ಇನ್ನೊಂದುಬಾರಿ...!! - ಪ್ರಸೂನ ರವೀಂದ್ರನ್ ತೆಲುಗು ಕವನಕ್ಕೆ ಕನ್ನಡಾನುವಾದ

ಇನ್ನೊಂದುಬಾರಿ...!! - ಪ್ರಸೂನ ರವೀಂದ್ರನ್ ತೆಲುಗು ಕವನಕ್ಕೆ ಕನ್ನಡಾನುವಾದ

ಕವನ

ಹನಿಯಾಗಿ ಉದಿರಿಹೋದ ಮೋಡವನ್ನು

ಆಕಾಶ ಮರಳಿ ಪಡದಂತೇ


ಕಳೆದುಕೊಂಡ ಆತ್ಮೀಯರನ್ನು

ಮನುಷ್ಯ ಮರುಪಡೆಯುವಂತಿದ್ದರೇ

ಎಷ್ಟು ಚೆನ್ನಾಗಿದ್ದೀತು!


ಮರೆತುಹೋದ ಹಾದಿಯಲ್ಲಿ

ಮತ್ತೇ ನದಿ ಹರಿದುಬಂದಂತೇ


ಕಳೆದುಹೋದ ಕಾಲದ ತಗ್ಗಿನಲ್ಲಿ

ವರ್ತಮಾನವನ್ನು ಸೇರಿಸುವದಾದರೋ

ಎಷ್ಟು ಛಂದ!


ಈ ದಡ

ಇಷ್ಟಬಿದ್ದೇ ಸೇರಿರುವ ಗಮ್ಯವಾಗಿದ್ದರೂ

ಅಸಂತೃಪ್ತಿಯಿಂದ ಕೈಬಿಟ್ಟು ಹೋಗುತ್ತಿರುವ

ಪ್ರತಿ ಕ್ಷಣವೂ

ನಾಚುವಹಾಗೆ


ಬಾಲ್ಯವನ್ನು ತೋರಿಸುವೆನೋ!

Origina Source: మరొక్కసారి ..


Comments