ತರ ಹೋರಳಾಟ) ವಿರುದ್ಧವಾಗಿ ನಾರೀಕ ಸಮಾಜ ಪ್ರತಿಭಟನೆಯ ಮೂಲಕ ಪ್ರತಿಕ್ರೀಯಿಸುತ್ತದೆ, ಈ ಅನಾಗರೀಕ ನಡವಳಿಕೆಯನ್ನು ನಿಷೇದಿಸುವಂತೆ ಸಕರ್ಾರವನ್ನು ಒತ್ತಾಯಿಸಿ, ಮಡೆ ಮಡೆ ಸ್ನಾನ ವಿರೋಧಿಸಿದ ಪ್ರಗತಿಪರರನ್ನು ದೇವಾಲಯದ ಎದುರೇ ಸಾರ್ವಜನಿಕವಾಗಿ ಧಳಿಸಲಾಗಿದೆ. ಹಾಗೆ ಧಳಿಸಿದವರನ್ನು ಅರೋಪಿಗಳಲ್ಲ ಬದಲಾಗಿ ಹಿಂದೂ ಸಂಸ್ಕೃತಿ ಉಳಿಸಲು ಹೋರಾಡಿದ ಸೇನಾನಿಗಳು ಎಂದು ಗೌರವಿಸಲಾಗುತ್ತದೆ. ಈ ಘಟನೆಗೆ ಪ್ರತಿಕ್ರೀಯಿಸಿದ ರಾಜ್ಯದ ಘನ ಸಕರ್ಾರವು ಶತಮಾನಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಶಾನದಲ್ಲಿ ಈ ಪದ್ದತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ ಇದನ್ನು ಬಲಾತ್ಕಾರವಾಗಿ ನಿಷೇಧಿಸಲು ಸಾಧ್ಯವಾಗಲಾರದು ಅಗತ್ಯ ಬಿದ್ದರೆ ಪೇಜಾವರ ಮಠದ ವಿಶ್ವೇಶತಿರ್ಥ ಸ್ವಾಮಿಜಿ, ಧರ್ಮಸ್ಥಳದ ಧಮರ್ಾರಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಆ ಭಾಗದ ಪ್ರಮುಖರ (ಇ ಭಾಗದ ಪ್ರಮುಖರು ಯಾರು ಎಂದು ಸಕರ್ಾರವೇ ಪ್ರಕಟಿಸಬೇಕು) ಜೋತೆ ಚಚರ್ಿಸಿ ಈ ಪದ್ದತಿಯನ್ನು ಅನುಸರಿಸುತ್ತಿರುವವರ ಮನವೂಲಿಸಲು ಸಕರ್ಾರ ಪ್ರಯತ್ನ ನಡೆಸಲಿದೆ, ಎಂದು ಹೇಳುವ ಮೂಲಕ ಪರೋಕ್ಷವಾಗಿ ಒಂದು ಸಮಾಜಿಕ ಮೌಢ್ಯವನ್ನು ಸಮಥರ್ಿಸುತ್ತದೆ. ಇನ್ನು ಸಕರ್ಾರ ಚಚರ್ಿಸಲು ಹೊರಟಿರುವ ಪ್ರಮುಖರಲ್ಲಿ ಒಬ್ಬರಾದ ಡಾ. ವೀರೇಂದ್ರ ಹೆಗ್ಗಡೆ ಅವರು ಮಡೆ ಮಡೆ ಸ್ನಾನ ಎಂಬುದು ಆ ಊರಿನ ಸಂಪ್ರದಾಯ ಅದು ಬೇಕು-ಬೇಡ ಎನ್ನಲು ನಾವ್ಯರು? ಎನ್ನುತ್ತಾರೆ. ಇನ್ನೂರ್ವ ಪ್ರಮುಖರಾದ ಪೇಜಾವರ ಶ್ರಿಗಳು ಕೆಲ ದಿನ ಮೌನರ್ವತ ಆಚರಿಸಿ ನಂತರ ಮಡೆಸ್ನಾನ ನಿಷೇದಕ್ಕೆ ನನ್ನ ಅಭ್ಯಂತರವೇನು ಇಲ್ಲ ಎಕೆಂದರೆ ಅದರ ನಿಷೇದದಿಂದ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ ಎಂಬ ಹೇಳಿಕೆ ನಿಡುತ್ತಿದ್ದಾರೆ. ಇನ್ನು ನಾಡಿನ ಕೆಲವು ಬುದ್ಧಿಜೀವಿಗಳು ಮಡೆಸ್ನಾನ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಆಚರಣೆ ಭಾರತದ ಸಂದರ್ಭದಲ್ಲಿ ಆಚರಣೆಗಳಿಗೆ ಕಾರಣವೇ ಇಲ್ಲ, ಅದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ವಿವರಿಸುತ್ತಿದ್ದಾರೆ.

ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ದಲಿತ ಹೋರಾಟದ ಇತಿಹಾಸದಲ್ಲಿ ನಮೂದಾಗಿರುವ ಈ ಎರಡು ಘಟನಾವಳಿಗಳು ಮತ್ತು ನಂತರ 75 ವರ್ಷಗಳ ತರುವಾಯ ನಡೆದಿರುವ ಮಡೆ ಮಡೆ ಸ್ನಾನದ ಕುರಿತಾದ ಚಚರ್ೆ ಇವೆರಡರಲ್ಲಿ ಹಲವಾರು ಸಾಮ್ಯತೆಗಳು ಇರುವುದನ್ನು ಗುರುತಿಸಬಹುದಾಗಿದೆ. ಎರಡೂ ಘಟನೆಗಳಲ್ಲಿ ಬ್ರಾಹ್ಮಣಶಾಹಿ ಪರವಾದ ಸಮುದಾಯ ಪರಂಪರೆ, ಆಚರಣೆ ವಂಶಪಾರಂಪರ್ಯ ಇತ್ಯಾದಿಗಳ ಹೆಸರಿನಲ್ಲಿ ಮೌಡ್ಯವನ್ನು ಸಮಾಜದ ಮೇಲೆ ಹೇರುತ್ತಿವೆ. ದುರಂತವೆಂದರೆ ನಮ್ಮನ್ನು ಆಳುವ ಪ್ರಭುತ್ವವು ಪರೋಕ್ಷವಾಗಿ ಇದನ್ನೆ ಸಮಥರ್ಿಸುತ್ತಿದೆ ಇವೆಲ್ಲವನ್ನು ನೋಡುತ್ತಿದ್ದರೆ 21ನೇ ಶತಮಾನದ ಇಂದಿನ ಭಾರತದ ಸಮಾಜಕ್ಕೂ ಸ್ವಾತಂತ್ರ್ಯ ಪೂರ್ವದಲ್ಲಿ ಡಾ. ಅಂಬೆಡ್ಕರ್ ಸಮಾಜಿಕ ಸಮಾನತೆಗಾಗಿ ಹೊರಾಡಿದ ಭಾರತ ಸಮಾಜಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ನಮ್ಮ ಸಮಾಜದಲ್ಲಿ ಜನರ ವೇಷ ಮಾತು ಬದಲಾಗಿವೆಯೇ ಹೊರತು ಅಲೋಚನೆಗಳಲ್ಲ! ಅಂದು ಭ್ರಾಹ್ಮಣಶಾಹಿ ವರ್ಗ ಡಾ. ಅಂಬೆಡ್ಕರ್ ಅವರ ಹೋರಾಟದ ವಿರುದ್ಧ ವತರ್ಿಸಿದ ರೀತಿಯಲ್ಲಿಯೇ ಇಂದು ನವ ಬ್ರಾಹ್ಮಣಶಾಹಿ ಮಡೆಸ್ನಾನದ ವಿಚಾರದಲ್ಲಿ ವತರ್ಿಸುತ್ತಿದೆ ನಮ್ಮ ನಡುವೆ ಇರುವ ಇತಿಹಾಸ(ಸವಣರ್ಿಯರು ಮತ್ತು ಅಸ್ಪೃಷ್ಯರು)ಮತ್ತು ವರ್ತಮಾನದ (ಮಡೆಸ್ನಾನ ಪರ ಮತ್ತು ವಿರೋಧಿಗಳು) ಚಚರ್ೆಗಳಲ್ಲಿ ಕಾಲದ ವ್ಯತ್ಯಾಸವನ್ನು ಹೊರತುಪಡಿಸಿದರೆ ಬೇರೆ ಯಾವ ವ್ಯತ್ಯಾಸಗಳು ಕಂಡುಬರುವುದಿಲ್ಲ. ವಾದಿಸುತ್ತಿರುವವರ ದೇಹಮಾತ್ರ ಬದಲಾಗಿದೆ ಆದರೆ ಅಲೋಚನೆಗಳು ಹಾಗೆಯೇ ಇವೆ. ಹಾಗೆ ನೊಡುವುದಾದರೆ ಮಾನವ ಇತಿಹಾಸದಿಂದ ಪಾಠ ಕಲಿಯಬೇಕಿದೆ ಆದರೆ ಭಾರತದ ಸಂಧರ್ಭದಲ್ಲಿ ನಾವು ಇತಿಹಾಸವನ್ನೆ ವರ್ತಮಾನ ಮಾಡಿಕೊಂಡಿದ್ದೇವೆ ಆ ನೆಲೆಯಲ್ಲಿಯೇ ನಮ್ಮ ಎಲ್ಲಾ ಚಚರ್ೆಗಳು, ಹೋರಾಟಗಳು ನಡೆಯುತ್ತಿವೆ ಇದು ನಿಜವಾದ ದುರಂತ ಈ ಪರಿಸ್ಥಿತಿ ಬದಲಾಗಲು ಇನ್ನೇಷ್ಟು ಮೂಕ  ನಾಯಕರ ಅಗತ್ಯ ಈ ಬಹಿಷ್ಕೃತ ಭಾರತ ಸಮಾಜಕ್ಕೆ ಇದೆಯೋ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

 ಅವಧಿಯಲ್ಲಿ ಪ್ರಕಟಿತ ಚಿತ್ರ ಕೃಪೆ ಅವಧಿ ಬ್ಲಾಗ್  -   http://avadhimag.com/?p=43002

Comments